ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧದಲ್ಲಿ ಸೆಕ್ಸ್‌ ವಿಡಿಯೋ ನೋಡಿದ್ದು ದೇಶದ್ರೋಹವಲ್ಲ: ಮಾಧುಸ್ವಾಮಿ

|
Google Oneindia Kannada News

Recommended Video

ವಿಧಾನಸೌಧದಲ್ಲಿ ಸೆಕ್ಸ್‌ ವಿಡಿಯೋ ನೋಡಿದ್ದು ದೇಶದ್ರೋಹವಲ್ಲ ಎಂದ ಮಾಧು ಸ್ವಾಮಿ

ಬೆಂಗಳೂರು, ಸೆಪ್ಟೆಂಬರ್ 05: ವಿಧಾನಸೌಧದಲ್ಲಿ ಅಶ್ಲೀಶ ವಿಡಿಯೋ ನೋಡಿ ಸಚಿವ ಸ್ಥಾನ ಕಳೆದುಕೊಂಡು ಈಗ ಮತ್ತೆ ಉಪಮುಖ್ಯಮಂತ್ರಿ ಆಗಿರುವ ಲಕ್ಷ್ಮಣ ಸವದಿ ಬೆನ್ನಿಗೆ ಸಚಿವ ಮಾಧುಸ್ವಾಮಿ ನಿಂತಿದ್ದಾರೆ.

ವಿಧಾನಸೌಧದಲ್ಲಿ ನೀಲಿ ಚಿತ್ರ ವೀಕ್ಷಿಸಿದ ಆರೋಪವಿರುವ ಲಕ್ಷ್ಮಣ ಸವದಿಗೆ ಉನ್ನತ ಸ್ಥಾನ ನೀಡಿದ ಪಕ್ಷದ ನೈತಿಕತೆ ಬಗ್ಗೆ ಸುದ್ದಿಗಾರರಿಗೆ ಉತ್ತರ ನೀಡಿದ ಮಾಧುಸ್ವಾಮಿ, 'ವಿಧಾನಸೌಧದಲ್ಲಿ ವಿಡಿಯೋ ನೋಡಿದ್ದು ದೇಶದ್ರೋಹವೇನಲ್ಲ' ಎಂದಿದ್ದಾರೆ.

ಸದನದೊಳಗೆ ಬಿಜೆಪಿಗೊಬ್ಬ 'ಸಮಾಜವಾದಿ ಆಪ್ತ': ಗ್ರೀಕ್ ನಾಟಕದ ದುರಂತ ನಾಯಕ ಮಾಧುಸ್ವಾಮಿಸದನದೊಳಗೆ ಬಿಜೆಪಿಗೊಬ್ಬ 'ಸಮಾಜವಾದಿ ಆಪ್ತ': ಗ್ರೀಕ್ ನಾಟಕದ ದುರಂತ ನಾಯಕ ಮಾಧುಸ್ವಾಮಿ

ಲಕ್ಷ್ಮಣ ಸವದಿ ಪರವಾಗಿ ಬ್ಯಾಟ್ ಬೀಸಿರುವ ಅವರು, 'ವಿಧಾನಸೌಧದಲ್ಲಿ ವಿಡಿಯೋ ನೋಡಿದ್ದು ದೇಶದ್ರೋಹದಂತಾ ಆರೋಪ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.

ಪೂರ್ಣವಾಗಿ ಘಟನೆಯನ್ನು ಸಮರ್ಥಿಸದೆ ಎಚ್ಚರಿಕೆ ವಹಿಸಿದ ಸಚಿವ ಮಾಧುಸ್ವಾಮಿ, 'ಅದು ತಪ್ಪು ನಾವು ನೈತಿಕವಾಗಿ ಹಾಗೆ ಮಾಡಬಾರದು, ಅದು ಬಿಟ್ಟರೆ ಅದು ಯಾರಿಗೊ ಮಾಡಿರುವ ಕೇಡಲ್ಲ, ಯಾರಿಗೋ ಮಾಡಿರುವ ದ್ರೋಹ ಅಲ್ಲ, ಆಕಸ್ಮಿಕವಾಗಿ ಒಂದು ವಿಡಿಯೋ ನೋಡಿರುವುದನ್ನು ಇಷ್ಟು ದೊಡ್ಡದು ಮಾಡಿಕೊಂಡಿರುವುದು ಸರಿಯಲ್ಲ' ಎಂದು ಅವರು ಹೇಳಿದರು.

