ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾ ಉಪ ಚುನಾವಣೆ ಫಲಿತಾಂಶ; ಪಕ್ಷೇತರ ಅಭ್ಯರ್ಥಿ ಪ್ರತಿಭಟನೆ

|
Google Oneindia Kannada News

ತುಮಕೂರು, ನವೆಂಬರ್ 10: ತುಮಕೂರು ಜಿಲ್ಲೆಯ sira ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಪಕ್ಷೇತರ ಅಭ್ಯರ್ಥಿಯೊಬ್ಬರು ಮತ ಎಣಿಕೆ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ.

ಮಂಗಳವಾರ ತುಮಕೂರು ನಗರದ ಪಾಲಿಟೆಕ್ನಕ್ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಪಕ್ಷೇತರ ಅಭ್ಯರ್ಥಿ ಆಂಬ್ರೋಸ್ ಡಿ. ಮೆಲ್ಲೊ ಪ್ರತಿಭಟನೆ ನಡೆಸಿದರು. ತಮ್ಮನ್ನು ಮತ ಎಣಿಕೆ ಕೇಂದ್ರಕ್ಕೆ ಬಿಡುತ್ತಿಲ್ಲ ಎಂದು ಆರೋಪಿಸಿದರು.

ಶಿರಾ ಉಪ ಚುನಾವಣೆ ಫಲಿತಾಂಶ; ಕಾಂಗ್ರೆಸ್, ಬಿಜೆಪಿ ನೇರ ಪೈಪೋಟಿ ಶಿರಾ ಉಪ ಚುನಾವಣೆ ಫಲಿತಾಂಶ; ಕಾಂಗ್ರೆಸ್, ಬಿಜೆಪಿ ನೇರ ಪೈಪೋಟಿ

ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ತಿಪ್ಪೇಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯನ್ನು ಮತ ಕೇಂದ್ರಕ್ಕೆ ಕಳುಹಿಸಿಕೊಟ್ಟರು. ಇದರಿಂದಾಗಿ ಪರಿಸ್ಥಿತಿ ತಿಳಿಗೊಂಡಿತು. ಶಿರಾದಲ್ಲಿ ಬಿಜೆಪಿಯ ಡಾ. ರಾಜೇಶ್ ಗೌಡ ಮುನ್ನಡೆ ಸಾಧಿಸಿದ್ದಾರೆ.

ಶಿರಾ ಉಪ ಚುನಾವಣೆ; 4821 ಅಂಚೆ ಮತಗಳ ಎಣಿಕೆ ಶಿರಾ ಉಪ ಚುನಾವಣೆ; 4821 ಅಂಚೆ ಮತಗಳ ಎಣಿಕೆ

 Sira By Election Result 2020 Independent Candidate Protest

ನೀರು ಮಾರಾಟ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮೌನ ಪ್ರತಿಭಟನೆ ನಡೆಸುವ ಆಂಬ್ರೋಸ್ ಡಿ. ಮೆಲ್ಲೊ ಜನರಿಗೆ ಚಿರಪರಿಚಿತರು. ಅವರು ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣಕ್ಕಿಳಿದಿದ್ದಾರೆ.

RR Nagar, Sira By Election Results 2020 Live Updates; ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶRR Nagar, Sira By Election Results 2020 Live Updates; ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶ

11.30ರ ಮಾಹಿತಿಯಂತೆ ಶಿರಾದಲ್ಲಿ ಬಿಜೆಪಿಯ ಡಾ. ರಾಜೇಶ್ ಗೌಡ 21,401 ಮತ. ಕಾಂಗ್ರೆಸ್‌ನ ಟಿ. ಬಿ. ಜಯಚಂದ್ರ 18,076 ಮತ ಮತ್ತು ಜೆಡಿಎಸ್‌ನ ಅಮ್ಮಾಜಮ್ಮ 11,648 ಮತಗಳನ್ನು ಪಡೆದಿದ್ದಾರೆ.

ಶಿರಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಆದರೆ, 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು.

English summary
Sira bypoll Results 2020 Live Updates in Kannada; Independent candidate Ambrose D'Mello protest near election counting center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X