ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಮಗ ನಾಳೆ ಬೆಳಗ್ಗೆ ಈ ಕಡೆ ತಿರುಗಿ ನೋಡಲ್ಲ; ಎಚ್‌ಡಿಕೆ

|
Google Oneindia Kannada News

ತುಮಕೂರು, ಅಕ್ಟೋಬರ್ 21 : " ಬಿ. ವೈ. ವಿಜಯೇಂದ್ರ ಹಣದ ತೈಲಿಯನ್ನೇ ಇಟ್ಟುಕೊಂಡು ಶಿರಾಕ್ಕೆ ಆಗಮಿಸಿದ್ದಾರೆ. ಯುವಕರಿಗೆ ಆಮಿಷವೊಡ್ಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಕಷ್ಟಪಟ್ಟು ದುಡಿದ ಹಣವನ್ನು ತಂದಿಲ್ಲ" ಎಂದು ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬುಧವಾರ ಶಿರಾ ಉಪ ಚುನಾವಣೆಗೆ ಆಲದಮರ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಚಾರ ನಡೆಸಿದರು. ಶಿರಾ ಕ್ಷೇತ್ರದ ಅಭ್ಯರ್ಥಿ ಅಮ್ಮಾಜಮ್ಮ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಿರಾ ಉಪ ಚುನಾವಣೆ; ಪಕ್ಷದ ಗೆಲುವಿಗೆ ವ್ಯೂಹ ರಚಿಸಿದ ದೇವೇಗೌಡರು! ಶಿರಾ ಉಪ ಚುನಾವಣೆ; ಪಕ್ಷದ ಗೆಲುವಿಗೆ ವ್ಯೂಹ ರಚಿಸಿದ ದೇವೇಗೌಡರು!

ಚುನಾವಣಾ ಪ್ರಚಾರದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ವಿರುದ್ಧ ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. "ಇಂದು ಶಿರಾಗೆ ಬಂದಿರೋ ಸಿಎಂ ಮಗ ನಾಳೆ ಬೆಳಗ್ಗೆ ಈ ಕಡೆ ತಿರುಗಿ ನೋಡಲ್ಲ" ಎಂದು ಟೀಕಿಸಿದರು.

ಶಿರಾ ಉಪ ಚುನಾವಣೆ ಚಿತ್ರಣ ಬದಲಿಸಿದ ಬಿ. ವೈ. ವಿಜಯೇಂದ್ರ! ಶಿರಾ ಉಪ ಚುನಾವಣೆ ಚಿತ್ರಣ ಬದಲಿಸಿದ ಬಿ. ವೈ. ವಿಜಯೇಂದ್ರ!

Sira By Election HD Kumaraswamy Verbal Attack On BY Vijayendra

"ಬಿಜೆಪಿಯವರು ನಿಮ್ಮನ್ನು ಕೊಂಡುಕೊಳ್ಳುತ್ತೇವೆ ಎನ್ನುವ ಉದ್ಧಟತನ ತೋರಿಸುತ್ತಿದ್ದಾರೆ. ವಿಜಯೇಂದ್ರ ಮಾತುಗಳಿಗೆ ಉತ್ತರ ಕೊಡಿ. ಆ ವ್ಯಕ್ತಿ ಬೆಂಗಳೂರಿನಲ್ಲಿ ಕುಳಿತು ಪ್ರತಿದಿನ ಹಣ ಲೂಟಿ ಮಾಡುತ್ತಾನೆ. ಹಣ ಲೂಟಿ ಅಷ್ಟೇ ಅವರ ಸಾಧನೆ ಬೇರೆ ಏನೂ ಇಲ್ಲ" ಎಂದು ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದರು.

ಶಿರಾ ಉಪ ಚುನಾವಣೆ; ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ! ಶಿರಾ ಉಪ ಚುನಾವಣೆ; ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ!

"ಬಿಜೆಪಿಯವರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಯುವಕರು ಕಾಂಗ್ರೆಸ್ ಮತ್ತು ಬಿಜೆಪಿಯ ಆಮಿಷಗಳಿಗೆ ಬಲಿಯಾಗಬೇಡಿ. ಅವರ ಹಣಕ್ಕೆ ಮಾರು ಹೋಗದೆ ನಮ್ಮ ಪಕ್ಷಕ್ಕೆ ಮತ ನೀಡಿ" ಎಂದು ಕುಮಾರಸ್ವಾಮಿ ಕರೆ ನೀಡಿದರು.

"ನಮ್ಮ ಅಭ್ಯರ್ಥಿಗೆ ಬಿಜೆಪಿಯವರು ಹಲವಾರು ಆಮಿಷವೊಡ್ಡಿದರು. ಸ್ವತಃ ಡಿಸಿಎಂ ಮನೆ ಬಾಗಿಲಿಗೆ ಬಂದು ನಮ್ಮ ಪಕ್ಷಕ್ಕೆ ಬನ್ನಿ ಎಂದು ಒತ್ತಡ ಹಾಕಿದರು. ಅಮ್ಮಾಜಮ್ಮ ಅವರು ನಮ್ಮ ಪಕ್ಷಕ್ಕೆ ದ್ರೋಹ ಮಾಡಬಾರದು ಎಂದು ಜೆಡಿಎಸ್‌ನಿಂದ ಸ್ಪರ್ಧೆ ಮಾಡುತ್ತಿದ್ದಾರೆ" ಎಂದು ಕುಮಾರಸ್ವಾಮಿ ಹೇಳಿದರು.

ನವೆಂಬರ್ 3ರಂದು ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ರಾಜೇಶ್ ಗೌಡ, ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ ಅಭ್ಯರ್ಥಿಗಳು. ಬಿ. ವೈ. ವಿಜಯೇಂದ್ರ ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿದ್ದು ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

English summary
Former CM H. D. Kumaraswamy called Sira people to answer Karnataka BJP vice president and CM Yediyurappa son B.Y. Vijayendra who busy in by election campaign in Sira.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X