ಅದೇನು ಶಿಕ್ಷಾರ್ಹ ಅಪರಾಧವೇ: ಮಾಧುಸ್ವಾಮಿ ಪ್ರಶ್ನೆ

ಅದೇನು ಶಿಕ್ಷಾರ್ಹ ಅಪರಾಧವೇ: ಮಾಧುಸ್ವಾಮಿ ಪ್ರಶ್ನೆ

'ಆಕಸ್ಮಿಕವಾಗಿ ನಾವು ತಪ್ಪು ಮಾಡುತ್ತೇನೆ, ಅದನ್ನೇ ಎತ್ತಿ ಹಿಡಿದುಕೊಂಡು ಹೋಗುವುದು ಸರಿಯಲ್ಲ, ಅವರು ಏನಾದರೂ ದೇಶದ್ರೋಹ ಮಾಡಿದ್ದಾರಾ?, ಯಾವುದಾದರೂ ಶಿಕ್ಷಾರ್ಹ ಅಪರಾಧ ಮಾಡಿದ್ದಾರಾ?' ಎಂದು ಮಾಧುಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಇಷ್ಟೋಂದು ಚರ್ಚೆ ಆಗುವ ವಿಷಯ ಅದಲ್ಲ: ಮಾಧುಸ್ವಾಮಿ

ಇಷ್ಟೋಂದು ಚರ್ಚೆ ಆಗುವ ವಿಷಯ ಅದಲ್ಲ: ಮಾಧುಸ್ವಾಮಿ

ಸಿದ್ದರಾಮಯ್ಯ ಅವರದ್ದು ಎತ್ತಿ ಆಡಲು ಶುರು ಮಾಡಿದರೆ ಬಹಳವೇ ಮಾಡುತ್ತೇವೆ, ಎಲ್ಲರದ್ದೂ, ಎಲ್ಲರೂ ಮಾತನಾಡುತ್ತೇವೆ, ನಮ್ಮ ಕಾಲ ಮೇಲೆ ನಾವೇ ಕೆಸರು ಹಾಕಿಕೊಳ್ಳಬಾರದು. ಅದೇನು (ಅಶ್ಲೀಶ ವಿಡಿಯೋ ನೋಡಿದ್ದು) ಒಬ್ಬ ಮಂತ್ರಿ ಆಗಲಾರದಷ್ಟು, ಬಹಳ ಚರ್ಚೆ ಮಾಡಬೇಕಾದ ತಪ್ಪು ಅದು ಎಂದು ನನಗನಿಸುವುದಿಲ್ಲ, ಅದು ಆಕಸ್ಮಿಕವಾಗಿ ಆಗಿದ್ದು' ಎಂದು ಮಾಧುಸ್ವಾಮಿ ಅವರು ಲಕ್ಷ್ಮಣ ಸವದಿ ಸದನದಲ್ಲಿ ವಿಡಿಯೋ ನೋಡಿದ್ದನ್ನು ಸಮರ್ಥಿಸಿಕೊಂಡರು.

ಅನರ್ಹ ಶಾಸಕರು ಮಿನಿಸ್ಟರ್ ಆಗ್ತಾರಂತೆ: ಸಚಿವ ಮಾಧುಸ್ವಾಮಿಅನರ್ಹ ಶಾಸಕರು ಮಿನಿಸ್ಟರ್ ಆಗ್ತಾರಂತೆ: ಸಚಿವ ಮಾಧುಸ್ವಾಮಿ

