ತುಮಕೂರಿನಲ್ಲಿ ವ್ಯಾನಿಟಿ ಬ್ಯಾಗಲ್ಲಿ ಸಿಕ್ಕಿದ್ದು 3.90 ಲಕ್ಷ ರುಪಾಯಿ

Posted By:
Subscribe to Oneindia Kannada

ತುಮಕೂರು, ನವೆಂಬರ್ 21: ಶಿರಾ ಗೇಟ್ ಬಳಿಯಿರುವ ಮನೆಯೊಂದರಲ್ಲಿ 3.90 ಲಕ್ಷ ಮೌಲ್ಯದ 2000, 100 ರುಪಾಯಿ ನೋಟುಗಳು ಪೊಲೀಸರಿಗೆ ಸಿಕ್ಕಿವೆ. ವ್ಯಾನಿಟಿ ಬ್ಯಾಗ್ ವೊಂದರಲ್ಲಿ 2000 ಮುಖಬೆಲೆಯ 75 ನೋಟು ಹಾಗೂ 100 ರುಪಾಯಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎರಡು ಬೇರೆ ಪ್ರಕರಣಗಳಲ್ಲಿ 2000, 100 ರುಪಾಯಿ ನೋಟುಗಳ ಒಟ್ಟು 15.90 ಲಕ್ಷ ರುಪಾಯಿಯನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ಎರಡೂ ಪ್ರಕರಣದಲ್ಲಿ ವಾರಸುದಾರರು ಪತ್ತೆಯಾಗಿಲ್ಲ. ಶಿರಾ ಗೇಟ್ ಪ್ರಕರಣದಲ್ಲಿ ಫಿರೋಜ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಆತ, ಪರಿಚಯದವರೊಬ್ಬರು ವ್ಯಾನಿಟಿ ಬ್ಯಾಗ್ ಕೊಟ್ಟು ಹೋದರು ಎಂದಷ್ಟೇ ತಿಳಿಸಿದ್ದಾನೆ.[ತುಮಕೂರಿನ ವಿಶೇಷ: ತಟ್ಟೆ ಇಡ್ಲಿ, ಚಿತ್ರಾನ್ನ, ಮುದ್ದೆ, ಚಪಾತಿ ಊಟ...]

Note

ಪರಿಚಯದವರು ತಾನೇ, ಹೆಸರು ಹೇಳಪ್ಪ ಅಂದರೆ, ಏನನ್ನೂ ಬಾಯಿಬಿಟ್ಟಿಲ್ಲ. ಅದರೆ ವ್ಯಾನಿಟಿ ಬ್ಯಾಗ್ ನಲ್ಲಿ ಮಾತ್ರ ನಿರ್ಮಲಾ ಎಂಬ ಹೆಸರಿನಲ್ಲೊಂದು ಗುರುತಿನ ಚೀಟಿ ಸಿಕ್ಕಿದೆ. ಇನ್ನೊಂದು ಪ್ರಕರಣದಲ್ಲಿ ಜಯನಗರ ಬಡಾವಣೆ ಮನೆಯೊಂದರಲ್ಲಿ 12 ಲಕ್ಷ ರುಪಾಯಿ ಪೊಲೀಸರಿಗೆ ದೊರೆತಿದೆ. ಆ ನಂತರ ರಾಘವೇಂದ್ರ, ಜುಬೇರ್ ಅನ್ನೋರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
3.90 lakh rupees found in Tumakuru Sira gate on Sunday. Owner not found by Police. In other case 12 lakh rupees seized in Jayanagar layout house and two arrested.
Please Wait while comments are loading...