ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು: ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕ್ ಆಗಸ್ಟಿನಿಂದ ಕಾರ್ಯಾರಂಭ

ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಕರ್ನಾಟಕದ ತುಮಕೂರಿನಲ್ಲಿ ತಲೆ ಎತ್ತುತ್ತಿದ್ದು ಆಗಸ್ಟ್ ನಿಂದ ಕಾರ್ಯಾರಂಭ ಮಾಡಲಿದೆ. ಒಟ್ಟು 2000 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಪಾರ್ಕ್ ಇದಾಗಿರಲಿದೆ.

By Sachhidananda Acharya
|
Google Oneindia Kannada News

ತುಮಕೂರು, ಫೆಬ್ರವರಿ 22: ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಕರ್ನಾಟಕದ ತುಮಕೂರಿನಲ್ಲಿ ತಲೆ ಎತ್ತುತ್ತಿದ್ದು ಆಗಸ್ಟ್ ನಿಂದ ಕಾರ್ಯಾರಂಭ ಮಾಡಲಿದೆ. ಒಟ್ಟು 2000 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಪಾರ್ಕ್ ಇದಾಗಿರಲಿದೆ.

"ಸೋಲಾರ್ ಪಾರ್ಕ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಆಗಸ್ಟಿನಲ್ಲಿ ಮೊದಲ ಹಂತದ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ. ಒಟ್ಟು 810 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಮಾರ್ಗಗಳ ನಿರ್ಮಾಣವೂ ಭರದಿಂದ ಸಾಗುತ್ತಿದೆ," ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. [ಹಸುವಿನ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶಕ್ಕೇ ನಂಬರ್ ವನ್]

Tumkur: Asia’s biggest solar power plant will starts working from August

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿ ಸುತ್ತ ಮುತ್ತ ನಿರ್ಮಾಣವಾಗುತ್ತಿರುವ ಸೌರ ಪಾರ್ಕ್ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಿವಕುಮಾರ್ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ. [ಕಾಂಗ್ರೆಸ್ 'ಸತ್ಯಮೇವ ಜಯತೆ' ರ್ಯಾಲಿ ಹಾಸ್ಯಾಸ್ಪದ- ಯಡಿಯೂರಪ್ಪ]

12,000 ಎಕರೆ ಪ್ರದೇಶದಲ್ಲಿ ಈ ಪಾರ್ಕ್ ನಿರ್ಮಾಣವಾಗುತ್ತಿದೆ. ಆದರೆ ರೈತರಿಂದ ಭೂ ಸ್ವಾಧೀನ ಮಾಡದೆ ಬಾಡಿಗೆ ರೂಪದಲ್ಲಿ ಜಮೀನನ್ನು ಪಡೆದುಕೊಳ್ಳಲಾಗಿದೆ. ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ 21 ಸಾವಿರ ರೂಪಾಯಿಯಂತೆ ಜಮೀನು ಬಾಡಿಗೆ ನೀಡಲಾಗುತ್ತದೆ. ಅಲ್ಲದೆ ಎರಡು ವರ್ಷಕ್ಕೊಮ್ಮೆ ಬಾಡಿಗೆಯನ್ನು ಶೇಕಡಾ 5ರಷ್ಟು ಹೆಚ್ಚು ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದಾರೆ.

Tumkur: Asia’s biggest solar power plant will starts working from August

ಒಟ್ಟು 2,700 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಪರವಾನಿಗೆ ಸಿಕ್ಕಿದೆ. ಕರ್ನಾಟಕ ಸರಕಾರ ಕೇಂದ್ರದ ಸಹಭಾಗಿತ್ವದಲ್ಲಿ 2,000 ಮೆಗಾವ್ಯಾಟ್ ಉತ್ಪಾದನೆ ಮಾಡಲಿದ್ದು ಉಳಿದದ್ದನ್ನು ಖಾಸಗಿ ಕಂಪೆನಿಗಳು ಉತ್ಪಾದನೆ ಮಾಡಲಿವೆ. ಇದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಸೌರ ವಿದ್ಯುತ್ ಪಾರ್ಕ್ ನಿರ್ಮಾಣ ಪರಿಶೀಲನೆ ಸಂದರ್ಭ ಸ್ಥಳೀಯ ಶಾಸಕ ತಿಮ್ಮರಾಯಪ್ಪ, ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಕೆಆರ್ಡಿಎಲ್ ಎಂಡಿ ಬಲರಾಮ್ ಸೇರಿದಂತೆ ವಿದ್ಯುತ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

English summary
Power Minister D K Shivakumar visited to Pavagada taluk, Tumkur on Wednesday, where Asia's biggest solar power plant is coming up. After Visit the spot he addressed media people and said that Power plant starts its working from August, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X