ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ತುಮಕೂರು ಸಬ್ ಅರ್ಬನ್ ರೈಲಿಗೆ ಸರ್ಕಾರದ ಒಪ್ಪಿಗೆ

|
Google Oneindia Kannada News

ತುಮಕೂರು, ಜೂನ್ 07 : 'ಬೆಂಗಳೂರು-ತುಮಕೂರು ನಡುವೆ ಉಪ ನಗರ (ಸಬ್ ಅರ್ಬನ್) ರೈಲು ಯೋಜನೆ ಮಂಜೂರಾಗಿದೆ' ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಹೇಳಿದರು.

ಶುಕ್ರವಾರ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳ ವಿವಿಧ ಕಾಮಗಾರಿಗಳಿಗೆ ಪರಮೇಶ್ವರ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, 'ಬೆಂಗಳೂರು-ತುಮಕೂರು ನಡುವೆ ಮೆಟ್ರೋ ಅಥವ ಸಬ್ ಅರ್ಬನ್ ರೈಲು ಯೋಜನೆ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು' ಎಂದರು.

ಮೂರು ವರ್ಷಗಳಲ್ಲಿ ಸಬ್ ಅರ್ಬನ್ ರೈಲು ಓಡಲಿದೆ!ಮೂರು ವರ್ಷಗಳಲ್ಲಿ ಸಬ್ ಅರ್ಬನ್ ರೈಲು ಓಡಲಿದೆ!

Suburban rail between Bengaluru-Tumakuru soon

'ಬೆಂಗಳೂರು-ತುಮಕೂರು ನಡುವಿನ ಸಬ್ ಅರ್ಬನ್ ರೈಲು ಯೋಜನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರಕ್ಕೆ ಮಾಡಿದ ಒತ್ತಾಯಕ್ಕೆ ಸ್ಪಂದನೆ ಸಿಕ್ಕಿದೆ' ಎಂದು ತಿಳಿಸಿದರು.

ಸಬ್ ಅರ್ಬನ್ ರೈಲು ಬೆಂಗಳೂರು ವಾಹನ ದಟ್ಟಣೆಗೆ ಪರಿಹಾರ: ಪಿಯೂಷ್ ಗೋಯಲ್ಸಬ್ ಅರ್ಬನ್ ರೈಲು ಬೆಂಗಳೂರು ವಾಹನ ದಟ್ಟಣೆಗೆ ಪರಿಹಾರ: ಪಿಯೂಷ್ ಗೋಯಲ್

'ಇಂದು 5206 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ಚಾಲನೆ ನೀಡಲಾಗಿದೆ. ಕಾಲಮಿತಿಯೊಳಗೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ' ಎಂದರು.

ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್

ಬೆಂಗಳೂರು-ತುಮಕೂರು ನಡುವೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚಾರ ನಡೆಸುತ್ತಾರೆ. ಸಬ್ ಅರ್ಬನ್ ರೈಲುಗಳ ಸಂಚಾರ ಆರಂಭವಾದರೆ ಅನುಕೂಲವಾಗಲಿದೆ.

English summary
Karnataka Deputy chief minister Dr.G.Parameshwara said that state government sanctioned suburban rail between Bengaluru-Tumakuru. Rail service will began soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X