ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾ ಉಪಚುನಾವಣೆ: ಇದು ಬಿ.ವೈ.ವಿಜಯೇಂದ್ರ ಮತ್ತು ಟೀಂನ ವರ್ಕಿಂಗ್ ಸ್ಟೈಲ್!

|
Google Oneindia Kannada News

ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಶಿರಾ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಮೂರು ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಮತದಾರನನ್ನು ಓಲೈಸಲು ಸಾಧ್ಯವಾಗುವ ಎಲ್ಲಾ ದಾರಿಯನ್ನು ಬಳಸುತ್ತಿದೆ.

ಕೊರೊನಾ ಹೋಂ ಐಷೋಲೇಶನ್ ನಿಂದ ಹೊರಬಂದಿರುವ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಪುತ್ರ ವಿಜಯೇಂದ್ರನನ್ನು ಮತ್ತೆ ಆಶೀರ್ವದಿಸಿ ಶಿರಾಗೆ ಕಳುಹಿಸಿಕೊಟ್ಟ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರನನ್ನು ಮತ್ತೆ ಆಶೀರ್ವದಿಸಿ ಶಿರಾಗೆ ಕಳುಹಿಸಿಕೊಟ್ಟ ಸಿಎಂ ಯಡಿಯೂರಪ್ಪ

ಶಿರಾ ಕ್ಷೇತ್ರದ ಉಸ್ತುವಾರಿಯನ್ನು ಬಿಜೆಪಿ, ಹಲವು ಸಚಿವರು ಮತ್ತು ಮುಖಂಡರಿಗೆ ನೀಡಿದೆಯಾದರೂ, ಮಂಚೂಣಿಯಲ್ಲಿ ಗೆಲುವಿಗಾಗಿ ಠೊಂಕ ಕಟ್ಟಿ ನಿಂತಿರುವುದು ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ. ತಮ್ಮ, ವಿಶಿಷ್ಟ ಕಾರ್ಯತಂತ್ರದ ಮೂಲಕ ಪ್ರಮುಖವಾಗಿ ಯುವಕರನ್ನು ವಿಜಯೇಂದ್ರ ಟಾರ್ಗೆಟ್ ಮಾಡುತ್ತಿದ್ದಾರೆ.

ವಿಜಯೇಂದ್ರ ಪ್ರಚಾರಕ್ಕೆ ಇಳಿದ ನಂತರ, ಕ್ಷೇತ್ರದ ಚಿತ್ರಣ ಬದಲಾಗಿರುವುದಂತೂ ಸ್ಪಷ್ಟ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಎನ್ನುವಂತಿದ್ದದ್ದು ಈಗ ತ್ರಿಕೋಣ ಸ್ಪರ್ಧೆಯಾಗುವ ಸ್ಪಷ್ಟ ಲಕ್ಷಣಗಳು ಕಾಣಿಸುತ್ತಿದೆ. ಬಿಜೆಪಿ ಇಲ್ಲಿ ವಿಭಿನ್ನ ರೀತಿಯಲ್ಲಿ ಪ್ರಚಾರಕ್ಕೆ ಇಳಿದಿದೆ.

ಉಪ ಚುನಾವಣೆ: ಒಟ್ಟು 37 ಅಭ್ಯರ್ಥಿಗಳು ಕಣದಲ್ಲಿ!ಉಪ ಚುನಾವಣೆ: ಒಟ್ಟು 37 ಅಭ್ಯರ್ಥಿಗಳು ಕಣದಲ್ಲಿ!

ಕಾಂಗ್ರೆಸ್, ಹೋಬಳಿ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದೆ

ಕಾಂಗ್ರೆಸ್, ಹೋಬಳಿ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದೆ

ಶಿರಾ ಉಪಚುನಾವಣೆಯಲ್ಲಿ, ಜೆಡಿಎಸ್, ಕಾಂಗ್ರೆಸ್ ಚಾಪೆ ಕೆಳಗೆ ನುಗ್ಗಿದರೆ, ಬಿಜೆಪಿ ರಂಗೋಲಿಯೊಳಗೆ ನುಗ್ಗುತ್ತಿರುವ ಹಾಗೆ ಪ್ರಚಾರವನ್ನು ಮಾಡುತ್ತಿದೆ. ಪ್ರಮುಖವಾಗಿ, ಕಾಂಗ್ರೆಸ್, ಹೋಬಳಿ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದೆ. ಪ್ರತೀ ಹೋಬಳಿ ಮುಖಂಡರನ್ನು ಭೇಟಿಯಾಗಿ ಮತಯಾಚಿಸುತ್ತದೆ. ಆದರೆ, ಬಿಜೆಪಿ ಬೇರೆ ತಂತ್ರವನ್ನು ಬಳಸಿಕೊಳ್ಳುತ್ತಿದೆ.

ಕೇಸರಿ ಶಾಲನ್ನು ಹಾಕಿ ಮತ ಯಾಚಿಸುತ್ತಿದ್ದಾರೆ

ಕೇಸರಿ ಶಾಲನ್ನು ಹಾಕಿ ಮತ ಯಾಚಿಸುತ್ತಿದ್ದಾರೆ

ಬಿಜೆಪಿ, ಪ್ರತೀ ಹೋಬಳಿಯ ಜವಾಬ್ದಾರಿಯನ್ನು, ಅದೇ ಗ್ರಾಮದ ತಲಾ 3-4 ಜನರಿಗೆ ವಹಿಸಿದೆ. ಇದರಲ್ಲಿ ಬಹುತೇಕ ಮುಖಂಡರು ಯುವಕರು ಎನ್ನುವುದು ಗಮನಿಸಬೇಕಾದ ವಿಚಾರ. ಇವರೆಲ್ಲರೂ, ಗ್ರಾಮದ ಪ್ರತಿಯೊಂದು ಮನೆಗೆ ಹೋಗಿ, ಕೇಸರಿ ಶಾಲನ್ನು ಹಾಕಿ ಮತ ಯಾಚಿಸುತ್ತಿದ್ದಾರೆ. ಈ ಯುವಕರಿಗೆ ಮತದಾನದ ದಿನದ ಜವಾಬ್ದಾರಿಯನ್ನೂ ವಹಿಸಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಕ್ಷೇತ್ರಾಭಿವೃದ್ದಿ, ಹಿಂದುತ್ವ ಮತ್ತು ರಾಷ್ಟ್ರೀಯತೆಗೆ ಹೆಚ್ಚಿನ ಒತ್ತು

ಕ್ಷೇತ್ರಾಭಿವೃದ್ದಿ, ಹಿಂದುತ್ವ ಮತ್ತು ರಾಷ್ಟ್ರೀಯತೆಗೆ ಹೆಚ್ಚಿನ ಒತ್ತು

ಕೇಸರಿ ಶಾಲನ್ನು ಹಾಕಿ ಮತಯಾಚಿಸುವಾಗ ಕ್ಷೇತ್ರಾಭಿವೃದ್ದಿ, ಹಿಂದುತ್ವ ಮತ್ತು ರಾಷ್ಟ್ರೀಯತೆಗೆ ಹೆಚ್ಚಿನ ಒತ್ತನ್ನು ಬಿಜೆಪಿ ನೀಡುತ್ತಿದೆ. ವಿಜಯೇಂದ್ರ ಮತ್ತು ತಂಡಕ್ಕೆ ಯುವಕರು ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ. ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ವೃದ್ದಿಸಿಕೊಳ್ಳಲು ವಿಜಯೇಂದ್ರಗೆ ಇರುವ ಸದಾವಕಾಶ ಇದಾಗಿದ್ದು, ಇದನ್ನು ಯಾವುದೇ ರೀತಿಯಲ್ಲಿ ಕೈತಪ್ಪದಂತೆ ನೋಡಿಕೊಳ್ಳಲು ಎಲ್ಲಾ ಪ್ರಯತ್ನವನ್ನು ವಿಜಯೇಂದ್ರ ಎಂಡ್ ಟೀಂ ಮಾಡುತ್ತಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಫೈಟ್ ಏರ್ಪಡುವ ಸಾಧ್ಯತೆ

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಫೈಟ್ ಏರ್ಪಡುವ ಸಾಧ್ಯತೆ

ಕೆ.ಆರ್.ಪೇಟೆಯಂತೆ, ಶಿರಾದಲ್ಲೂ ಬಿಜೆಪಿಗೆ ಬೇಸ್ ಇಲ್ಲ ಎನ್ನುವ ಮಾತಿತ್ತು. ಆದರೆ, ಕೆ.ಆರ್.ಪೇಟೆಯ ಫಲಿತಾಂಶ, ಸರಿಯಾಗಿ ಕಾರ್ಯತಂತ್ರ ರೂಪಿಸಿದರೆ, ಗೆಲುವು ಅಸಾಧ್ಯವಲ್ಲ ಎನ್ನುವುದನ್ನು ರುಜುವಾತು ಪಡಿಸಿತ್ತು. ಅದರಂತೆಯೇ, ಶಿರಾದಲ್ಲೂ ಪರಿಸ್ಥಿತಿ ಬದಲಾಗಿದೆ. ಒಂದು ಹಂತದಲ್ಲಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಫೈಟ್ ಏರ್ಪಡುವ ಸಾಧ್ಯತೆಯ ಬಗ್ಗೆ ಮಾತು ಕೇಳಿಬರುತ್ತಿದೆ.

English summary
Sira By Election: BY Vijayendra And BJP Team Reaching Each House And Seeking The Vote,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X