• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತುಮಕೂರು-ದಾವಣಗೆರೆ ರೈಲು ಮಾರ್ಗ ವಿಳಂಬ

|

ತುಮಕೂರು, ನವೆಂಬರ್ 29 : ತುಮಕೂರು- ದಾವಣಗೆರೆ-ಚಿತ್ರದುರ್ಗ ನೇರ ರೈಲು ಮಾರ್ಗದ ಕಾಮಗಾರಿ ವಿಳಂಬವಾಗಲಿದೆ. ರಾಜ್ಯ ಸರ್ಕಾರ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನವನ್ನು ಇನ್ನೂ ಪೂರ್ಣಗೊಳಿಸಿಲ್ಲ.

191 ಕಿ. ಮೀ. ದೂರದ ಯೋಜನೆಯನ್ನು 2010-11ರಲ್ಲಿ ಘೋಷಣೆ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 50:50ರ ಅನುಪಾತದಲ್ಲಿ ಯೋಜನೆಯನ್ನು ಜಾರಿಗೆ ತರುತ್ತಿವೆ. ಆದರೆ, ಭೂ ಸ್ವಾಧೀನ ವಿಳಂಬವಾದ ಕಾರಣ ಕಾಮಗಾರಿಯೂ ನಿಧಾನವಾಗುತ್ತಿದೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ ಕಾಮಗಾರಿ ಆರಂಭಿಸಿತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ ಕಾಮಗಾರಿ ಆರಂಭಿಸಿ

ಯೋಜನೆಗೆ 2,246.06 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕ ಸರ್ಕಾರ ಇದುವರೆಗೂ 135.66 ಎಕರೆ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಿದೆ. ಉಳಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಸ್ಥಗಿತವಾಗಿದೆ.

ವಾಡಿ-ಗದಗ ರೈಲು ಯೋಜನೆ, ರೈತರ ಜಮೀನಿಗೆ 17 ಲಕ್ಷ ಪರಿಹಾರವಾಡಿ-ಗದಗ ರೈಲು ಯೋಜನೆ, ರೈತರ ಜಮೀನಿಗೆ 17 ಲಕ್ಷ ಪರಿಹಾರ

ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ರೈತರು ತುಮಕೂರು ಜಿಲ್ಲೆಯಲ್ಲಿ ಭೂಮಿ ನೀಡಿದ್ದಾರೆ. ಇದಕ್ಕೆ ಅವರಿಗೆ ಎಕರೆಗೆ 40 ಲಕ್ಷ ಪರಿಹಾರ ಸಿಕ್ಕಿದೆ. ರೈಲ್ವೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ಎಕರೆಗೆ 20 ಲಕ್ಷ ಪರಿಹಾರ ನೀಡಲಾಗುತ್ತದೆ.

ಪುಣೆ-ಬೆಳಗಾವಿ ಇಂಟರ್ ಸಿಟಿ ರೈಲು ಹುಬ್ಬಳ್ಳಿ ತನಕ ವಿಸ್ತರಣೆ ಪುಣೆ-ಬೆಳಗಾವಿ ಇಂಟರ್ ಸಿಟಿ ರೈಲು ಹುಬ್ಬಳ್ಳಿ ತನಕ ವಿಸ್ತರಣೆ

ಹಲವು ರೈತರು ಇದನ್ನು ಪ್ರಶ್ನಿಸಿ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವುಗಳು ವಿಚಾರಣೆ ಹಂತದಲ್ಲಿವೆ. ಆದ್ದರಿಂದ, ಭೂಸ್ವಾಧೀನ ಕಾರ್ಯ ಸ್ಥಗಿತವಾಗಿದೆ. ನ್ಯಾಯಾಲಯದ ಆದೇಶ ಬಂದರೆ ಪುನಃ ಕಾರ್ಯ ಆರಂಭವಾಗಲಿದೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವಾಗಬೇಕು ಎಂಬುದು ಮೂರು ಜಿಲ್ಲೆಗಳ ಜನರ ದಶಕಗಳ ಕನಸು. ಆದರೆ, ಬಹುಕಾಲ ಯೋಜನೆ ಲಾಭದಾಯಕವಲ್ಲ ಎಂಬ ಕಾರಣಕ್ಕೆ ರೈಲ್ವೆ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.

2010-11ರಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಈ ಯೋಜನೆಗೆ ಶೇ 50ರಷ್ಟು ವೆಚ್ಚ ಭರಿಸುವುದಾಗಿ ಹೇಳಿ ಕೇಂದ್ರದಿಂದ ಒಪ್ಪಿಗೆ ಪಡೆದಿತ್ತು. ಆದರೆ, ಭೂಸ್ವಾಧೀನದ ವಿಚಾರ ಇನ್ನೂ ಬಗೆಹರಿಯದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ.

ಈ ರೈಲು ಯೋಜನೆ ಪೂರ್ಣಗೊಂಡರೆ ಬೆಂಗಳೂರು-ವಿಜಯಪುರ ನಡುವಿನ ಅಂತರ 65 ಕಿ. ಮೀ. ಕಡಿಮೆಯಾಗಲಿದೆ. ಬೆಂಗಳೂರು-ಚಿತ್ರದುರ್ಗ ನಡುವಿನ ಅಂತರ 110 ಕಿ. ಮೀ. ಕಡಿಮೆಯಾಗಲಿದೆ. ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಮಾರ್ಗದ ಒತ್ತಡ ಶೇ 50ರಷ್ಟು ಕಡಿಮೆಯಾಗಲಿದೆ.

English summary
Due to land acquisition Tumakuru-Davanagere direct railway line project will delayed. Project announced in 2010-11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X