ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾದಿಂದ ಮೃತಪಟ್ಟ ತುಮಕೂರು ವೃದ್ಧನ ಟ್ರಾವೆಲ್ ಹಿಸ್ಟರಿ

|
Google Oneindia Kannada News

ತುಮಕೂರು, ಮಾರ್ಚ್ 27: ತುಮಕೂರಿನ 65 ವರ್ಷದ ವ್ಯಕ್ತಿ ಶುಕ್ರವಾರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರು ದೆಹಲಿಯ ಜಾಮಿಯಾ ಮಸೀದಿಗೆ ಹೋಗಿದ್ದರು, ಅಲ್ಲಿಂದ ಬರುವಾಗ ಸೋಂಕು ತಗುಲಿರಬಹುದು ಎಂದು ಹೇಳಲಾಗಿದೆ.

ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಇಂದು ಬೆಳಗ್ಗೆ 10.45ಕ್ಕೆ ಕೊವಿಡ್ 19 ರೋಗಿ ಮೃತಪಟ್ಟಿದ್ದಾರೆ. ಒಟ್ಟು ಇವರು 13 ಮಂದಿಯ ಜೊತೆ ಪ್ರಯಾಣ ಮಾಡಿದ್ದರು.

ತುಮಕೂರು ಜಿಲ್ಲೆ ಶಿರಾ ಪಟ್ಟಣದ ವಯೋವೃದ್ದ ಕರೊನಾ ಬಲಿ ಪ್ರಕರಣ ಮಾರ್ಚ್ 18 ರಂದು ಶಿರಾದಲ್ಲಿ ಡಾ.ಫಜಲ್ ಅನ್ನೋ ಡಾಕ್ಟರ್ ಬಳಿ ನ್ಯೂಮೋನಿಯ ಎಂದು ಪರೀಕ್ಷೆ ಒಳಪಟ್ಟಿದ್ದ. ಆದರೆ ನ್ಯೂಮೋನಿಯ ಪತ್ತೆಯಾಗದ ಹಿನ್ನೆಲೆ ನಗರದ ಸಿದ್ದಗಂಗ ಆಸ್ಪತ್ರೆಗೆ ರೆಫರ್ ಮಾಡಿದ್ದರು.

ಆದರೆ ಎರಡು ದಿನಗಳ‌ ಕಾಲ ನಿರ್ಲಕ್ಷ್ಯ ಮಾಡಿದ ವೃದ್ದ ಬಳಿಕ ತುಮಕೂರು ನಗರದ ಶ್ರೀರಾಮಮಂದಿರ ದೇವಾಸ್ಥಾನ ಹಿಂಭಾಗದ ಖಾಸಗಿ ಆಸ್ಪತ್ರೆಯ ವೈದ್ಯರ ಬಳಿ‌ ಚಿಕಿತ್ಸೆ ಪಡೆದ ವೃದ್ದ, ಈ ಆಸ್ಪತ್ರೆ ವೈದ್ಯ ಜಿಲ್ಲಾಸ್ಪತ್ರೆಯಲ್ಲೂ ಕೆಲಸ ನಿರ್ವಹಿಸುತ್ತಿದ್ದಾರೆ.

ಬಳಿಕ ಅವನನ್ನ ಜಿಲ್ಲಾಸ್ಪತ್ರೆಗೆ ಕರೆದು ತಂದು ಈ ತಿಂಗಳ 24 ರಂದು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಲಕ್ಷಣ ಕಂಡು ಬಂದಿದೆ.27 ರಂದು ಅಂದ್ರೆ ಇವತ್ತು ಸಾವನ್ನಪ್ಪಿದ್ದಾರೆ.

ಈಗ ಈತನ ಸಂಪರ್ಕ ದಲ್ಲಿದ್ದ ವೈದ್ಯ ಹಾಗೂ 8 ಜನರನ್ನು ಜಿಲ್ಲಾಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಭಾರತದಲ್ಲಿ ಕೊರೊನಾ ರೋಗಿಗಳು-LIve tracker

ತುಮಕೂರಿನಿಂದ ದೆಹಲಿಗೆ ಪ್ರಯಾಣ

ತುಮಕೂರಿನಿಂದ ದೆಹಲಿಗೆ ಪ್ರಯಾಣ

-ಮಾರ್ಚ್ 5 ರಂದು ತುಮಕೂರಿನಿಂದ ಮಧ್ಯಾಹ್ನ 2.30ಕ್ಕೆ 13 ಮಂದಿ ಜೊತೆಗೆ ಸಂಪರ್ಕ ಕ್ರಾಂತಿ ರೈಲಿನ ಎಸ್-6 ಬೋಗಿಯಲ್ಲಿ ಪ್ರಯಾಣ ಬೆಳೆಸಿದ್ದರು.

