ಹುಡುಗಿಯನ್ನು ಕೆಣಕಿದವನ ಬೆತ್ತಲು ಮಾಡಿ ಬಗ್ಗುಬಡಿದ ಜನ

By: ಕುಮಾರಸ್ವಾಮಿ
Subscribe to Oneindia Kannada

ತುಮಕೂರು, ಜನವರಿ 18: ದಲಿತ ಹುಡುಗ ಹುಡುಗಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ತೊಟದ ಮನೆಯಲ್ಲಿ ಬೆತ್ತಲಾಗಿಸಿ, ಥಳಿಸಿ, ಚಪ್ಪಲಿ ಹಾರಹಾಕಿ ಹುಡಿಗಿಯರನ್ನು ಕೆಣಕಿದರೆ ಇದೇ ಗತಿ ಎಂದು ಸ್ಲೇಟಿನಲ್ಲಿ ಬರೆಸಿರುವ ಅಮಾನುಷ ಘಟನೆ ಗುಬ್ಬಿಯಲ್ಲಿ ನಡೆದಿದೆ.

ಗುಬ್ಬಿಯ ಸುಭಾಷ್ ನಗರದ ನಿವಾಸಿ ಅಭಿಷೇಕ್(20) ಎಂಬ ದಲಿತ ಹುಡುಗ ಇದೇ ಪಟ್ಟಣದ ಜೆ.ಡಿ.ಪ್ರಕಾಶ್ ಎಂಬವವರ ಮಗಳನ್ನು ಚುಡಾಯಿಸಿದ್ದ. ಅನೇಕ ಬಾರಿ ಆತ ಹುಡುಗಿಯೊಂದಿಗೆ ಮಾತನಾಡಿರುವುದನ್ನು ನೋಡಿದ ಹುಡುಗಿಯ ಆಕೆಯಿಂದಲೇ ಫೋನ್ ಮಾಡಿಸಿ ತೋಟದ ಮನೆಗೆ ಬರುವಂತೆ ಹೇಳಿ ಮಂಗಳವಾರ ಸಂಜೆ ಕರೆಸಿಕೊಂಡಿದ್ದಾರೆ.[ಉತ್ತರ ಪ್ರದೇಶದ ದಲಿತ ಯುವಕ ಊಟಕ್ಕಿಲ್ಲದೆ ಸಾವು]

A boy beaten brutally alleged for jeering a dalit girl in Gubbi

ಯುವತಿಯ ತಂದೆ ತೋಟ ಮನೆಯಲ್ಲಿ ಅಭಿಷೇಕ್ ಅನ್ನು ಬೆತ್ತಲಾಗಿಸಿ ಮನಬಂದಂತೆ ಥಳಿಸಿ, ಚಪ್ಪಲಿ ಹಾರ ಹಾಕಿ, ಆತನಿಂದಲೇ 'ಹುಡುಗಿಯರನ್ನು ಕೆಣಕಿದರೆ ಹುಷಾರ್' ಎಂದು ಸ್ಲೇಟಿನಲ್ಲಿ ಬರೆಸಿ ಕೊರಳಿಗೆ ತಗಲು ಹಾಕಿ ಚಿತ್ರ ತೆಗೆದಿರುವ ಅಮಾನುಷ ಕೃತ್ಯವೆಸಗಿದ್ದಾರೆ. ಅಲ್ಲದೆ ಅತನ ವಿರುದ್ಧ ಅವಾಚ್ಯ ಶಬ್ಧಗಳಿಂದ ಬೈದಿದ್ದು, ಆ ವೇಳೆಯಲ್ಲಿ ಆತ ಅಳುತ್ತಾ ಯುವತಿಯ ತಂದೆಗೆ ಬಿಟ್ಟು ಬಿಡುವಂತೆ ಬೇಡಿಕೊಂಡಿದ್ದಾನೆ.[ವಿಡಿಯೋ: ಹುಡುಗಿಯನ್ನು ಕೆಣಕಿದವನ ಬೆತ್ತಲು ಮಾಡಿ ಬಡಿದ ಜನ]

ಇನ್ನು ಈ ಸಂಬಂಧ ಅಭಿಷೇಕ್ ಪೋಷಕರು ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಒಬ್ಬ ದಲಿತ ನನ್ನು ವಿವಸ್ತ್ರಗೊಳಿಸಿ ಅಮಾನುಷ ವರ್ತನೆ ಮೆರೆದವರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

A boy beaten brutally alleged for jeering a dalit girl in Gubbi

ದೇಶವು ಆಧುನಿಕವಾಗಿ ಮುಂದುವರೆಯುತ್ತಿದ್ದರೂ ಜಾತಿ, ಧರ್ಮದ ಆಧಾರದ ಮೇಲೆ ದಲಿತರು, ಅಸ್ಪೃಶ್ಯರ ಮೇಲೆ ಪ್ರಹಾರ ನಡೆಯುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನದಂತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A boy beaten brutally alleged for jeering a dalit girl in Gubbi Taluk, Tumkur district.
Please Wait while comments are loading...