ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿಪಟೂರು: ಲಂಚಕೋರ ಕಾನೂನು ಸಲಹೆಗಾರ ಎಸಿಬಿ ಬಲೆಗೆ

|
Google Oneindia Kannada News

ತಿಪಟೂರು, ಜುಲೈ 10: ಗ್ರಾಮ ಪಂಚಾಯಿತಿಯೊಂದರ ವ್ಯಾಪ್ತಿಯ ಭೂ ಪರಿವರ್ತನೆ, ಖಾತೆ ಹಂಚಿಕೆ ರದ್ದು ಕುರಿತಂತೆ ತಾಲ್ಲೂಕು ಪಂಚಾಯತ್‍ನ ಕಾನೂನು ತಜ್ಞರೊಬ್ಬರು ಸಲಹೆ ನೀಡಲು 2 ಲಕ್ಷ ರು ಲಂಚ ನೀಡುವಂತೆ ಬೇಡಿಕೆ ಒಡ್ಡಿದ್ದ ಕಾನೂನು ಸಲಹೆಗಾರರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ತುಮಕೂರು ನಗರ, ಕ್ಯಾತ್ಸಂದ್ರ ನಿವಾಸಿಯೊಬ್ಬರು ತಿಪಟೂರಿನ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ 2 ಎಕರೆ ಜಮೀನನ್ನು ಭೂಪರಿವರ್ತನೆ ಮಾಡಿಸಿ, ಒಟ್ಟು 43 ನಿವೇಶನಗಳನ್ನು ವಿಂಗಡಿಸಿ, ನಿವೇಶನಗಳಿಗೆ ಗ್ರಾಮ ಪಂಚಾಯ್ತಿ ಖಾತೆಯನ್ನು ಹೊಂದಿರುತ್ತಾರೆ. ಸದರಿ ನಿವೇಶನಗಳಿಗೆ ಸಂಬಂಧಪಟ್ಟಂತೆ ಖಾತೆಗಳನ್ನು ರದ್ದುಪಡಿಸುವಂತೆ ತಕರಾರು ಅರ್ಜಿಯು ತಾಲ್ಲೂಕು ಪಂಚಾಯ್ತಿಗೆ ಸ್ವೀಕೃತವಾಗಿರುತ್ತದೆ.

Tiptur : Taluk Panchayat Legal adviser detained by ACB, Tumakuru

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಈ ಬಗ್ಗೆ ದೂರುದಾರರಿಂದ ದಾಖಲೆಗಳನ್ನು ಪಡೆದು, ತಾಲ್ಲೂಕು ಪಂಚಾಯತ್‍ನ ಕಾನೂನು ತಜ್ಞರ ಅಭಿಪ್ರಾಯಕ್ಕಾಗಿ ಕಳುಹಿಸಿಕೊಟ್ಟಿರುತ್ತಾರೆ. ತಿಪಟೂರಿನ ತಾಲೂಕು ಪಂಚಾಯತ್ ಕಾನೂನು ಸಲಹೆಗಾರರಾದ ಬಸಪ್ಪ ಎಂಬುವರು ಕಾನೂನು ಅಭಿಪ್ರಾಯ ವರದಿಯನ್ನು ನೀಡಲು ರೂ.2,00,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.

ಬಸಪ್ಪ ಅವರು ಮಂಗಳವಾರ(ಜುಲೈ 09)ದಂದು ದೂರುದಾರರಿಂದ ರೂ.1,00,000/- ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ. ಇವರನ್ನು ದಸ್ತಗಿರಿ ಮಾಡಿ, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ, ತನಿಖೆ ಮುಂದುವರೆದಿದೆ.

English summary
Tiptur: Taluk Panchayat legal adviser Basappa was caught red handed by ACB, Tumukaru division today while he was receiving bribe from a resident of Kyatsandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X