ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾ ಉಪಚುನಾವಣೆ; ಬಿರುಸಿನಿಂದ ನಡೆದಿದೆ ಮತದಾನ ಪ್ರಕ್ರಿಯೆ

|
Google Oneindia Kannada News

ತುಮಕೂರು, ನವೆಂಬರ್ 03: ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.

ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಸವಾಲು ಇದೀಗ ಪಕ್ಷಗಳ ಮುಂದಿದೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 15 ದಿನಗಳಿಂದ ಭರ್ಜರಿ ಪ್ರಚಾರ ನಡೆಸಲಾಗಿತ್ತು. ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಮತದಾರರ ಸೆಳೆಯಲು ಕೊನೆ ಕ್ಷಣದವರೆಗೂ ಗೆಲುವಿಗೆ ಕಾರ್ಯತಂತ್ರ ರೂಪಿಸಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಬಿಜೆಪಿಯಿಂದ ರಾಜೇಶ್ ಗೌಡ, ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಾಮ್ಮ ಸೇರಿದಂತೆ ಮತ್ತಿತರರು ಕಣದಲ್ಲಿದ್ದಾರೆ.

Live Updates; ಆರ್. ಆರ್. ನಗರ, ಶಿರಾ; ಚುರುಕಿನಿಂದ ಸಾಗಿದೆ ಮತದಾನLive Updates; ಆರ್. ಆರ್. ನಗರ, ಶಿರಾ; ಚುರುಕಿನಿಂದ ಸಾಗಿದೆ ಮತದಾನ

ಜೆಡಿಎಸ್ ಅಭ್ಯರ್ಥಿ ಅಮ್ಮಾಜಾಮ್ಮ ಪತಿ ದಿ. ಸತ್ಯನಾರಾಯಣ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ನಂತರ 9 ಗಂಟೆಗೆ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿಯಾಗಿ ರಾಜೇಶ್ ಗೌಡ ಸ್ಪರ್ಧಿಸಿದ್ದು, ಚಿರತೆ ಹಳ್ಳಿಯಲ್ಲಿರುವ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಚಿರತೆಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದರು.

Sira By Elections: Challenge Of Gaining Constituency Now Ahead Of Political Parties

ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಟಿ.ಬಿ. ಜಯಚಂದ್ರ ಕೂಡ ರಾಘವೇಂದ್ರ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ನಂತರ ನಗರಸಭೆ ಕಚೇರಿ ಪಕ್ಕದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಯಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಮತದಾನ ಮಾಡಿದ್ದಾರೆ.

ಚುನಾವಣಾ ಭವಿಷ್ಯ: ಸಿಎಂ ಪುತ್ರ ವಿಜಯೇಂದ್ರ ಹೋದಲ್ಲಿ ಸೋಲೇ ಇಲ್ಲಚುನಾವಣಾ ಭವಿಷ್ಯ: ಸಿಎಂ ಪುತ್ರ ವಿಜಯೇಂದ್ರ ಹೋದಲ್ಲಿ ಸೋಲೇ ಇಲ್ಲ

ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಪ್ರಕ್ರಿಯೆ 11 ನಿಮಿಷ ತಡವಾಗಿ ಆರಂಭವಾಯಿತು. ಶಿರಾ ತಾಲೂಕಿನ ಚಿರತೆಹಳ್ಳಿ ಮತಗಟ್ಟೆ ಸಂಖ್ಯೆ 7ರ ಮತ ಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಹೀಗಾಗಿ ಸಿಬ್ಬಂದಿ ಮತಯಂತ್ರದ ಬದಲಾವಣೆ ಮಾಡಿದ ನಂತರ ಮತದಾನಕ್ಕೆ ಅವಕಾಶ ನೀಡಲಾಯಿತು. ಮತ್ತೊಂದು ಕಡೆ ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾರರು ಬಂದು ಕಾದು ಕುಳಿತಿದ್ದರೂ, ಪಕ್ಷದ ಏಜೆಂಟ್ ಗಳು ಬಾರದಿದ್ದರಿಂದ ಮತದಾನ ಶುರು ಮಾಡುವುದು ಸ್ವಲ್ಪ ವಿಳಂಬವಾಯಿತು.

Sira By Elections: Challenge Of Gaining Constituency Now Ahead Of Political Parties

 ಆರ್. ಆರ್. ನಗರ; 27 ಕೋವಿಡ್ ಸೋಂಕಿತರಿಂದ ಮತದಾನ ಆರ್. ಆರ್. ನಗರ; 27 ಕೋವಿಡ್ ಸೋಂಕಿತರಿಂದ ಮತದಾನ

ಕೋವಿಡ್ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದ್ದು, ಒಬ್ಬೊಬ್ಬರಾಗಿ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇಲ್ಲಿಯವರೆಗೆ ಶಿರಾ ಉಪಚುನಾವಣೆ ಶೇಕಡಾ 8.10 % ಮತದಾನ ಆಗಿರುವುದಾಗಿ ತಿಳಿದುಬಂದಿದೆ.

English summary
Voting for the by-election for the Sira constituency in Tumkur district began at 7 am tuesday nov 03. The challenge of retaining constituencies is now ahead of the parties
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X