ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಅನ್ನಭಾಗ್ಯ ಯೋಜನೆ ಯಡಿಯೂರಪ್ಪ ತಂದಿದ್ದು'

|
Google Oneindia Kannada News

ತುಮಕೂರು, ಏ. 27 : 'ಬಿ.ಎಸ್.ಯಡಿಯೂರಪ್ಪ ಅವರು ಅನ್ನಭಾಗ್ಯ ಯೋಜನೆ ತಂದ್ರು, ಅದರಿಂದ ನಮಗೆ ತಿಂಗಳು ಅಕ್ಕಿ ಸಿಗ್ತಾ ಇದೆ'. ಸಮಾಜ ಕಲ್ಯಾಣ ಸಚಿವ ಮತ್ತು ಮುಖ್ಯಮಂತ್ರಿಗಳ ಪರಮಾಪ್ತ ಎಚ್.ಆಂಜನೇಯ ಅವರಿಗೆ ಇಂದು ಮಹಿಳೆ ಕೊಟ್ಟ ಉತ್ತರ ಇದು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಸುಮಾರು ಎರಡು ವರ್ಷಗಳು ಕಳೆಯುತ್ತಾ ಬಂತು. ಸಿದ್ದರಾಮಯ್ಯ ಅವರು ತಮ್ಮ ಕನಸಿನ ಅನ್ನಭಾಗ್ಯ ಯೋಜನೆಯನ್ನು ಘೋಷಣೆ ಮಾಡಿ, ಅದು ಲಕ್ಷಾಂತರ ಜನರನ್ನು ತಲುಪುತ್ತಿದೆ. ಮೇ [1ರಿಂದ ಬಿಪಿಎಲ್ ಕುಟುಂಬಕ್ಕೆ ಉಚಿತವಾಗಿ 5 ಕೆಜಿ ಅಕ್ಕಿ]

Anna Bhagya

ಆದರೆ, ಅಕ್ಕಿ ಪಡೆಯುವ ಜನರ ಪಾಲಿಕೆ ಇನ್ನೂ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳು. ಅವರೇ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ಯಡಿಯೂರಪ್ಪ ಎಂದು ಮಹಿಳೆ ಹೇಳಿದ ಮಾತು ಕೇಳಿ ಸಚಿವರಿಗೂ ಒಂದು ಕ್ಷಣ ಆಶ್ಚರ್ಯವಾಯಿತು.

ಆಗಿದ್ದಿಷ್ಟು : ಸೋಮವಾರ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ತುಮಕೂರು ಜಿಲ್ಲೆಗೆ ಜಾತಿಗಣತಿ ಪ್ರಗತಿ ಪರಿಶೀಲನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರ ಮನೆಗೆ ತೆರಳಿ ಗಣತಿದಾರರ ಜೊತೆ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ 'ನಿಮಗೆ ತಿಂಗಳು ಅಕ್ಕಿ ಕೊಡುತ್ತಿರುವವರು ಯಾರು? ಎಂದು ಆಂಜನೇಯ ಪ್ರಶ್ನಿಸಿದರು. ಮಹಿಳೆ ಮುಗ್ಧತೆಯಿಂದ ಯಡಿಯೂರಪ್ಪನವರು ಎಂದು ಉತ್ತರ ಕೊಟ್ಟಳು. ಅಲ್ಲಮ್ಮ ಅಕ್ಕಿ ಕೊಡುತ್ತಿರುವವರು ಸಿದ್ದರಾಮಯ್ಯ ಅಲ್ವೇನಮ್ಮಾ?' ಎಂದು ಆಂಜನೇಯ ಅವರು ತಿದ್ದಿ ಹೇಳಿದರು.

ತಾವು ಹೇಳಿಕೊಟ್ಟಿದ್ದನ್ನು ಪರೀಕ್ಷಿಸಲು ಮತ್ತೊಮ್ಮೆ ಆಂಜನೇಯ ಅವರು ಅಕ್ಕಿ ಕೊಡುತ್ತಿರುವುದು ಯಾರು? ಎಂದು ಪ್ರಶ್ನಿಸಿದರು. ಪುನಃ ಆ ಮಹಿಳೆ ಯಡಿಯೂರಪ್ಪ ಎಂದಾಗ ಆಂಜನೇಯ ಅವರು ಅಲ್ಲಿಂಗ ಗಣತಿದಾರರ ಜೊತೆ ಮುಂದೆ ಸಾಗಿದರು.

English summary
The Congress government of Karnataka has started the Anna Bhagya scheme, under scheme BPL families will get 30 kg of rice per month. But, On Monday in Tumakuru women says B.S.Yeddyurappa launched Anna Bhagya scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X