ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು-ಬೆಂಗಳೂರು ಡೆಮು ರೈಲು; ಸಮಯ, ನಿಲ್ದಾಣ ವಿವರ

|
Google Oneindia Kannada News

ತುಮಕೂರು, ಅಕ್ಟೋಬರ್ 15 : ಬೆಂಗಳೂರು-ತುಮಕೂರು ನಡುವೆ ಡೆಮು ರೈಲು ಸಂಚಾರಕ್ಕೆ ಮಂಗಳವಾರ ಚಾಲನೆ ಸಿಗಲಿದೆ. ವಾರದಲ್ಲಿ 6 ದಿನ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದ್ದು, ಸಾವಿರಾರು ಪ್ರಯಾಣಿಕರಿಗೆ ಸಹಾಯಕವಾಗಲಿದೆ.

ಯಶವಂತಪುರ- ತುಮಕೂರು ಡೆಮು ರೈಲು ಸೇವೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯೆಲ್ ಚಾಲನೆ ನೀಡಲಿದ್ದಾರೆ. ಭಾನುವಾರ ಹೊರತುಪಡಿಸಿ ಉಳಿದ ದಿನ ರೈಲು ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಅಕ್ಟೋಬರ್ 15ರಿಂದ ಬೆಂಗಳೂರಿನಿಂದ ಸೇವಾ ಸರ್ವೀಸ್ ರೈಲು ಆರಂಭಅಕ್ಟೋಬರ್ 15ರಿಂದ ಬೆಂಗಳೂರಿನಿಂದ ಸೇವಾ ಸರ್ವೀಸ್ ರೈಲು ಆರಂಭ

ರೈಲು ಸಂಖ್ಯೆ 76527 ಮತ್ತು 76528 ತುಮಕೂರು-ಯಶವಂತಪುರ ನಡುವೆ ಸಂಚಾರ ನಡೆಸಲಿದೆ. ಬೆಂಗಳೂರು-ತುಮಕೂರು ನಡುವೆ ಡೆಮು ರೈಲು ಸಂಚಾರ ಆರಂಭಿಸಬೇಕು ಎಂದು ಹಲವು ವರ್ಷಗಳಿಂದ ಜನರು ಒತ್ತಾಯಿಸುತ್ತಿದ್ದರು.

ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿ ತನಕ ವಿಸ್ತರಣೆವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿ ತನಕ ವಿಸ್ತರಣೆ

Tumakuru Bengaluru Demu Rail Time Stations

ವೇಳಾಪಟ್ಟಿ : ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 7.59ಕ್ಕೆ ಹೊರಡುವ ರೈಲು ರಾತ್ರಿ 9.25ಕ್ಕೆ ತುಮಕೂರು ರೈಲು ನಿಲ್ದಾಣವನ್ನು ತಲುಪಲಿದೆ. 9.50ಕ್ಕೆ ತುಮಕೂರಿನಿಂದ ಹೊರಡುವ ರೈಲು ರಾತ್ರಿ 11.25ಕ್ಕೆ ಯಶವಂತಪುರಕ್ಕೆ ತಲುಪಲಿದೆ.

ದೀಪಾವಳಿ; ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು ದೀಪಾವಳಿ; ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು

ನಿಲ್ದಾಣಗಳು : ತುಮಕೂರು-ಯಶವಂತಪುರ ರೈಲು ಕ್ಯಾತ್ಸಂದ್ರ, ಹಿರೇಹಳ್ಳಿ, ದಾಬಸ್ ಪೇಟೆ, ನಿಡವಂದ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣವರ, ಮುದ್ದಲಿಂಗನಹಳ್ಳಿ ನಿಲ್ದಾಣಗಳಲ್ಲಿ ಒಂದರಿಂದ ಒಂದೂವರೆ ನಿಮಿಷ ನಿಲುಗಡೆಗೊಳ್ಳಲಿದೆ.

English summary
Demu rail will run between Tumakuru and Bengaluru from October 15, 2019. Here are the time schedule and stations list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X