ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ಸಿನಲ್ಲಿ ರಣೋತ್ಸಾಹ, ಆದರೆ ಜೆಡಿಎಸ್..?

|
Google Oneindia Kannada News

ತುಮಕೂರು, ಅ 7: ಶಿರಾ ಅಸೆಂಬ್ಲಿ ಉಪಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್ ಆಖಾಡಕ್ಕಿಳಿದಿತ್ತು. ಅಲ್ಪಸ್ವಲ್ಪ ಗೊಂದಲವನ್ನು ಬಿಟ್ಟರೆ, ಯಾವುದೇ ಕಿರಿಕಿರಿಯಿಲ್ಲದೇ ಟಿ.ಬಿ.ಜಯಚಂದ್ರ ಅವರ ಹೆಸರನ್ನು (ಬಹುತೇಕ) ಅಂತಿಮಗೊಳಿಸಿತ್ತು.

ಕೆ.ಎನ್.ರಾಜಣ್ಣ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ಡಿ.ಕೆ.ಶಿವಕುಮಾರ್ ಮತ್ತು ತಂಡ, ಪಕ್ಷದಲ್ಲಿ ಮತ್ತು ಕಾರ್ಯಕರ್ತರಲ್ಲಿ ಯಾವುದೇ ಭಿನ್ನಮತ ಮೂಡದಂತೆ ನೋಡಿಕೊಂಡರು. ಇನ್ನು, ಬಿಜೆಪಿಯಲ್ಲೂ ಹೆಚ್ಚಿನ ಗೊಂದಲವಿಲ್ಲ.

ಶಿರಾ ಉಪ ಚುನಾವಣೆಯಲ್ಲಿ ಅಚ್ಚರಿಯ ಹೆಸರು...ಶಿರಾ ಉಪ ಚುನಾವಣೆಯಲ್ಲಿ ಅಚ್ಚರಿಯ ಹೆಸರು...

ಆದರೆ, ಜೆಡಿಎಸ್ ನಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ಅವಲೋಕಿಸಿದರೆ, ಯುದ್ದಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿದಂತಿದೆ. ದಿವಂಗತ ಸತ್ಯನಾರಾಯಣ ಅವರ ಕುಟುಂಬಕ್ಕೇ ಟಿಕೆಟ್ ಒಲಿದಿದ್ದರೂ, ಕಾರ್ಯಕರ್ತರಲ್ಲಿ ರಣೋತ್ಸಾಹಕ್ಕೆ ಬರಬಂದಂತಿದೆ.

ಶಿರಾ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಸೇರ್ಪಡೆಶಿರಾ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಸೇರ್ಪಡೆ

ಬಿಜೆಪಿಗೆ ಇದು ನೆಲೆಯಿಲ್ಲದ ಕ್ಷೇತ್ರ. ಆದರೆ, ಆಡಳಿತದಲ್ಲಿ ಇರುವುದರಿಂದ, ಪ್ರತಿಷ್ಠೆಯ ಪ್ರಶ್ನೆ. ಸರಿಯಾಗಿ ಕಾರ್ಯತಂತ್ರ ರೂಪಿಸಿದರೆ, ನೆಲೆಯಿಲ್ಲದ ಕ್ಷೇತ್ರದಲ್ಲೂ ಗೆದ್ದು ತೋರಿಸಬಹುದು ಎನ್ನುವುದಕ್ಕೆ ಕೆ.ಆರ್.ಪೇಟೆ ಚುನಾವಣೆ ಸಾಕ್ಷಿ.

ದಿವಂಗತ ಸತ್ಯನಾರಾಯಣ ಅವರ ಕುಟುಂಬ

ದಿವಂಗತ ಸತ್ಯನಾರಾಯಣ ಅವರ ಕುಟುಂಬ

ದಿವಂಗತ ಸತ್ಯನಾರಾಯಣ ಅವರ ಕುಟುಂಬಕ್ಕೆ ಕ್ಷೇತ್ರದಲ್ಲಿ ಉತ್ತಮ ಹೆಸರು ಇದೆ. ಕಳೆದ ಚುನಾವಣೆಯಲ್ಲಿ ಸತ್ಯನಾರಾಯಣ, ಟಿ.ಬಿ.ಜಯಚಂದ್ರ ವಿರುದ್ದ 10,365 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇನ್ನು, ಬಿಜೆಪಿ ಅಭ್ಯರ್ಥಿಗೂ ಸುಮಾರು ಹದಿನೇಳು ಸಾವಿರ ಮತಗಳು ಬಂದಿದ್ದವು. ಹಾಗಾಗಿ, ಮೇಲ್ನೋಟಕ್ಕೆ ಜಯಚಂದ್ರಗೆ ಗೆಲುವು ಖಚಿತ ಎಂದು ಕಂಡರೂ, ತ್ರಿಕೋಣ ಸ್ಪರ್ಧೆ ಏರ್ಪಡುವ ಸಾಧ್ಯತೆಯಿಲ್ಲದಿಲ್ಲ.