ಆಕಸ್ಮಿಕವಾಗಿ ನೋಡಿಬಿಟ್ಟಿದ್ದಾರೆ, ಬಿಟ್ಟುಬಿಡಬೇಕು: ಮಾಧುಸ್ವಾಮಿ

ಆಕಸ್ಮಿಕವಾಗಿ ನೋಡಿಬಿಟ್ಟಿದ್ದಾರೆ, ಬಿಟ್ಟುಬಿಡಬೇಕು: ಮಾಧುಸ್ವಾಮಿ

'ಮಾಡಬಾರದಾಗಿತ್ತು, ವೈಯಕ್ತಿಕ ನೆಲೆಯಲ್ಲಿ ತಪ್ಪೆ, ಆದರೆ ಆಕಸ್ಮಿಕವಾಗಿ ತಗೊಂಡರು ನೋಡಿದರು, ಈಗ ಅದನ್ನೇ ಬೆಳೆಸಿಕೊಂಡು ಹೋಗಿ ಟೀಕೆ ಮಾಡುವುದರಲ್ಲಿ ಅರ್ಥ ಕಾಣುವುದಿಲ್ಲ' ಎಂದು ಮಾಧುಸ್ವಾಮಿ ಹೇಳಿದರು.

ಲಕ್ಷ್ಮಣ ಸವದಿಗೆ ಉನ್ನತ ಸ್ಥಾನ ಕೊಟ್ಟಿದ್ದರ ಬಗ್ಗೆ ಮಾತು

ಲಕ್ಷ್ಮಣ ಸವದಿಗೆ ಉನ್ನತ ಸ್ಥಾನ ಕೊಟ್ಟಿದ್ದರ ಬಗ್ಗೆ ಮಾತು

ಚುನಾವಣೆ ಸೋತ ಲಕ್ಷ್ಮಣ ಸವದಿಗೆ ಉನ್ನತ ಹುದ್ದೆ ನೀಡಿದ್ದರ ಗುಟ್ಟಿನ ಬಗ್ಗೆ ಮಾತನಾಡಿದ ಮಾಧುಸ್ವಾಮಿ, 'ಲಕ್ಷ್ಮಣ ಸವದಿ ಕಳೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಕೆಲವು ಗೆಲ್ಲಲಾರದ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅವರ ಸಂಘಟನಾ ಶಕ್ತಿ ಹೈಕಮಾಂಡ್‌ಗೆ ಮನದಟ್ಟಾಗಿರುವ ಕಾರಣ ಅವರಿಗೆ ಸ್ಥಾನ ನೀಡಿದ್ದಾರೆ' ಎಂದರು.

ಅಮಿತ್ ಶಾ ನಮಗಿಂತ ಬುದ್ಧಿವಂತರು: ಮಾಧುಸ್ವಾಮಿ

ಅಮಿತ್ ಶಾ ನಮಗಿಂತ ಬುದ್ಧಿವಂತರು: ಮಾಧುಸ್ವಾಮಿ

ಅಮಿತ್ ಶಾ ಅವರು ನಮಗಿಂತಲೂ ಬುದ್ಧಿವಂತರು, ಅವರಿಗೆ ಯಾರನ್ನು ಯಾವಾಗ ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿದೆ. ಲಕ್ಷ್ಮಣ ಸವದಿಗೆ ಇರುವ ಸಂಘಟನಾ ಚತುರತೆ ನಮಗಿಂತಲೂ ಹೆಚ್ಚು, ಹಾಗಾಗಿ ಅವರಿಗೆ ಇನ್ನಷ್ಟು ಶಕ್ತಿ ತುಂಬಿ ಕೆಲವೇ ತಿಂಗಳಲ್ಲಿ ಬರಲಿರುವ ಮಹಾರಾಷ್ಟ್ರ ಚುನಾವಣೆಗೆ ಬಳಸಿಕೊಳ್ಳುವ ಉಮೇದು ಬಿಜೆಪಿ ಹೈಕಮಾಂಡ್‌ಗೆ ಇದೆ ಎಂದು ಅವರು ಹೇಳಿದರು.

English summary
Watching bad video in Vidhan Soudha is not anti national, Laxman Savdhi is not did that in purpose it happens accidentally said minister JC Madhuswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X