ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು: ಕರಡಿ ದಾಳಿಗೆ ಬಲಿಯಾದ ರೈತ

|
Google Oneindia Kannada News

ತುಮಕೂರು, ನ. 21 : ಜನರೆಲ್ಲ ನೋಡುತ್ತಲೇ ಇದ್ದರು, ಆತನ ಆರ್ತನಾದ ಮುಗಿಲು ಮುಟ್ಟಿತ್ತು. ಭಯಾನಕ ಕರಡಿ ದಾಳಿಗೆ ತತ್ತರಿಸಿದ್ದವ ಜೀವ ಭಯದಿಂದ ನಡುಗುತ್ತಿದ್ದ. ಕೆಳಕ್ಕೆ ಬಿದ್ದವನ ಕುತ್ತಿಗೆಯನ್ನು ಮನಸೋ ಇಚ್ಛೆ ಕಚ್ಚುತ್ತಿದ್ದ ಕರಡಿ ಬಳಿ ಯಾರೂ ಧಾವಿಸಲಿಲ್ಲ. ನೋಡು ನೋಡುತ್ತಿದ್ದಂತೆಯೇ ಆತನ ಪ್ರಾಣ ಪಕ್ಷಿ ಹಾರಿ ಹೋಯಿತು.

ಇದು ನಡೆದದ್ದು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ. ಮೇವು ತರಲು ಕಾಡಿಗೆ ತೆರಳಿದ್ದ ರೈತರ ಮೇಲೆ ದಾಳಿ ಮಾಡಿದ ನರಭಕ್ಷಕ ಕರಡಿ ಸೋಮಣ್ಣ ಎಂಬ ರೈತನನ್ನು ಬಲಿ ಪಡೆಯಿತು. ನಂತರ ಕರಡಿಯನ್ನು ಗುಂಡಿಟ್ಟು ಕೊಲ್ಲಲಾಯಿತಾದರೂ ಘಟನೆಯಲ್ಲಿ ಗಂಭೀರ ಗಾಯಗೊಂಡ ತಿಮ್ಮಣ್ಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ದೆಹಲಿ ಝೂನಲ್ಲಿ ಶಾಲಾಬಾಲಕನನ್ನು ಕೊಂದ ಬಿಳಿಹುಲಿ]

Bear mauls farmer to death

ಮೇವು ತರಲು ಕಾಡಿಗೆ ಹೋಗಿದ್ದ ರೈತರನ್ನು ಪೊದೆಯಲ್ಲಿ ಅವಿತುಕೊಂಡಿದ್ದ ಕರಡಿ ಗಮನಿಸುತ್ತಿತ್ತು. ಇದಕ್ಕಿದ್ದಂತೆ ಸೋಮಣ್ಣನ ಮೇಲೆ ಕರಡಿ ದಾಳಿ ಮಾಡಿದೆ. ಈ ವೇಳೆ ಎಲ್ಲರೂ ಭಯಭೀತರಾಗಿ ಓಡಿದ್ದಾರೆ. ಮತ್ತೆ ಕರಡಿ ಪೊದೆಯ ಹಿಂದೆ ಮರೆಯಾಗಿದೆ.

ನಂತರ ಕೆಲ ಹೊತ್ತಿನ ನಂತರ ಕರಡಿ ಮತ್ತೆ ಸೋಮಣ್ಣನ ಮೇಲೆ ದಾಳಿ ಮಾಡಿದೆ. ಕೈಗೆ ಸಿಕ್ಕ ಸೋಮಣ್ಣನ ಪ್ರಾಣ ತೆಗೆಯುವವರೆಗೆ ಕರಡಿ ಹಿಂದೆ ಸರಿದಿಲ್ಲ. ಸುಮಾರು ಸಾವಿರಕ್ಕೂ ಅಧಿಕ ಜನ ಜಮಾಯಿಸಿದರೂ ಕರಡಿ ಸೋಮಣ್ಣನನ್ನು ಬಿಟ್ಟು ಕದಲಲಿಲ್ಲ.[ಚಿಕ್ಕಮಗಳೂರು : ಮಹಿಳೆ ಕೊಂದಿದ್ದ ಹುಲಿ ಸೆರೆ]

ಇನ್ನೂ ಎರಡು ಕರಡಿಗಳು ಮಧುಗಿರಿಯ ಹೊಲಗಳಲ್ಲಿ ಓಡಾಡಿಕೊಂಡಿದ್ದು ಜನರು ಭಯದಿಂದ ದಿನ ದೂಡುವಂತಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೇ ಕರಡಿ ದಾಳಿಯ ದೃಶ್ಯವನ್ನು ಕೆಲವರು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದಾರೆ.

English summary
A farmer has been killed and partially eaten and a second man left with serious injuries to his face and arms during a horrific sloth bear attack in Madhugiri Taluk, Tumakuru district. Some people captured this horrible event on their mobile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X