• search
 • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಪ ಚುನಾವಣೆ; ಆರ್. ಆರ್. ನಗರಕ್ಕಿಂತ ಶಿರಾದಲ್ಲೇ ಹೆಚ್ಚು ಮತದಾನ

|

ತುಮಕೂರು, ನವೆಂಬರ್ 03: ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆಯ ಮತದಾನ ನಡೆಯುತ್ತಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ.

   Sira , JDS ಅಭ್ಯರ್ಥಿ ಆಮ್ಮಾಜಮ್ಮ ಅವರು ಮತ ಚಲಾಯಿಸುವ ಮುನ್ನ ಮಾಡಿದ್ದೇನು | Oneindia Kannada

   ತುಮಕೂರು ಜಿಲ್ಲೆಯ ಶಿರಾದಲ್ಲಿ ಬೆಳಗ್ಗೆ 11 ಗಂಟೆಯ ತನಕ ಶೇ 23.63ರಷ್ಟು ಮತದಾನ ನಡೆದಿದೆ. ಆದರೆ, ಆರ್. ಆರ್. ನಗರ ಕ್ಷೇತ್ರದಲ್ಲಿ ಕೇವಲ 14.44ರಷ್ಟು ಮತದಾನವಾಗಿದೆ. ಬೆಂಗಳೂರು ನಗರದ ಜನರು ಮುಂಜಾನೆ ಮತ ಚಲಾವಣೆ ಮಾಡಲು ಆಸಕ್ತಿ ತೋರಿಸಿಲ್ಲ.

   Karnataka By Elections 2020 Live Updates; ಆರ್‌. ಆರ್. ನಗರ ಶೇ 14, ಶಿರಾ ಶೇ 23ರಷ್ಟು ಮತದಾನ

   ಶಿರಾ ಕ್ಷೇತ್ರದಲ್ಲಿ ಉಪ ಚುನಾವಣೆಯ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮತಗಟ್ಟೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಮತದಾರರು ಸಹ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಶಾಂತಿಯುತವಾಗಿ ಮತಚಲಾವಣೆ ಮಾಡುತ್ತಿದ್ದಾರೆ.

   ಶಿರಾ ಉಪಚುನಾವಣೆ; ಬಿರುಸಿನಿಂದ ನಡೆದಿದೆ ಮತದಾನ ಪ್ರಕ್ರಿಯೆ

   ಉಪ ಚುನಾವಣೆ ಅಭ್ಯರ್ಥಿಗಳಾದ ಡಾ. ರಾಜೇಶ್ ಗೌಡ (ಬಿಜೆಪಿ), ಟಿ. ಬಿ. ಜಯಚಂದ್ರ (ಕಾಂಗ್ರೆಸ್), ಅಮ್ಮಾಜಮ್ಮ (ಜೆಡಿಎಸ್) ಬೆಳಗ್ಗೆಯೇ ಮತದಾನ ಮಾಡುವ ಮೂಲಕ ಜನರನ್ನು ಹುರಿದುಂಬಿಸಿದ್ದಾರೆ. ಮತಗಟ್ಟೆಗಳಲ್ಲಿ ಜನರು ಸಾಲಾಗಿ ನಿಂತಿದ್ದು ಉತ್ಸಾಹದಿಂದ ಮತದಾನದಲ್ಲಿ ತೊಡಗಿದ್ದಾರೆ.

   ಬೆಂಗಳೂರು ನಗರದ ಜನರು ಮತದಾನ ಮಾಡಲು ಆಸಕ್ತಿ ತೋರಿಸುವುದಿಲ್ಲ ಎಂಬ ಆರೋಪವಿದೆ. ಅದರಲ್ಲೂ ಈಗ ಕೋವಿಡ್ ಪರಿಸ್ಥಿತಿಯಲ್ಲಿ ಮತದಾನ ಪ್ರಮಾಣ ಎಷ್ಟಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

   English summary
   23.63 percent voting in Tumakuru district Sira assembly seat by elections till 11 am. People can vote till 6 pm.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X