ತುಮಕೂರಿನಲ್ಲಿ ಎಟಿಎಂ ಒಡೆದು ರೂ. 30 ಲಕ್ಷ ದರೋಡೆ

Posted By:
Subscribe to Oneindia Kannada

ತುಮಕೂರು, ಡಿಸೆಂಬರ್ 21: ಇಲ್ಲಿನ ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಎಸ್‌ಬಿಐ ಎಟಿಎಂ ಒಡೆದು 30 ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ.

ಹೆಚ್ಚುತ್ತಿರುವ ಎಟಿಎಂ ದರೋಡೆ ಪ್ರಕರಣ: ಕೇಂದ್ರದ ಮಹತ್ವದ ನಿರ್ಧಾರ

ಬುಧವಾರ ರಾತ್ರಿ ದರೋಡೆ ನಡೆದಿದ್ದು, ಬ್ಯಾಂಕಿನ ಒಳಗಡೆ ಎಟಿಎಂ ಇದ್ದು ಗೋಡೆ ಕೊರೆದು ದರೋಡೆಕೋರರು ಎಟಿಎಂ ಒಡೆದಿದ್ದಾರೆ. ಗುರುತು ಪತ್ತೆ ಸಿಗಬಾರೆಂದು ಅಲ್ಲಿದ್ದ ಸಿ.ಸಿ.ಟಿವಿ ಕ್ಯಾಮೆರಾ ಮತ್ತು ದೃಶ್ಯ ಸಂಗ್ರಹವಾಗುವ ಉಪಕರಣವನ್ನು ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

30 lakh robbery by breaking ATM

ಎಟಿಎಂಗೆ ಭದ್ರತಾ ಸಿಬ್ಬಂದಿ ಇರಲಿಲ್ಲ. ಬೆಳಿಗ್ಗೆ ಎಟಿಎಂಗೆ ಗ್ರಾಹಕರು ಹಣ ತೆಗೆದುಕೊಳ್ಳಲು ಬಂದಾಗ ವಿಷಯ ಗೊತ್ತಾಗಿದೆ. ಬಳಿಕ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ.

30 lakh robbery by breaking ATM

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ತುಮಕೂರು ನಗರ ಡಿವೈಎಸ್ಪಿ ಕೆ.ಎಸ್.ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳ ತಂಡವೂ ಪರಿಶೀಲನೆ ನಡೆಸಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Near Tumkur Hirehalli some robbers rob ATM by breaking it. Robbers robs 30 lakh rupees. There is no security to ATM. Police registers the case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