ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕೂ' ