ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಸೋಲಾರ್ ವಿದ್ಯುತ್ ಘಟಕ ಆರಂಭಿಸಿದ ಟಾಟಾ ಪವರ್

By Mahesh
|
Google Oneindia Kannada News

ಬೆಂಗಳೂರು, ಜನವರಿ 04: ಟಾಟಾ ಪವರ್ ನ ಸಂಪೂರ್ಣ ಒಡೆತನದ ಮತ್ತು ಭಾರತದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದನಾ ಕಂಪನಿಯಾಗಿರುವ ಟಾಟಾ ಪವರ್ ರಿನ್ಯೂವೇಬಲ್ ಎನರ್ಜಿ ಲಿಮಿಟೆಡ್(ಟಿಪಿಆರ್‍ಇಎಲ್) ಕರ್ನಾಟಕದಲ್ಲಿ ಸೌರ ವಿದ್ಯುತ್ ಉತ್ಪಾದನೆ ಆರಂಭಿಸಲು ನಿರ್ಧರಿಸಿದೆ.

ತುಮಕೂರು ಜಿಲ್ಲೆಯ ಪಾವಗಡದ ಸೋಲಾರ್ ಪಾರ್ಕ್‍ನಲ್ಲಿ ಟಿಪಿಆರ್‍ಇಎಲ್ 50 ಮೆಗಾವ್ಯಾಟ್ ಡಿಸಿಆರ್ ಸೋಲಾರ್ ಘಟಕವನ್ನು ಸ್ಥಾಪಿಸಿದೆ.

ಚಿತ್ರಗಳು : ಪಾವಗಡ ಸೋಲಾರ್ ಪಾರ್ಕ್‌ಗೆ ಡಿಕೆ ಶಿವಕುಮಾರ್ ಭೇಟಿಚಿತ್ರಗಳು : ಪಾವಗಡ ಸೋಲಾರ್ ಪಾರ್ಕ್‌ಗೆ ಡಿಕೆ ಶಿವಕುಮಾರ್ ಭೇಟಿ

ನ್ಯಾಷನಲ್ ಸೋಲಾರ್ ಮಿಷನ್ ಫೇಸ್ 2 ರಡಿಯಲ್ಲಿ 2016 ರ ಏಪ್ರಿಲ್ 4 ರಂದು ಈ ಯೋಜನೆಯನ್ನು ಆರಂಭಿಸಲು ಕಂಪನಿ ಅನುಮತಿ ಪಡೆದಿತ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇದೀಗ ಕಂಪನಿ ಒಟ್ಟು 1664 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದಂತಾಗಿದೆ.

ಪಾವಗಡದಲ್ಲಿ 253 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಈ 50 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಆರಂಭಿಸಲಾಗಿದ್ದು, ಪ್ರತಿ ಯೂನಿಟ್‍ಗೆ 4.84 ರೂಪಾಯಿ ದರದಲ್ಲಿ ವಿದ್ಯುತ್ ಮಾರಾಟ ಮಾಡುವ ಸಂಬಂಧ ಕಂಪನಿಯು 25 ವರ್ಷಗಳ ಖರೀದಿ ಒಪ್ಪಂದಕ್ಕೆ ಎನ್‍ಟಿಪಿಸಿಯೊಂದಿಗೆ ಸಹಿ ಹಾಕಿದೆ.

Tata Power commissions 50-MW solar plant in Pavagada

ಟಾಟಾ ಪವರ್ ರಿನ್ಯೂವೇಬಲ್ ಎನರ್ಜಿ ಲಿಮಿಟೆಡ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಾಹ ಅವರು ಮಾತನಾಡಿ, 'ಕರ್ನಾಟಕದಲ್ಲಿ 50 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಆರಂಭಿಸುವ ಮೂಲಕ ಟಿಪಿಆರ್‍ಇಎಲ್ ದೇಶದಲ್ಲಿ ನವೀಕರಿಸಬಹುದಾದ ಇಂಧನ ತಯಾರಿಕೆಯ ಅತಿ ದೊಡ್ಡ ಕಂಪನಿ ಎಂಬ ಹೆಗ್ಗಳಿಕೆಯನ್ನು ಪಡೆದಂತಾಗಿದೆ.

ತುಮಕೂರು ಜಿಲ್ಲೆ ಬದಲಾವಣೆಯಲ್ಲೆ ಅದೆಂಥ 'ಕೈ' ಚಳಕ!ತುಮಕೂರು ಜಿಲ್ಲೆ ಬದಲಾವಣೆಯಲ್ಲೆ ಅದೆಂಥ 'ಕೈ' ಚಳಕ!

ಭೂಮಿ ಮತ್ತು ಇನ್ನಿತರೆ ಸೌಲಭ್ಯಗಳನ್ನು ಒದಗಿಸಿದಲ್ಲಿ ನಾವು ಇನ್ನೂ ಹೆಚ್ಚು ಸೋಲಾರ್ ಪಾರ್ಕ್‍ಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ನಾವು ಗಮನಹರಿಸಿದ್ದೇವೆ. ಈ ಬೆಳವಣಿಗೆಯಿಂದ ನಮಗೆ ಸಂತಸವಾಗಿದೆ ಮತ್ತು ಭಾರತದಾದ್ಯಂತ ಘಟಕ ಸ್ಥಾಪನೆಗೆ ಸೂಕ್ತವಾದ ಪ್ರದೇಶಗಳನ್ನು ಗುರುತಿಸುತ್ತಿದ್ದೇವೆ' ಎಂದು ತಿಳಿಸಿದರು.

ಗುಜರಾತ್‍ನ ಚರಂಕಾದ ಸೋಲಾರ್ ಪಾರ್ಕ್‍ನಲ್ಲಿ ಟಿಪಿಆರ್‍ಇಎಲ್ 25 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಇತ್ತೀಚೆಗೆ ಆರಂಭಿಸಿದೆ. ಅದೇ ರೀತಿ ಮಹಾರಾಷ್ಟ್ರದ ಪಲಾಸ್‍ವಾಡೆಯಲ್ಲಿ 30 ಮೆಗಾವ್ಯಾಟ್, ಕರ್ನಾಟಕದ ಪಾವಗಡ ಸೋಲಾರ್ ಪಾರ್ಕ್‍ನಲ್ಲಿ 100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಆರಂಭಿಸಿದೆ.

ಈ ಪಾವಗಡದಲ್ಲಿ ಒಟ್ಟಾರೆ ಕಂಪನಿಯ ಸೋಲಾರ್ ವಿದ್ಯುತ್ ಉತ್ಪಾದನೆಯನ್ನು 2025 ರ ವೇಳೆಗೆ ಶೇ. 35 ರಿಂದ 40 ಹೆಚ್ಚಿಸುವ ಗುರಿಯನ್ನು ಹಾಕಿಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಟಾಟಾ ಪವರ್ ರಿನ್ಯೂವೇಬಲ್ ಎನರ್ಜಿ ಸಾಮರ್ಥ್ಯ 2000 ಮೆಗಾವ್ಯಾಟ್‍ನ ಗಡಿಯನ್ನು ದಾಟಿದ್ದು, ಒಟ್ಟಾರೆ ಹಸಿರು ಇಂಧನ ಸಾಮರ್ಥ್ಯ 3000 ಮೆಗಾವ್ಯಾಟ್ ಗುರಿಯನ್ನು ತಲುಪಿದೆ.

English summary
Tata Power Renewable Energy Ltd, Tata Power's wholly-owned subsidiary, has commissioned a 50-MW DCR solar plant at Pavagada Solar Park in Pavagada, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X