ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮತಾಂತರ ತಪ್ಪಲ್ಲ ಅಂದರೆ ಮರು ಮತಾಂತರ ತಪ್ಪೇ?'

|
Google Oneindia Kannada News

ತುಮಕೂರು, ಜ. 12 : ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ 'ಘರ್ ವಾಪಸಿ' ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಎಸ್‌.ಎಲ್.ಭೈರಪ್ಪ ಸಮರ್ಥಿಸಿಕೊಂಡಿದ್ದಾರೆ. 'ಮತಾಂತರ ತಪ್ಪಲ್ಲ ಅನ್ನುವುದಾದದರೆ ಮರು ಮತಾಂತರ ಹೇಗೆ ತಪ್ಪಾಗುತ್ತದೆ?' ಎಂದು ಅವರು ಪಶ್ನಿಸಿದ್ದಾರೆ.

ತುಮಕೂರಿನಲ್ಲಿ ಹೊಯ್ಸಳ ಕರ್ನಾಟಕ ಸಂಘದ ವಾರ್ಷಿಕೋತ್ಸ­ವದಲ್ಲಿ ಭಾನುವಾರ ಪಾಲ್ಗೊಂಡಿದ್ದ ಎಸ್‌.ಎಲ್.ಭೈರಪ್ಪ ಅವರು ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದರು.

SL Bhyrappa

ಮರು ಮತಾಂತರ : 'ಘರ್ ವಾಪಸಿ' ಕಾರ್ಯಕ್ರಮದ ಬಗ್ಗೆ ಮಾತನಾಡಿದ ಭೈರಪ್ಪ ಅವರು, 'ಆಸೆ, ಆಮಿಷ ತೋರಿಸಿ ಮತಾಂತರ ಮಾಡುವುದು ತಪ್ಪು. ಆದರೆ, ಯಾವುದೇ ಮತದ ನಂಬಿಕೆಗಳನ್ನು ಒಪ್ಪಿ, ಅದಕ್ಕೆ ಸೇರ್ಪಡೆಯಾಗುವುದು ತಪ್ಪಲ್ಲ ಎಂದು ಅಭಿಪ್ರಾಯಪಟ್ಟರು. [ಭೈರಪ್ಪಗೆ ರಾಷ್ಟ್ರೀಯ ಪ್ರೊಫೆಸರ್ ಗೌರವ]

ಪ್ರತಿಭಟನೆಯಿಂದ ಪ್ರಯೋಜನವಿಲ್ಲ : ಜಾತಿ ವ್ಯವಸ್ಥೆ ಬಗ್ಗೆ ಮಾತನಾಡಿದ ಎಸ್.ಎಲ್.ಭೈರಪ್ಪ ಅವರು, 'ಜಾತಿ ಹೋಗಬೇಕೆಂದು ಜಿಲ್ಲಾಧಿ­ಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ಮಾಡುವುದರಿಂದ ಪ್ರಯೋಜನ­ವಿಲ್ಲ. ಶೇ 15 ರಷ್ಟು ಮಂದಿ ಅಂತರ್ಜಾತಿ ವಿವಾಹವಾದರೆ ಕ್ರಮೇಣ ಜಾತಿ ನಾಶವಾಗಲಿದೆ' ಎಂದು ಹೇಳಿದರು. [ಘರ್ ವಾಪಸಿ ಕರೀನಾ ಕಪೂರ್ ಚಿತ್ರ : ಸೈಫ್ ಗರಂ]

ಸಾಹಿತ್ಯ ಸಮ್ಮೇಳನಗಳು : ಸಾಹಿತ್ಯ ಸಮ್ಮೇಳನಗಳ ವೇದಿಕೆಗಳ ಮೇಲೆ ರಾಜಕಾರಣಿಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದ ಭೈರಪ್ಪ ಅವರು ಮಹಾರಾಷ್ಟ್ರದ ಉದಾಹರಣೆ ನೀಡಿದರು. ಮಹಾರಾಷ್ಟ್ರದಲ್ಲಿ ನಡೆದ ಸಮ್ಮೇಳನದಲ್ಲಿ ರಾಜಕಾರಣಿಗಳಿಗೆ ವೇದಿಕೆ ಮೇಲೆ ಅವಕಾಶ ಇರುವುದಿಲ್ಲ. ಒಂದು ವೇಳೆ ಇದ್ದರೂ ಅಲ್ಲಿ ಭಾಷಣ ಮಾಡುವುದಿಲ್ಲ ಎಂದು ತಿಳಿಸಿದರು. [ಅರಿವಿನ ಪರಿಧಿಯ ಹೊರಗೆ ಉಡಾಯಿಸುವ ವಿಮಾನ 'ಯಾನ']

ಊಟ-ತಿಂಡಿ ದೊಡ್ಡ ವಿಚಾರವಲ್ಲ : 'ನೆರೆಯ ರಾಜ್ಯಗಳಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ಅತಿಥಿ ಸಾಹಿತಿಗಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಸಮ್ಮಳೇನದಲ್ಲಿ ಊಟ-ತಿಂಡಿ ದೊಡ್ಡ ವಿಚಾರ ಆಗಿರುವುದಿಲ್ಲ'. 'ನಮ್ಮ ರಾಜ್ಯದಲ್ಲಿ ಸಮ್ಮೇಳನಕ್ಕೆ ಒಂದು ತಿಂಗಳ ಹಿಂದೆಯೇ ಅಲ್ಲಿಂದ ಚಪಾತಿ, ರೊಟ್ಟಿ ಬಂತು ಎಂದು ಸುದ್ದಿ ಬರಲು ಆರಂಭವಾಗುತ್ತದೆ' ಇದು ನಿಲ್ಲಬೇಕು ಎಂದು ಅಭಿಪ್ರಾಯಪಟ್ಟರು.

English summary
'If religious conversions were acceptable, then religious reconversion should also be acceptable' said, Noted Kannada writer S.L.Bhyrappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X