ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಮಪತ್ರ ಸಲ್ಲಿಸಲಿರುವ ಮುದ್ದಹನುಮೇಗೌಡ, ಆತಂಕದಲ್ಲಿ ದೇವೇಗೌಡ

|
Google Oneindia Kannada News

Recommended Video

ನಾಮಪತ್ರ ಸಲ್ಲಿಸಲಿರುವ ಮುದ್ದಹನುಮೇಗೌಡ, ಆತಂಕದಲ್ಲಿ ದೇವೇಗೌಡ..!

ತುಮಕೂರು, ಮಾರ್ಚ್ 23 : ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಜೆಡಿಎಸ್‌ ಪಾಲಿಗಾಗಿರುವ ತುಮಕೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಪಕ್ಷದಿಂದ ನಾನು ನಾಮಪತ್ರ ಸಲ್ಲಿಸಿಯೇ ಸಿದ್ಧ ಎಂದು ಸವಾಲು ಹಾಕಿದ್ದಾರೆ. ಇದು ದೇವೇಗೌಡ ಅವರಿಗೆ ಆತಂಕ ತಂದೊಡ್ಡಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ತುಮಕೂರಿನಲ್ಲಿ ಮುದ್ದಹನುಮೇಗೌಡ ಅವರ ನಿವಾಸದ ಮುಂದೆ ಇಂದು ನೂರಾರು ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಿ ಮುದ್ದಹನುಮೇಗೌಡ ಅವರು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದರು. ಬೆಂಬಲಿಗರ ಆಗ್ರಹಕ್ಕೆ ಮಣಿದು ಮುದ್ದಹುನುಮೇಗೌಡ ಅವರು ಕಾಂಗ್ರೆಸ್ ಟಿಕೆಟ್ ನಿಂದೆಯೇ ಸ್ಪರ್ಧಿಸುವುದಾಗಿ ಘೋಷಿಸಿರುವುದು ಜೆಡಿಎಸ್ ಗೆ ಭಾರೀ ತಲೆನೋವು ತಂದಿದೆ.

ತುಮಕೂರು: ಮುದ್ದಹನುಮೇಗೌಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ? ತುಮಕೂರು: ಮುದ್ದಹನುಮೇಗೌಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ?

ಕಾರ್ಯಕರ್ತರೊಂದಿಗೆ ಮಾತನಾಡಿದ ಮುದ್ದಹನುಮೇಗೌಡ ಅವರು, 'ಸೋಮವಾರ ನಾನು ತುಮಕೂರಿನ ಬಿಜಿಎಸ್ ವೃತ್ತದಿಂದ 11 ಗಂಟೆಗೆ ಮೆರವಣಿಗೆಯಲ್ಲಿ ತೆರಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ' ಎಂದು ಹೇಳಿದರು. ಮುದ್ದಹನುಮೇಗೌಡ ಅವರ ಮಾತಿಗೆ ಕಾರ್ಯಕರ್ತರು ಹರ್ಷೋಲ್ಲಾಸ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ದೇವೇಗೌಡರ ಸ್ಟ್ರಾಟಜಿ ಏನಿರಲಿದೆ ಎಂಬುದು ಕುತೂಹಲಕರವಾಗಿದೆ.

'ಪುನರ್ ಪರಿಶೀಲಿಸುವ ವಿಶ್ವಾಸವಿದೆ'

'ಪುನರ್ ಪರಿಶೀಲಿಸುವ ವಿಶ್ವಾಸವಿದೆ'

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗ ಆಗಿರುವ ನಿರ್ಧಾರವನ್ನು, ಕಾಂಗ್ರೆಸ್ ನಾಯಕರು, ಹೈಕಮಾಂಡ್ ಮತ್ತು ಮೈತ್ರಿ ಮುಖಂಡರು ಪುನರ್‌ ಪರಿಶೀಲಿಸುತ್ತಾರೆ ಎಂಬ ವಿಶ್ವಾಸವಿದೆ, ನನಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಮುದ್ದಹನುಮೇಗೌಡ ಅವರು ಹೇಳಿದರು.

ತುಮಕೂರಿನಿಂದಲೇ ದೇವೇಗೌಡರು ಸ್ಪರ್ಧೆ, ಸೋಮವಾರ ನಾಮಪತ್ರ ತುಮಕೂರಿನಿಂದಲೇ ದೇವೇಗೌಡರು ಸ್ಪರ್ಧೆ, ಸೋಮವಾರ ನಾಮಪತ್ರ

'ಟಿಕೆಟ್ ಸಿಗದಿದ್ದರೆ ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ'

'ಟಿಕೆಟ್ ಸಿಗದಿದ್ದರೆ ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ'

ಒಂದುವೇಳೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಏನು ಮಾಡುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಸೋಮವಾರವೇ ಪ್ರಕಟಿಸುತ್ತೇನೆ ಎಂದರು. ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲವೆಂದರೆ 'ಜನತಾ ನ್ಯಾಯಾಲಯಕ್ಕೆ' ಹೋಗುವುದಾಗಿ ಅವರು ಕಾರ್ಯಕರ್ತರೊಂದಿಗೆ ಮಾತನಾಡಿದಾಗ ಹೇಳಿದ್ದರು. ಕಾಂಗ್ರೆಸ್ ಟಿಕೆಟ್ ಸಿಗಲಿ ಸಿಗದೇ ಇರಲಿ ಮುದ್ದಹನುಮೇಗೌಡ ಅವರು ಚುನಾವಣೆಗೆ ಸ್ಪರ್ಧಿಸುವ ಗಟ್ಟಿ ನಿರ್ಧಾರ ಮಾಡಿದ್ದಾರೆ.