-ಮಾರ್ಚ್ 7 ರಂದು ಮಧ್ಯಾಹ್ನ 3 ಗಂಟೆಗೆ ದೆಹಲಿಯ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಲ್ಲಿ ಇಳಿದಿದ್ದಾರೆ. ಅಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ಜಾಮಿಯಾ ಮಸೀದಿಗೆ ತೆರಳಿದ್ದರು.

-ಮಾರ್ಚ್ 7 ರಿಂದ 11ರವರೆಗೆ ಜಾಮಿಯಾ ಮಸೀದಿ ಹತ್ತಿರದಲ್ಲಿದ್ದ ಲಾಡ್ಜ್‌ನಲ್ಲಿ ತಂಗಿದ್ದರು.

ದೆಹಲಿಯಿಂದ ಬೆಂಗಳೂರಿಗೆ ವಾಪಸ್

ದೆಹಲಿಯಿಂದ ಬೆಂಗಳೂರಿಗೆ ವಾಪಸ್

- ಮಾರ್ಚ್ 11ರಂದು ಬೆಳಗ್ಗೆ 9 ಗಂಟೆ ವೇಳೆಗೆ ಕೊಂಗು ಎಕ್ಸ್‌ಪ್ರೆಸ್‌ ರೈಲಿನ ಎಸ್‌-9 ಕೋಚಿನಲ್ಲಿ ಪ್ರಯಾಣ ಬೆಳೆಸಿದರು.

-ಮಾರ್ಚ್ 14 ರಂದು ಬೆಳಗಿನ ಜಾವ 12.30ರ ಸುಮಾರಿಗೆ ಬೆಂಗಳೂರಿನ ಯಶವಂತಪುರ ಬಸ್‌ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತುಮಕೂರಿಗೆ ತೆರಳಿದ್ದರು.

-ಮಾರ್ಚ್ 14 ಬೆಳಗ್ಗೆ ಶಿರಾ ತಲುಪಿ ಕೆಲವು ದಿನಗಳ ಕಾಲ ಮನೆಯಲ್ಲಿಯೇ ಇದ್ದರು.

ಮಾರ್ಚ್ 18 ರಂದು ಕೆಮ್ಮು, ಜ್ವರ, ಕಫ ಕಾಣಿಸಿಕೊಂಡಿತ್ತು

ಮಾರ್ಚ್ 18 ರಂದು ಕೆಮ್ಮು, ಜ್ವರ, ಕಫ ಕಾಣಿಸಿಕೊಂಡಿತ್ತು

-ಮಾರ್ಚ್ 18 ರಂದು ಜ್ವರ, ಕಮ್ಮು, ಶೀತ, ಕಫ ಆರಂಭವಾಗಿತ್ತು. ಮಾರ್ಚ್ 19 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

-ಮಾರ್ಚ್ 21 ರಂದು ಶಿರಾದಲ್ಲಿರುವ ಖಾಸಗಿ ಕ್ಲಿನಿಕ್‌ಗೆ ಭೇಟಿ ನೀಡಿದರು. ಎಕ್ಸ್‌-ರೇ , ರಕ್ತದ ಪರೀಕ್ಷೆ ಮಾಡಿಸಲಾಯಿತು. ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಲಾಯಿತು.

-ಮಾರ್ಚ್ 23 ರಂದು ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಶಿರಾಗೆ ವಾಪಸ್ ಹೋಗಿದ್ದರು.

ಮಾರ್ಚ್ 24 ರಂದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು

ಮಾರ್ಚ್ 24 ರಂದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು

-ಮತ್ತೆ ಮಾರ್ಚ್ 24 ರಂದು ತುಮಕೂರು ಆಸ್ಪತ್ರೆಯಲ್ಲಿ ಅಡ್ಮಿಟ್ ಆದರು. ಬಳಿಕ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಎಕ್ಸ್‌ ರೇ, ರಕ್ತದ ಸ್ಯಾಂಪಲ್‌ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು.

-ಮಾರ್ಚ್ 24 ರಂದು ಮಧ್ಯಾಹ್ನ 2 ಗಂಟೆಗೆ ಐಸೋಲೇಷನ್‌ ವಾರ್ಡ್‌ಗೆ ಕಳುಹಿಸಲಾಯಿತು. ಈಗ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 27 ರಂದು ಮೃತಪಟ್ಟಿದ್ದಾರೆ.

English summary
Here is the Travel History Of Tumkur Person Who died from Coronovavirus On Friday At Tumkur District Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X