• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಜೋಡೆತ್ತುಗಳ 'ಉದಯ'

|

ಚುನಾವಣೆ ಎದುರಾಗುವ ಸಂದರ್ಭದಲ್ಲಿ ಜೋಡೆತ್ತುಗಳು ಎನ್ನುವ ಪದಗಳು ರಾಜ್ಯ ರಾಜಕೀಯದಲ್ಲಿ ಮುನ್ನಲೆಗೆ ಬರುತ್ತದೆ. ಈ ಹಿಂದಿನ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲೂ ಇದನ್ನು ಗಮನಿಸಿದ್ದೇವೆ. ಈಗ, ಶಿರಾ ಕ್ಷೇತ್ರದ ಉಪಚುನಾವಣೆ ನಡೆಯುತ್ತಿರುವುದರಿಂದ ಮತ್ತೆ ಈ ಪದ ಸುದ್ದಿಯಾಗುತ್ತಿದೆ.

ಕಳೆದ ಲೋಕಸಭಾ ಚುನಾವಣೆಯ ವೇಳೆಯಂತೂ ಜೋಡೆತ್ತುಗಳು ಪದ ಭಾರೀ ಸದ್ದನ್ನು ಮಾಡಿತ್ತು. ಇಡೀ ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಚುನಾವಣೆಯ ವೇಳೆ ಜೋಡೆತ್ತು ಎನ್ನುವ ಪದ ಇಲ್ಲದ ದಿನಗಳಿರಲಿಲ್ಲ.

ಶಿರಾ ಉಪಚುನಾವಣೆ: ಟಿ.ಬಿ. ಜಯಚಂದ್ರ ಭವಿಷ್ಯ ಕೆ.ಎನ್. ರಾಜಣ್ಣ ಕೈಯಲ್ಲಿ?

ಪ್ರಮುಖವಾಗಿ ಕಣದಲ್ಲಿದ್ದ ಜೆಡಿಎಸ್ - ಕಾಂಗ್ರೆಸ್ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಯ ಪರವಾಗಿ ನಡೆಯುತ್ತಿದ್ದ ಚುನಾವಣಾ ಪ್ರಚಾರದ ವೇಳೆ, ಎರಡೂ ಕಡೆಯವರು, ತಮ್ಮನ್ನು ಜೋಡೆತ್ತುಗಳು ಎಂದು ಬಿಂಬಿಸಿ ಕೊಳ್ಳುತ್ತಿದ್ದರು.

ಶಿರಾ ಅಸೆಂಬ್ಲಿ ಉಪಚುನಾವಣೆ: ಸಂಭಾವ್ಯ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ

ಶಿರಾ ಅಸೆಂಬ್ಲಿಯ ಉಪಚುನಾವಣೆಗೆ ದಿನಾಂಕ ಇನ್ನೂ ನಿಗದಿಯಾಗಬೇಕಷ್ಟೇ.. ಆದರೂ, ಚುನಾವಣಾ ಕಾವು ಈಗಿಂದಲೇ ಆರಂಭವಾಗಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ರಾಜ್ಯದ, ತುಮಕೂರು ಜಿಲ್ಲೆಯ ಹೊಸ ಜೋಡೆತ್ತುಗಳು, ಮುಂದೆ ಓದಿ...

ನಾವು ಜೋಡೆತ್ತುಗಳು, ಒಂದೇ ಬಣ್ಣ ಒಂದೇ ರೀತಿಯ ಕೊಂಬುಗಳು ಇವೆ

ನಾವು ಜೋಡೆತ್ತುಗಳು, ಒಂದೇ ಬಣ್ಣ ಒಂದೇ ರೀತಿಯ ಕೊಂಬುಗಳು ಇವೆ

"ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಮುಖ್ಯ. ನಾನು ಮತ್ತು ಟಿ.ಬಿ.ಜಯಚಂದ್ರ ಜೋಡೆತ್ತುಗಳು, ಒಂದೇ ಬಣ್ಣ ಒಂದೇ ರೀತಿಯ ಕೊಂಬುಗಳು ಇವೆ. ಹಾಗಾಗಿ ನಮ್ಮ ನಡುವೆ ವ್ಯತ್ಯಾಸ ಬರುವುದಿಲ್ಲ. ಮಂಡ್ಯ ಎತ್ತುಗಳು ಒಂದು ಕರಿಯ ಬಣ್ಣದ್ದು, ಮತ್ತೊಂದು ಬಿಳಿಯ ಬಣ್ಣದ್ದು. ಹಾಗಾಗಿ ಅಲ್ಲಿ ವ್ಯತ್ಯಾಸ ಬರುತ್ತದೆ. ಜಿಲ್ಲೆಯಲ್ಲಿ ಅಂತಹ ವ್ಯತ್ಯಾಸ ಬರುವುದಿಲ್ಲ" ಎಂದು ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ವ್ಯಾಖ್ಯಾನಿಸಿದ್ದಾರೆ.

