ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾ ಉಪ ಚುನಾವಣೆ; 4821 ಅಂಚೆ ಮತಗಳ ಎಣಿಕೆ

|
Google Oneindia Kannada News

ತುಮಕೂರು, ನವೆಂಬರ್ 10 : ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದ್ದು, ಬಳಿಕ ಇವಿಎಂ ಅನ್ನು ಓಪನ್ ಮಾಡಿ ಮತ ಎಣಿಕೆ ಆರಂಭ ಮಾಡಲಾಗುತ್ತದೆ.

ಮಂಗಳವಾರ ಬೆಳಗ್ಗೆ 8 ಗಂಟೆಗೆ ತುಮಕೂರು ನಗರದ ಪಾಲಿಟೆಕ್ನಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಎರಡು ಕೊಠಡಿ, 14 ಟೇಬಲ್ ವ್ಯವಸ್ಥೆಯನ್ನು ಮತ ಎಣಿಕೆಗಾಗಿ ಮಾಡಲಾಗಿದೆ. 24 ಸುತ್ತಿನಲ್ಲಿ ಎಣಿಕೆ ಕಾರ್ಯ ನಡೆಯಲಿದೆ.

RR Nagar, Sira By Election Results 2020 Live Updates; ಉಪ ಚುನಾವಣೆ ಮತ ಎಣಿಕೆ ಆರಂಭ RR Nagar, Sira By Election Results 2020 Live Updates; ಉಪ ಚುನಾವಣೆ ಮತ ಎಣಿಕೆ ಆರಂಭ

Sira By Election 2020 4821 Postal Votes Counting Began

ಶಿರಾದಲ್ಲಿ ಬಿಜೆಪಿಯಿಂದ ಡಾ. ರಾಜೇಶ್ ಗೌಡ, ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ ಮತ್ತು ಜೆಡಿಎಸ್‌ನಿಂದ ಅಮ್ಮಾಜಮ್ಮ ಸೇರಿದಂತೆ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ. ಕ್ಷೇತ್ರದಲ್ಲಿ 4821 ಅಂಚೆ ಮತಗಳು ಚಲಾವಣೆಯಾಗಿವೆ.

ಶಿರಾ: 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಲಿದೆಶಿರಾ: 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಲಿದೆ

ಶಿರಾದಲ್ಲಿ ಇದುವರೆಗೂ ಬಿಜೆಪಿ 212, ಕಾಂಗ್ರೆಸ್ 72 ಮತ್ತು ಜೆಡಿಎಸ್ 56 ಅಂಚೆ ಮತಗಳನ್ನು ಪಡೆದಿವೆ. ಕೋವಿಡ್ ಸೋಂಕಿತರು, ವೃದ್ಧರು ಅಂಚೆ ಮತಗಳನ್ನು ಚಲಾವಣೆ ಮಾಡಲು ಈ ಚುನಾವಣೆಯಲ್ಲಿ ಅವಕಾಶ ನೀಡಲಾಗಿತ್ತು. ಆದ್ದರಿಂದ, ಹೆಚ್ಚಿನ ಅಂಚೆ ಮತಗಳ ಚಲಾವಣೆ ನಡೆದಿದೆ.

Sira Exit Poll Results; ಶಿರಾದಲ್ಲಿ ಖಾತೆ ತೆರೆಯಲಿದೆ ಬಿಜೆಪಿ Sira Exit Poll Results; ಶಿರಾದಲ್ಲಿ ಖಾತೆ ತೆರೆಯಲಿದೆ ಬಿಜೆಪಿ

ಮೂರು ಪಕ್ಷದ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದತ್ತ ಬಂದಿಲ್ಲ. ಕಾಂಗ್ರೆಸ್‌ನ ಟಿ. ಬಿ. ಜಯಚಂದ್ರಗೆ ಕೋವಿಡ್ ಸೋಂಕು ತಗುಲಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೋಮವಾರ ರಾತ್ರಿ ದಾಖಲಾಗಿದ್ದಾರೆ.

ಜೆಡಿಎಸ್‌ನ ಅಮ್ಮಾಜಮ್ಮ ಮತ್ತು ಬಿಜೆಪಿಯ ಡಾ. ರಾಜೇಶ್ ಗೌಡ ಸಹ ಇನ್ನೂ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿಲ್ಲ. ಫಲಿತಾಂಶದ ಮುನ್ನಡೆ ನೋಡಿಕೊಂಡು ಆಗಮಿಸುವ ನಿರೀಕ್ಷೆ ಇದೆ.

English summary
Sira bypoll Results 2020 Live Updates in Kannada: Postal voting counting began in Tumakuru district Sira.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X