ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಮೇಲೆ ಶಿರಾ ಉಪಚುನಾವಣೆ ಗೆಲುವು?

|
Google Oneindia Kannada News

ತುಮಕೂರು, ಸೆಪ್ಟೆಂಬರ್ 29: ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಮತ್ತು ಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯ ವಿಚಾರ ಗೊಂದಲ ತಾರಕಕ್ಕೇರಿ, ಸರ್ಕಾರ ಅಂತಿಮವಾಗಿ "ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ" ಸ್ಥಾಪನೆ ಮಾಡಲು ಆದೇಶ ಹೊರಡಿಸಿದೆ. ಈ ಮೂಲಕ ಗೊಂದಲಕ್ಕೆ ತೆರೆ ಎಳೆದಂತಾಗಿದೆ.

ಸೆ.26ರ ಭಾನುವಾರ ಸಿಎಂ ಬಿಎಸ್ವೈ "ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ" ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದರು. ಮರು ದಿನ ಇದನ್ನು ಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಎಂದು ಆದೇಶದಲ್ಲಿ ಬದಲಾಯಿಸಿದ್ದರು. ಈ ಒಂದು ವಿಚಾರ ಕಾಡುಗೊಲ್ಲ ಸಮಾಜದ ಆಕ್ರೋಶಕ್ಕೆ ಕಾರಣವಾಗಿತ್ತು. ಮುಂದೆ ಓದಿ...

 ಕಾಡುಗೊಲ್ಲ ಜನಾಂಗದ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ

ಕಾಡುಗೊಲ್ಲ ಜನಾಂಗದ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ

ಈ ಒಂದು ಸಂಗತಿಯಿಂದ ಸಿಎಂ ಬಿಎಸ್ ವೈ ವಿರುದ್ಧ ಆಕ್ರೋಶ ವ್ಯಕ್ತಗೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕಾಡುಗೊಲ್ಲ ಸಮುದಾಯದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. "ಬಹುದಿನಗಳ ಬೇಡಿಕೆಯಂತೆ ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ" ಎಂದು ಸಿಎಂ ಹೇಳಿದ್ದರು. ಇದೀಗ ಗೊಲ್ಲ ನಿಗಮ ಮಂಡಳಿ ಸ್ಥಾಪಿಸಲು ಕ್ರಮ ಕೈಗೊಳ್ಳಲು ಪತ್ರದಲ್ಲಿ ತಿಳಿಸಿದ್ದಾರೆ. ಇದರಲ್ಲಿ ಯಾರ ಕೈವಾಡವಿದೆ ಎಂದು ಪ್ರಶ್ನಿಸಿದ್ದರು.

ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸೂಚನೆ; ಸಿಎಂ ಮೇಲೆ ಕಾಡುಗೊಲ್ಲರ ಆಕ್ರೋಶಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸೂಚನೆ; ಸಿಎಂ ಮೇಲೆ ಕಾಡುಗೊಲ್ಲರ ಆಕ್ರೋಶ

 ಶಿರಾ ಉಪಚುನಾವಣೆ; ಕಾಡುಗೊಲ್ಲರ ಮತ ನಿರ್ಣಾಯಕ ಪಾತ್ರ

ಶಿರಾ ಉಪಚುನಾವಣೆ; ಕಾಡುಗೊಲ್ಲರ ಮತ ನಿರ್ಣಾಯಕ ಪಾತ್ರ

ಆದರೆ ಇದೀಗ ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಡುಗೊಲ್ಲ ಮತಗಳು ನಿರ್ಣಾಯಕ ಪಾತ್ರ ವಹಿಸಿದ್ದರಿಂದ ಕಾಡುಗೊಲ್ಲ ಸಮಾಜದ ಆಕ್ರೋಶವನ್ನು ಅರಿತ ಎಂಎಲ್ಸಿ ರವಿಕುಮಾರ್, ತುಮಕೂರು ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ ಗೌಡ ಅವರು ಸಿಎಂ ಬಳಿ ಚರ್ಚಿಸಿ ಮತ್ತೆ "ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ" ಆದೇಶ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಕಾಡುಗೊಲ್ಲ ಮತ್ತು ಗೊಲ್ಲ ಎಂಬ ಚರ್ಚೆಗೆ ಸಿಎಂ ತೆರೆ ಎಳೆದಂತಾಗಿದೆ.

 ಕಾಡುಗೊಲ್ಲ ಎಂದು ಬದಲಾವಣೆ

ಕಾಡುಗೊಲ್ಲ ಎಂದು ಬದಲಾವಣೆ

ಕಾಡುಗೊಲ್ಲ ಸಮಾಜದ ನಿಗಮ ಮಂಡಳಿ ಘೋಷಿಸಿ ನಂತರ 24 ಗಂಟೆಯೊಳಗೆ ಅದನ್ನು "ಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ" ಎಂದು ಮಾಡಲು ಸರ್ಕಾರ ಮುಂದಾಗಿದ್ದು, ಇದನ್ನು ಕಾಡುಗೊಲ್ಲ ಸಮುದಾಯದವರು ಖಂಡಿಸಿ ಪತ್ರಿಕಾ ಗೋಷ್ಠಿ ನಡೆಸಿದ್ದರು. ಇದೀಗ "ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ" ಎಂದು ಬದಲಾಯಿಸಿರುವುದು ಸಮುದಾಯಕ್ಕೆ ಸಂತಸ ತಂದಿದೆ.

ರೈತ ವಿರೋಧಿ ಕಾಯ್ದೆ, ಯಡಿಯೂರಪ್ಪ ಮುಂದೆ 7 ಪ್ರಶ್ನೆಗಳುರೈತ ವಿರೋಧಿ ಕಾಯ್ದೆ, ಯಡಿಯೂರಪ್ಪ ಮುಂದೆ 7 ಪ್ರಶ್ನೆಗಳು

 ನವೆಂಬರ್ 3ಕ್ಕೆ ಶಿರಾ ಉಪಚುನಾವಣೆ

ನವೆಂಬರ್ 3ಕ್ಕೆ ಶಿರಾ ಉಪಚುನಾವಣೆ

ಇದೇ ನವೆಂಬರ್ 3 ರಂದು ಶಿರಾ ಉಪಚುನಾವಣೆ ನಿಗದಿಯಾಗಿದೆ. ಶಿರಾ ಉಪಚುನಾವಣೆ ಇರುವುದರಿಂದ ಬಿಜೆಪಿಗೆ ಪೆಟ್ಟು ಬೀಳುವುದನ್ನು ಅರಿತ ತುಮಕೂರು ಬಿಜೆಪಿ ಮುಖಂಡರು ಇಂದು ಅಂತಿಮವಾಗಿ "ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ" ಎಂದು ಬದಲಾವಣೆ ಮಾಡಿಸಿದ್ದಾರೆ. ಸಿಎಂ ಬಿಎಸ್ವೈ ಆದೇಶಕ್ಕೆ ಹಾಗೂ ತುಮಕೂರು ಜಿಲ್ಲೆಯ ಬಿಜೆಪಿ ಮುಖಂಡರಿಗೆ ಸಭೆಯ ಮೂಲಕ ಕಾಡುಗೊಲ್ಲ ಸಮಾಜದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

English summary
The government has changed name and finally ordered to the establishment of the Board of Kadugolla Development Corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X