ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು-ಗುಬ್ಬಿ ಜೋಡಿ ಹಳಿ ರೈಲು ಸಂಚಾರಕ್ಕೆ ಮುಕ್ತ

|
Google Oneindia Kannada News

ತುಮಕೂರು, ಜೂನ್ 17 : ನೈಋತ್ಯ ರೈಲ್ವೆ ತುಮಕೂರು-ಗುಬ್ಬಿ ನಡುವಿನ ಜೋಡಿ ಹಳಿಯಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡಿದೆ. ತುಮಕೂರು-ಅರಸೀಕೆರೆ ನಡುವಿನ ಜೋಡಿ ಹಳಿ ಕಾಮಗಾರಿ 2020-21ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ತುಮಕೂರು-ಗುಬ್ಬಿ ನಡುವಿನ 18 ಕಿ.ಮೀ. ಜೋಡಿ ಹಳಿಯಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇದರಿಂದಾಗಿ ಅರಸೀಕೆರೆ ಮಾರ್ಗವಾಗಿ ಸಂಚಾರ ನಡೆಸುವ ರೈಲುಗಳಿಗೆ ಸಹಕಾರಿಯಾಗಿದೆ.

76 ಕಿ.ಮೀ.ನೂತನ ಮಾರ್ಗದ ಕಾಮಗಾರಿ ಆರಂಭಿಸಲಿದೆ ರೈಲ್ವೆ76 ಕಿ.ಮೀ.ನೂತನ ಮಾರ್ಗದ ಕಾಮಗಾರಿ ಆರಂಭಿಸಲಿದೆ ರೈಲ್ವೆ

ತುಮಕೂರು-ಗುಬ್ಬಿ ನಡುವಿನ ಜೋಡಿ ಹಳಿ ಮಾರ್ಗವನ್ನು 108 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಹಗ್ಗೆರೆ, ಮಲ್ಲಸಂದ್ರ ಮತ್ತು ಗುಬ್ಬಿ ಸೇರಿ ಒಟ್ಟು ಮೂರು ನಿಲ್ದಾಣಗಳು ಈ ಮಾರ್ಗದಲ್ಲಿವೆ. ಮಲ್ಲಸಂದ್ರ ನಿಲ್ದಾಣದಲ್ಲಿ ಮತ್ತೊಂದು ಫ್ಲಾಟ್‌ ಫಾರ್ಮ್ ನಿರ್ಮಾಣ ಮಾಡಲಾಗಿದ್ದು, ಮೂಲಭೂತ ಸೌಕರ್ಯ ಒದಗಿಸಲಾಗಿದೆ.

ತುಮಕೂರು-ಅರಸೀಕೆರೆ ಜೋಡಿ ಮಾರ್ಗಕ್ಕೆ ಒಪ್ಪಿಗೆತುಮಕೂರು-ಅರಸೀಕೆರೆ ಜೋಡಿ ಮಾರ್ಗಕ್ಕೆ ಒಪ್ಪಿಗೆ

Tumakuru-Gubbi railway second railway line open

ಜೋಡಿ ಮಾರ್ಗದಲ್ಲಿ 28 ಚಿಕ್ಕ ಸೇತುವೆ, ಮೂರು ಪ್ರಮುಖ ಸೇತುವೆ, ಎರಡು ರಸ್ತೆಗಳ ಕೆಳ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ತುಮಕೂರು-ಅರಸೀಕೆರೆ ನಡುವಿನ ಜೋಡಿ ಮಾರ್ಗದ ಕಾಮಗಾರಿಯನ್ನು 2020-21ರಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ತುಮಕೂರು-ಅರಸೀಕೆರೆ ನಡುವೆ ಜೋಡಿ ಹಳಿ ನಿರ್ಮಾಣ ಕಾರ್ಯವನ್ನು 578 ಕೋಟಿ ಹೆಚ್ಚದಲ್ಲಿ ಕೈಗೊಳ್ಳಲಾಗಿದೆ. 96 ಕಿ.ಮಿ. ಮಾರ್ಗದ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು, 2020-21ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

English summary
The South Western Railway has commissioned the 18-km second railway line between Tumakuru-Gubbi. 18-km line has Heggere, Mallasandra and Gubbi stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X