ಕಲ್ಕೆರೆ ರವಿಕುಮಾರ್

ಕಲ್ಕೆರೆ ರವಿಕುಮಾರ್

ಸತ್ಯನಾರಾಯಣ ಅವರ ಪುತ್ರ ಸತ್ಯಪ್ರಕಾಶ್ ಟಿಕೆಟ್ ಬಯಸಿದ್ದರು. ಆದರೆ, ದೇವೇಗೌಡ್ರು, ಅವರ ಪತ್ನಿ ಅಮ್ಮಾಜಮ್ಮಗೆ ಟಿಕೆಟ್ ನೀಡಿದ್ದಾರೆ. ಸತ್ಯನಾರಾಯಣ ಕುಟುಂಬ ಹೊರತಾಗಿ, ಮೂರ್ನಾಲ್ಕು ಮುಖಂಡರು, ಜೆಡಿಎಸ್ ಟಿಕೆಟ್ ಬಯಸಿದ್ದರು. ಆದರೆ, ಕ್ಷೇತ್ರದ ಮತ್ತೊಬ್ಬ ಪ್ರಭಾವೀ ಮುಖಂಡರಾದ ತುಮಕೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಅವರ ಪತಿ ಕಲ್ಕೆರೆ ರವಿಕುಮಾರ್. ಇವರಿಬ್ಬರೂ, ಟಿಕೆಟ್ ಸಿಗದೇ ಇರುವುದು ಖಾತ್ರಿಯಾದ ನಂತರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ಸಿಗಾದ ಬಹುದೊಡ್ಡ ಹಿನ್ನಡೆಯಿದು.

ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಗರಂ

ರವಿಕುಮಾರ್, ಜೆಡಿಎಸ್ ತೊರೆದ ಬೆನ್ನಲ್ಲೇ, ಜಿಲ್ಲಾ ಮತ್ತು ತಾಲೂಕು ಪಂಚಾಯತಿಯ ತಲಾ ಒಬ್ಬರು ಸದಸ್ಯರು ಪಕ್ಷ ತೊರೆದಿರುವುದು ಕುಮಾರಸ್ವಾಮಿಗೆ ನಿದ್ದೆಗೆಡಿಸಿದೆ. ಕೆಲವರು ಬಿಜೆಪಿಯತ್ತ ಗುಳೇ ಹೊರಟಿದ್ದಾರೆ. ಜೆಡಿಎಸ್ ಮುಖಂಡರು ಪಕ್ಷ ತೊರೆಯುತ್ತಿರುವುದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಎಚ್ಡಿಕೆ ಗರಂ ಆಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ, ಯಾವುದೇ ಗೊಂದಲವಿಲ್ಲದೇ ರಣತಂತ್ರ ರೂಪಿಸುತ್ತಿದೆ.

ಮತದಾರರನ್ನು ಉದ್ದೇಶಿಸಿ ಈಗಾಗಲೇ ಕುಮಾರಸ್ವಾಮಿ ಮಾತಾಡಿದ್ದಾರೆ

ಮತದಾರರನ್ನು ಉದ್ದೇಶಿಸಿ ಈಗಾಗಲೇ ಕುಮಾರಸ್ವಾಮಿ ಮಾತಾಡಿದ್ದಾರೆ

ಶಿರಾ ಮತದಾರರನ್ನು ಉದ್ದೇಶಿಸಿ ಈಗಾಗಲೇ ಕುಮಾರಸ್ವಾಮಿ ಮಾತಾಡಿದ್ದಾರೆ, ಕಣ್ಣೀರೂ ಹಾಕಿದ್ದಾರೆ. ಆದರೆ, ನಿರ್ಣಾಯಕವಾಗಿರುವ ಸ್ಥಳೀಯ ಮುಖಂಡರ ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಜೆಡಿಎಸ್ ವಿಫಲವಾಗುತ್ತಿದೆ. ಚುನಾವಣೆಗೆ ಇನ್ನೂ ಹೆಚ್ಚುಕಮ್ಮಿ ನಾಲ್ಕು ವಾರವಿದೆ. ಜೆಡಿಎಸ್ ಈಗಿಂದೀಗಲೇ ಕಾರ್ಯೋನ್ಮುಖವಾಗದಿದಲ್ಲಿ, ಕ್ಷೇತ್ರವನ್ನು ಉಳಿಸಿಕೊಳ್ಳುವುದು ಕಷ್ಟ. ಉಪಚುನಾವಣೆ ನವೆಂಬರ್ ಮೂರರಂದು ನಡೆಯಲಿದೆ.

English summary
Sira Assembly Election Bypoll Game Plan: JDS Is Far Behind Than BJP And Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X