• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಪರ್ಧೆಯಿಂದ ಹಿಂದೆ ಸರಿದ ಶಿರಾ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ

By ಕುಮಾರಸ್ವಾಮಿ
|

ಶಿರಾ (ತುಮಕೂರು), ಏಪ್ರಿಲ್ 21 : ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಆಗಿದ್ದ, ಪಕ್ಷ ಜಿಲ್ಲಾ ಉಪಾಧ್ಯಕ್ಷರೂ ಆಗಿದ್ದ ಬಿ.ಕೆ.ಮಂಜುನಾಥ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಅವರು ಬರೆದ ಪತ್ರವೊಂದು ಲಭ್ಯವಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಸ್ಪಂದನೆ ಸರಿಯಾಗಿರಲಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿರುವಂತಿದೆ.

ಕರ್ನಾಟಕ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಈ ಬಾರಿ ವಿಧಾನಸಭೆ ಚುನಾವಣೆಗೆ ನನ್ನ ಮೇಲೆ ವಿಶ್ವಾಸವಿಟ್ಟು, ಶಿರಾ ಕ್ಷೇತ್ರದ ಬಿಜೆಪಿ ಟಿಕೆಟ್ ನನಗೆ ನೀಡಲಾಗಿತ್ತು. ಬಿ ಫಾರಂ ತೆಗೆದುಕೊಂಡು ಹೋಗುವಂತೆ ಕಚೇರಿಯಿಂದ ಕರೆ ಬಂದಿತ್ತು. ಏಪ್ರಿಲ್ ಹದಿನೆಂಟರಂದು ಬೆಳಗ್ಗೆ ಬೆಂಗಳೂರಿಗೆ ತೆರಳಿ, ಯಡಿಯೂರಪ್ಪನವರನ್ನು ಭೇಟಿಯಾದೆ. ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದರು.

ಮರು ದಿನ ಸಾಯಂಕಾಲ ಸ್ವಕ್ಷೇತ್ರಕ್ಕೆ ಮರಳಿ ಕಾರ್ಯಕರ್ತರು, ಕುಟುಂಬ ಸದಸ್ಯರ ಅಭಿಪ್ರಾಯ ಪಡೆದು, ಈ ಬಾರಿ ಚುನಾವಣೆಗೆ ಸ್ಪರ್ಧಿಸಬಾರದು ಎಂದು ತೀರ್ಮಾನಿಸಿದ್ದೇನೆ. ನಿಮ್ಮ ಹಾಗೂ ಪಕ್ಷದ ಮುಂದಿನ ನಿಬಂಧನೆಗಳಿಗೆ ನಾನು ಬದ್ಧನಾಗಿರುತ್ತೇನೆ ಎಂಬ ಒಕ್ಕಣೆಯುಳ್ಳ ಪತ್ರವೊಂದನ್ನು ಮಂಜುನಾಥ್ ಬರೆದಿದ್ದಾರೆ.

English summary
Karnataka Assembly Elections 2018: Tumakuru district Sira assembly constituency BJP ticket announced candidate BK Manjunath decided to not contest in elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X