ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿಪಟೂರು ನಗರ ಅಭಿವೃದ್ಧಿಗೆ ಕೈ ಜೋಡಿಸಿದ ರೋಟರಿ ಬೆಂಗಳೂರು ಗುಲ್‍ಮೊಹರ್

|
Google Oneindia Kannada News

ತಿಪಟೂರು, ಜುಲೈ 25 : ತುಮಕೂರು ಜಿಲ್ಲೆಯಲ್ಲಿ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಿಪಟೂರು ನಗರ, ರೋಟರಿ ಬೆಂಗಳೂರು ಗುಲ್‍ಮೊಹರ್ ಹಮ್ಮಿಕೊಳ್ಳಲು ಉದ್ದೇಶಿಸಿರುವ ಸಾಮಾಜಿಕ ಚಟುವಟಿಕೆಗಳ ಲಾಭವನ್ನು ಪಡೆಯುವ ಪ್ರಮುಖ ನಗರವಾಗಿದೆ. ಈ ಚಟುವಟಿಕೆಗಳ ಮೂಲಕ ರೋಟರಿ ಬೆಂಗಳೂರು ಗುಲ್‍ಮೊಹರ್, ಸ್ಥಳೀಯ ಸಮುದಾಯಗಳಿಗೆ ಪ್ರಯೋಜನವಾಗುವ ಸುಸ್ಥಿರ ಯೋಜನೆಗಳನ್ನು ಮರಳಿ ಸಮಾಜಕ್ಕೆ ನೀಡಲಿದೆ.

ತಿಪಟೂರಿನಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ವಿವರ ನೀಡಿದ ರೊಟೇರಿಯನ್ ಪಿಎಚ್‍ಎಫ್ ಮುರಳೀಕೃಷ್ಣನ್ "ರೋಟರಿ ಬೆಂಗಳೂರು ಗುಲ್‍ಮೊಹರ್ ತಿಪಟೂರು ಹಾಗೂ ಸುತ್ತಮುತ್ತಲಿನ ಎಂಟು ಸರ್ಕಾರಿ ಶಾಲೆಗಳನ್ನು ಮೂಲಸೌಕರ್ಯ ಅಭಿವೃಧ್ಧಿಗಾಗಿ ಆಯ್ಕೆ ಮಾಡಿಕೊಳ್ಳಲಿದೆ. ಇನ್ನೊಂದು ಮೆಗಾ ಸಾರ್ವಜನಿಕ- ಖಾಸಗಿ ಪಾಲುದಾರಿಕೆ ಯೋಜನೆಯಲ್ಲಿ ತಿಪಟೂರಿನ ಎರಡು ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗುತ್ತದೆ ಹಾಗೂ ಸುಮಾರು 36 ಎಕರೆ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಪರಿಸರವನ್ನು ಸುಧಾರಿಸುವ ಉದ್ದೇಶ ಹೊಂದಿದೆ. ಇದರ ಜತೆಗೆ ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸಾ ಸಾಧನ ಸಲಕರಣೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ" ಎಂದು ವಿವರಿಸಿದರು.

ರೊಟೇರಿಯನ್ ಪಿಎಚ್‍ಎಫ್ ಮುರಳೀಕೃಷ್ಣನ್ ಮತ್ತಷ್ಟು ವಿವರ ನೀಡಿ, "ರೋಟರಿ ಬೆಂಗಳೂರು ಗುಲ್‍ಮೊಹರ್ ತಿಪಟೂರಿನ ಕೆ.ಬಿ.ಕ್ರಾಸ್ ಬಳಿ ಅರಣ್ಯ ಅಭಿವೃದ್ಧಿ ಯೋಜನೆಯನ್ನು ಕೂಡಾ ಉದ್ದೇಶಿಸಿದೆ. ಅಂತೆಯೇ 12 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗಾಗಿ ನಾಲ್ಕು ಇಂಟರ್ಯಾಕ್ಟ್ ಕ್ಲಬ್‍ಗಳನ್ನು ಕೂಡಾ ಆರಂಭಿಸಲು ಉದ್ದೇಶಿಸಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ನೆರವಾಗಲಿದೆ,'' ಎಂದು ಬಣ್ಣಿಸಿದರು.

Tiptur to Benefit from Social Activities Planned by Rotary Bangalore Gulmohar

ರೊಟೇರಿಯನ್ ಸುಧಾರಾಣಿ ಮಾತನಾಡಿ, ''ಈ ಮಿಷಿನ್‍ನ ಅಂಗವಾಗಿ ಸಹ ರೊಟೇರಿಯನ್ನರು ಸಮಾಜಕ್ಕೆ ಮರಳಿ ನೀಡುವ ನಿಟ್ಟಿನಲ್ಲಿ ಈ ಉಪಕ್ರಮಗಳಿಗೆ ದೇಣಿಗೆ ನೀಡಿದ್ದಾರೆ. ಇದು ಎಲ್ಲ ಅರ್ಹ ಯೋಜನೆಗಳಿಗೆ ಸಮಪ್ರಮಾಣದ ಜಾಗರಿಕ ಅನುದಾನಕ್ಕೆ ಪೂರಕವಾಗಿರುತ್ತದೆ. ರೋಟರಿ ಬೆಂಗಳೂರು ಗುಲ್‍ಮೊಹರ್ ಈ ಯೋಜನೆಗಳ ಅನುಷ್ಠಾನಕ್ಕಾಗಿ ಕಾಲಮಿತಿಯಲ್ಲಿ ನಿಧಿ ಕ್ರೋಢೀಕರಿಸಲು ಉದ್ದೇಶಿಸಿದೆ,'' ಎಂದು ಹೇಳಿದರು.

100 ವರ್ಷ ಹಳೆಯ ಶಾಲೆಯನ್ನು ದತ್ತು ಪಡೆಯುವ ಸಂಬಂಧ ಕೂಡಾ ಕರ್ನಾಟಕ ಸರ್ಕಾರದ ಜತೆ ಒಪ್ಪಂದ ಮಾಡಿಕೊಳ್ಳಲಿದೆ. ಇದರಡಿ ಪ್ರಮುಖ ರಾಚನಿಕ ಪುನರುಜ್ಜೀವನವನ್ನು ನಾಲ್ಕು ಲಕ್ಷ ರೂಪಾಯಿಗಳ ಸ್ವಯಂ ನೆರವು ನಿಧಿಯೊಂದಿಗೆ ಕೈಗೊಳ್ಳಲಿದೆ. ಇದರ ಜತೆಗೆ ರೋಟರಿ ಬೆಂಗಳೂರು ಗುಲ್‍ಮೊಹರ್ ವತಿಯಿಂದ ತಿಪಟೂರಿನಲ್ಲಿರುವ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜು ಪುನರ್ ನವೀಕರಣ ಯೋಜನೆಯನ್ನೂ ಕೈಗೆತ್ತಿಕೊಂಡಿದ್ದು, ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ.

English summary
Tiptur, the second fastest growing town in Tumakuru district, will be a major beneficiary of social initiatives planned by Rotary Bangalore Gulmohar. Through these activities members of Rotary Bangalore Gulmohar, is keen to give back to society sustainable projects that benefit local masses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X