ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದಗಂಗಾ ಶ್ರೀ ಆರೋಗ್ಯ: ಆತಂಕವಿಲ್ಲ ಆದರೆ ವೈದ್ಯರು ನಿರೀಕ್ಷಿಸಿದಷ್ಟು ಚೇತರಿಕೆ ಇಲ್ಲ

|
Google Oneindia Kannada News

ತುಮಕೂರು, ಜನವರಿ 10: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆಯಾದರೂ ನಾವು ನಿರೀಕ್ಷಿಸಿದಷ್ಟು ತೀವ್ರವಾಗಿ ಚೇತರಿಕೆ ಕಾಣುತ್ತಿಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ವರ್ ಹೇಳಿದ್ದಾರೆ.

ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರದಲ್ಲಿ ತಾಳ್ಮೆ ಅಗತ್ಯ: ವೈದ್ಯರುಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರದಲ್ಲಿ ತಾಳ್ಮೆ ಅಗತ್ಯ: ವೈದ್ಯರು

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆತಂಕದ ಅವಶ್ಯಕತೆ ಇಲ್ಲ, ಶ್ರೀಗಳ ಆರೋಗ್ಯದ ವಿಚಾರದಲ್ಲಿ ತಾಳ್ಮೆ ಇರಬೇಕು ಎಂದು ಅವರು ಹೇಳಿದರು.

ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಆತಂಕ ಬೇಡ: ಎಚ್‌ಡಿಕೆ ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಆತಂಕ ಬೇಡ: ಎಚ್‌ಡಿಕೆ

ಶ್ರೀಗಳ ದೇಹದಲ್ಲಿ ಅಲ್ಬಮಿನ್​ ಉತ್ಪತ್ತಿಯಾಗುತ್ತಿಲ್ಲ ಹಾಗಾಗಿ ಹೊರಗಿನಿಂದ ಅಲ್ಬಮಿನ್ ನೀಡಲಾಗುತ್ತಿದೆ. ಶ್ರೀಗಳ ದೇಹದಲ್ಲಿ ಈಗ 3.1 ರಷ್ಟು ಅಲ್ಬಮಿನ್ ಅಂಶ ಇದೆ. ಇದು ಕಡಿಮೆಯಾದರೆ ಶ್ವಾಸಕೋಶದಲ್ಲಿ ನೀರು‌ ತುಂಬಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲಾ ವೈದ್ಯರು ಚರ್ಚಿಸಿ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

Siddaganga Seer getting better but not faster as expected

ಸಿಎಂ ಕುಮಾರಸ್ವಾಮಿ ಅವರು ಕಿರಿಯ ಸ್ವಾಮೀಜಿಗಳಿಗೆ ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಇಂದೇ ಜನದೇವ ಆಸ್ಪತ್ರೆಯ ಮುಖ್ಯಸ್ಥ ಡಾ.ಮಂಜುನಾಥ್ ಹಾಗೂ ವೈದ್ಯರ ತಂಡ ಶ್ರೀಗಳ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ.

ಆ ನಂತರ ಮಾತನಾಡಿದ ಹಿರಿಯ ವೈದ್ಯ ಮಂಜುನಾಥ ಅವರು, ಶ್ರೀಗಳ ಆರೋಗ್ಯದ ಬಗ್ಗೆ ಆತಂಕ ಬೇಡ. ಪರಮೇಶ್ವರ್ ಅವರು ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಮಗುವಂತೆ ಶ್ರೀಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

English summary
Siddaganga Seer's health is getting better but not faster as expected by doctors says Seer's personal doctor Parameshwar. CM Kumaraswamy took information about Seer's health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X