ತುಮಕೂರು, ಗುಬ್ಬಿ, ತಿಪಟೂರಿನಲ್ಲಿ 3 ನೇ ದಿನದ ಪರಿವರ್ತನಾ ಯಾತ್ರೆ

Posted By:
Subscribe to Oneindia Kannada

ತುಮಕೂರು, ನವೆಂಬರ್ 04: ಕರ್ನಾಟಕ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ ಇಂದು(ನ.4) ಮೂರನೇ ದಿನಕ್ಕೆ ಕಾಲಿಟ್ಟಿದೆ. 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷ ಆರಂಭಿಸಿರುವ 75 ದಿನಗಳ ಪರಿವರ್ತನಾ ಯಾತ್ರೆ ಇಂದು ತುಮಕೂರು ನಗರ, ಗುಬ್ಬಿ ಮತ್ತು ತಿಪಟೂರುಗಳಲ್ಲಿ ಸಾಗಲಿದೆ.

2ನೇ ದಿನಕ್ಕೆ ಕಾಲಿಟ್ಟ ಪರಿವರ್ತನಾ ಯಾತ್ರೆ: ತುರುವೆಕೆರೆಯಲ್ಲಿ ಬಿಜೆಪಿ ನಾಯಕರು

ಬೆಳಗ್ಗೆ 11 ಗಂಟೆಗೆ ತುಮಕೂರು ನಗರದಲ್ಲಿ ಸಭೆ ನಡೆಯಲಿದ್ದು, ಜನತೆಯನ್ನುದ್ದೇಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮಾತನಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಗುಬ್ಬಿ ಮತ್ತು ಸಂಜೆ 6 ಗಂಟೆಗೆ ತಿಪಟೂರಿನಲ್ಲಿ ಬಹಿರಂಗ ಸಭೆ ನಡೆಯಲಿದೆ.

3rd day of Karnataka BJP Parivartana Rally: BJP leaders in Tumakuru

ನ.2 ರಿಂದ ಬೆಂಗಳೂರಿನಲ್ಲಿ ಆರಂಭವಾದ ಯಾತ್ರೆ ಜ.28, 2018 ರವರೆಗೆ ಮುಂದುವರಿಯಲಿದ್ದು, ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ನಯಕರು ಪರಿವರ್ತನಾ ಯಾತ್ರೆ ಕೈಗೊಳ್ಳಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Parivartana Rally by karnataka BJP is in Tumakuru district today. As 3rd day of Rally, state BJP president and former chief minister of Karnataka BS Yeddyurappa will adress people of Tumakuru city, Gubbi and Tipaturu.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