ದೇವೇಗೌಡರಿಗೆ ಗಂಗೆ ಶಾಪ ಇದೆ, ತುಮಕೂರಲ್ಲಿ ಸ್ಪರ್ಧಿಸಿದರೆ ಸೋಲು ಖಚಿತ: ಸುರೇಶ್ ಗೌಡ ದೇವೇಗೌಡರಿಗೆ ಗಂಗೆ ಶಾಪ ಇದೆ, ತುಮಕೂರಲ್ಲಿ ಸ್ಪರ್ಧಿಸಿದರೆ ಸೋಲು ಖಚಿತ: ಸುರೇಶ್ ಗೌಡ

ಸಿಟ್ಟಿನಿಂದ ಮಾತನಾಡಿದ ಮುದ್ದಹನೇಗೌಡ

ಸಿಟ್ಟಿನಿಂದ ಮಾತನಾಡಿದ ಮುದ್ದಹನೇಗೌಡ

ಸುದ್ದಿಗಾರರ ಜೊತೆ ಮಾತನಾಡುತ್ತಾ, ಮೈತ್ರಿ ನಾಯಕರ ಮೇಲೆ ವಿಪರೀತ ಸಿಟ್ಟಾದ ಮುದ್ದಹನುಮೇಗೌಡ ಅವರು, ಮೈತ್ರಿ ಧರ್ಮ ಎಂದರೆ, ಕ್ರಿಯಾಶೀಲನಾಗಿರುವ, ಜನರ ಬೆಂಬಲ ಇರುವ, ಹಾಲಿ ಸಂಸದರನ್ನು ಪುನರ್ ಆಯ್ಕೆ ಮಾಡುವುದು ಮೈತ್ರಿ ಧರ್ಮ, ಈಗ ಮಾಡಿರುವುದು ಮೈತ್ರಿ ಧರ್ಮ ಅಲ್ಲ ಎಂದು ಬಹು ಸಿಟ್ಟಿನಿಂದ ಮಾತನಾಡಿದರು.

ದೇವೇಗೌಡ ಅವರಿಗೆ ತೀವ್ರ ಆತಂಕ

ದೇವೇಗೌಡ ಅವರಿಗೆ ತೀವ್ರ ಆತಂಕ

ದೇವೇಗೌಡ ಅವರು ತುಮಕೂರಿನಿಂದ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿತ್ತು. ಸೋಮವಾರ ಅವರು ನಾಮಪತ್ರ ಸಲ್ಲಿಸುವುದು ಸಹ ಖಚಿತವಾಗಿತ್ತು. ಆದರೆ ಈಗ ಮುದ್ದಹನುಮೇಗೌಡ ಅವರು ಕಣಕ್ಕೆ ಇಳಿದಿರುವುದು ದೇವೇಗೌಡ ಅವರಿಗೆ ಆತಂಕ ತಂದಿದೆ. ಮುದ್ದಹನುಮೇಗೌಡ ಅವರಿಗೆ ತುಮಕೂರಿನಲ್ಲಿ ಉತ್ತಮ ಜನ ಬೆಂಬಲ ಇದ್ದು, ಉಪಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಹಲವು ಪ್ರಮುಖ ಮುಖಂಡರು ಅವರ ಪರ ಇದ್ದಾರೆ.

ಪರಮೇಶ್ವರ್ ಬಹಿರಂಗ ಬೆಂಬಲ ಸಾಧ್ಯತೆ

ಪರಮೇಶ್ವರ್ ಬಹಿರಂಗ ಬೆಂಬಲ ಸಾಧ್ಯತೆ

ಮುದ್ದಹನುಮೇಗೌಡ ಅವರು ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಡಿಸಿಎಂ ಪರಮೇಶ್ವರ್ ಅವರು ಸಹ ಅವರಿಗೆ ಬೆಂಬಲ ನೀಡುತ್ತಾರೆ ಎನ್ನಲಾಗಿದೆ. ಪರಮೇಶ್ವರ್ ಅವರು ಬಹಿರಂಗವಾಗಿ ಮುದ್ದಹನುಮೇಗೌಡ ಅವರಿಗೆ ಬೆಂಬಲ ನೀಡಿದಲ್ಲಿ ದೇವೇಗೌಡ ಅವರಿಗೆ ಗೆಲುವು ದೂರ ಹೋಗಲಿದೆ.

English summary
Tumakuru present MP Muddahanume Gowda said he will file nomination from Tumakuru on Monday. Deve Gowda constesting from Tumakuru from congress support. If Muddahanumegowda contested from their Deve Gowda will face some trouble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X