ಈ ಬಾರಿ ನಿಮ್ಮೆಲ್ಲರ ಬೆಂಬಲ ನಮಗೆ ಬೇಕಾಗಿದೆ, ಟಿ.ಬಿ.ಜಯಚಂದ್ರ

ಈ ಬಾರಿ ನಿಮ್ಮೆಲ್ಲರ ಬೆಂಬಲ ನಮಗೆ ಬೇಕಾಗಿದೆ, ಟಿ.ಬಿ.ಜಯಚಂದ್ರ

"ಜನರು ಮತ್ತು ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಹೋಗಬೇಕಾಗಿದೆ. ಜಿಲ್ಲೆಯಲ್ಲಿ ಡಾ.ಪರಮೇಶ್ವರ್, ಷಡಕ್ಷರಿ, ಕೆ.ಎನ್.ರಾಜಣ್ಣ ಮತ್ತು ನಮೆಗೆಲ್ಲ ವಯಸ್ಸಾಯಿತು. ಪಕ್ಷದ ಬೆಳವಣಿಗೆ ದೃಷ್ಟಿ ಮತ್ತು ಹೊಸ ನಾಯಕತ್ವದ ಹಿತದೃಷ್ಟಿಯಿಂದ ಹೊಂದಿಕೊಂಡು ಹೋಗಬೇಕು. ಇದು ಅನಿವಾರ್ಯ. ಈ ಬಾರಿ ನಿಮ್ಮೆಲ್ಲರ ಬೆಂಬಲ ನನಗೆ ಬೇಕಾಗಿದೆ" ಎಂದು ಶಿರಾ ಅಭ್ಯರ್ಥಿ (ಬಹುತೇಕ) ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ನಾನು ಮತ್ತು ಯಶ್ ಜೋಡೆತ್ತುಗಳು, ದರ್ಶನ್

ನಾನು ಮತ್ತು ಯಶ್ ಜೋಡೆತ್ತುಗಳು, ದರ್ಶನ್

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಪರವಾಗಿ ಚಿತ್ರನಟರಾದ ದರ್ಶನ್ ಮತ್ತು ಯಶ್ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಆ ವೇಳೆ, ಇವರಿಬ್ಬರನ್ನು ಜೋಡೆತ್ತುಗಳೆಂದು ಕರೆಯಲಾಗುತ್ತಿತ್ತು. "ನಾವು ಒಂಟಿಯಾಗಿ ಗಾಡಿ ಓಡಿಸುವುದಿಲ್ಲ,ನಾನು ಮತ್ತು ಯಶ್ ಜೋಡೆತ್ತುಗಳು"ಎಂದು ದರ್ಶನ್ ಹೇಳಿದ್ದರು.

ಇಲ್ಲಿಬ್ಬರು ನಿಜವಾದ ಜೋಡೆತ್ತುಗಳು ಇದ್ದೇವೆ

ಇಲ್ಲಿಬ್ಬರು ನಿಜವಾದ ಜೋಡೆತ್ತುಗಳು ಇದ್ದೇವೆ

ಆ ವೇಳೆ ದರ್ಶನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, "ಅವುಗಳು ಜೋಡೆತ್ತುಗಳಲ್ಲ, ಕಳ್ಳ ಎತ್ತುಗಳು. ಆ ಎತ್ತುಗಳನ್ನು ನಂಬಕ್ಕೆ ಹೋಗಬೇಡಿ. ಇಲ್ಲಿಬ್ಬರು ನಿಜವಾದ ಜೋಡೆತ್ತುಗಳು ನಿಮ್ಮ ಮುಂದೆ ನಿಂತಿದ್ದೇವೆ" ಎಂದು ಡಿ.ಕೆ.ಶಿವಕುಮಾರ್ ಅವರತ್ತ ಕೈತೋರಿಸುತ್ತಾ ಎಚ್ಡಿಕೆ ಹೇಳಿದ್ದರು.

English summary
Upcoming Sira Assembly Bypoll Of Tumkur District: T B Jayachandra And K N Rajanna Is The New Jodettu Of Karnataka State Politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X