• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಶಿರಾದ ಕಳ್ಳಂಬೆಳ್ಳ ಪೊಲೀಸ್ ಠಾಣೆ ಬಳಿ ಆತ್ಮಗಳ ವಾಕಿಂಗ್

By ಕುಮಾರಸ್ವಾಮಿ
|

ಶಿರಾ (ತುಮಕೂರು ಜಿಲ್ಲೆ), ಮಾರ್ಚ್ 17: ಆತ್ಮಗಳು, ದೆವ್ವ- ಭೂತ ಇವುಗಳೆಲ್ಲ ಇವೆಯೋ ಇಲ್ಲವೋ ಎಂಬುದು ಚರ್ಚೆಗೆ ನಿಲುಕದ- ಉತ್ತರ ಸಿಗದ ಪ್ರಶ್ನೆಗಳು. ಅಯಾ ವ್ಯಕ್ತಿಯ ಅನುಭವಕ್ಕೆ ತಕ್ಕಂತೆ ಈ ಬಗ್ಗೆ ವ್ಯಾಖ್ಯಾನ ನೀಡುತ್ತಾರೆ. ಯಾವುದೇ ನಂಬಿಕೆಯನ್ನು ಪ್ರೋತ್ಸಾಹಿಸುವುದು ಅಥವಾ ಮೌಢ್ಯಕ್ಕೆ ಉತ್ತೇಜನ ನೀಡುವುದು ಈ ವರದಿಯ ಉದ್ದೇಶ ಇಲ್ಲ.

ಭಟ್ಕಳ ಪುರಸಭೆಯಲ್ಲಿ ದೆವ್ವದ ಕಾಟ, ದೇವರ ಮೊರೆ ಹೋದ ಅಧಿಕಾರಿಗಳು

ಆದರೆ, ಹೀಗೊಂದು ಬೆಳವಣಿಗೆ ಆಗುತ್ತಿದೆ ಎಂದು ಮಾಹಿತಿ ನೀಡುವುದಷ್ಟನ್ನೇ ಮಾಡುತ್ತಿದ್ದೇವೆ. ಆತ್ಮಗಳು ಪೊಲೀಸ್ ಠಾಣೆಗೆ ಬರುತ್ತಿವೆ. ಅದು ಕೂಡ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಮಾತ್ರ ಆ ದೃಶ್ಯಗಳು ಸೆರೆ ಆಗುತ್ತಿವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಈ ದೃಶ್ಯಗಳನ್ನು ನೋಡಿ, ಪೊಲೀಸರು ಹೆದರುತ್ತಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಪೊಲೀಸ್ ಠಾಣೆಯ ಮುಂಭಾಗ ಬಾಗಿಲು ಬಳಿ ಆತ್ಮಗಳು ಬಂದು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಆ ದೃಶ್ಯಗಳು ಈಗ ವೈರಲ್ ಆಗಿವೆ. ಶಿರಾದ ಕಳ್ಳಂಬೆಳ್ಳ ಬಳಿ ಆದ ಅಪಘಾತವೊಂದರಲ್ಲಿ ಮೃತಪಟ್ಟವರ ಆತ್ಮವೇ ಇದು ಎಂದು ಕೂಡ ವಿಡಿಯೋದಲ್ಲಿ ಮಾತನಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲೇ ಶಿರಾ ತಾಲೂಕಿನ ಕಳಂಬೆಳ್ಳ ಪೊಲೀಸ್ ಠಾಣೆ ಇದೆ.

English summary
Video about spirit cited in front of Tumakuru district Sira taluk Kallanbella police station went viral. Here is the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X