ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು ಯುವಕನ ಜೀವನ ನರಕ ಮಾಡಿದ ಟಿಕ್‌ಟಾಕ್‌

|
Google Oneindia Kannada News

ತುಮಕೂರು, ಜೂನ್ 18: ಟಿಕ್‌ಟಾಕ್ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಟಿಕ್‌ಟಾಕ್ ವಿಡಿಯೋ ಹುಚ್ಚು ತುಮಕೂರಿನ ಯುವಕನೊಬ್ಬನ ಪ್ರಾಣಕ್ಕೆ ಕುತ್ತು ತಂದಿದೆ.

ಯುವಕ ಕುಮಾರ್ ಮತ್ತು ಆತನ ಸ್ನೇಹಿತರು ಟಿಕ್‌ಟಾಕ್‌ ವಿಡಿಯೋ ಮಾಡುತ್ತಿದ್ದರು. ದೂರದಿಂದ ಓಡಿ ಬಂದು ಸ್ನೇಹಿತನ ಸಹಾಯದಿಂದ ಹಾರಿ ಉಲ್ಟಾ ನೆಗೆದು ಅದನ್ನು ಸ್ಲೋ ಮೋಶನ್‌ ನಲ್ಲಿ ಶೂಟ್ ಮಾಡಿ ಟಿಕ್‌ಟಾಕ್‌ಗೆ ಅಪ್‌ಲೋಡ್ ಮಾಡುವುದು ಕುಮಾರ್‌ನ ಉದ್ದೇಶವಾಗಿತ್ತು.

ಬಾಲಕಿ ಪತ್ರ ಬರೆದಿಟ್ಟು ಮನೆಬಿಟ್ಟು ಓಡಿ ಹೋಗಿದ್ದೆಲ್ಲಿಗೆ? ಬಾಲಕಿ ಪತ್ರ ಬರೆದಿಟ್ಟು ಮನೆಬಿಟ್ಟು ಓಡಿ ಹೋಗಿದ್ದೆಲ್ಲಿಗೆ?

ಆದರೆ ಆದದ್ದೇ ಬೇರೆ, ಕುಮಾರ್ ಉಲ್ಟಾ ನೆಗೆದಾಗ ಆತನ ಕುತ್ತಿಗೆ ನೆಲಕ್ಕೆ ತಾಗಿದ ಪರಿಣಾಮ ಆತನ ಬೆನ್ನುಮೂಳೆ ಮುರಿದು ಹೋಗಿದೆ. ಆತ ಕದಲಲೂ ಸಾಧ್ಯವಾಗದ ಸ್ಥಿತಿಯಲ್ಲಿ ಆಸ್ಪತ್ರೆಯ ಬೆಡ್‌ ನಲ್ಲಿ ಮಲಗಿದ್ದಾನೆ.

Tumkur: A young boy broken his spinal card while doing tiktok video

ರಸಮಂಜರಿ ಕಾರ್ಯಕ್ರಮಗಳಲ್ಲಿ ಹಾಡು ಹಾಡುತ್ತಾ, ಕುಣಿಯುತ್ತಾ ಕುಟುಂಬ ಪೋಷಿಸುತ್ತಿದ್ದ ಕುಮಾರ್ ಈಗ ಜೀವನ ಪರ್ಯಂತ ಹಾಸಿಗೆ ಮೇಲೆ ಮಲಗುವ ಸ್ಥಿತಿ ಒದಗಿ ಬಂದಿದೆ.

ಟಿಕ್‌ಟಾಕ್ ಮಾಡಿದ್ರೆ ಮೊಬೈಲ್‌ ಒಡೆದ್ಹಾಕ್ತೀನಿ ಅಂದಿದ್ದಕ್ಕೆ ಮಹಿಳೆ ಆತ್ಮಹತ್ಯೆಟಿಕ್‌ಟಾಕ್ ಮಾಡಿದ್ರೆ ಮೊಬೈಲ್‌ ಒಡೆದ್ಹಾಕ್ತೀನಿ ಅಂದಿದ್ದಕ್ಕೆ ಮಹಿಳೆ ಆತ್ಮಹತ್ಯೆ

ಬಡ ಮಧ್ಯಮ ಕುಟುಂಬದವಾಗಿರುವ ಅವರ ಪೋಷಕರಿಗೆ ಕುಮಾರ್‌ನ ಚಿಕಿತ್ಸೆಯದ್ದೇ ಚಿಂತೆ, ಆತ ಹಾಸಿಗೆಯಿಂದ ಮೇಲೆ ಏಳುವಂತಾಗಲು ಕನಿಷ್ಟ ಹತ್ತು ಲಕ್ಷದ ಅವಶ್ಯಕತೆ ಇದೆಯಂತೆ.

ಅಮೆರಿಕದಲ್ಲಿ ವಿಚಿತ್ರ ಜೀವಿಯ ವಿಡಿಯೋ ವೈರಲ್; ನಿಜವೋ ಓಳೋ ಚರ್ಚೆಅಮೆರಿಕದಲ್ಲಿ ವಿಚಿತ್ರ ಜೀವಿಯ ವಿಡಿಯೋ ವೈರಲ್; ನಿಜವೋ ಓಳೋ ಚರ್ಚೆ

ಟಿಕ್‌ಟಾಕ್‌ ಆಪ್‌ ಅನ್ನು ಈಗಾಗಲೇ ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಈಗಾಗಲೇ ಅದನ್ನು ಮೊಬೈಲ್‌ ಗೆ ಡೌನ್‌ಲೋಡ್‌ ಮಾಡಿಕೊಂಡವರು ಯಾವುದೇ ಸಮಸ್ಯೆ ಇಲ್ಲದೆ ಟಿಕ್‌ಟಾಕ್ ನೋಡಬಹುದು ಮತ್ತು ಅದಕ್ಕೆ ವಿಡಿಯೋಗಳನ್ನು ಹಾಕಬಹುದಾಗಿದೆ.

English summary
In Tumkur a young man Kumar breaks his spinal card while doing tiktok video. Now he is in hospital bed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X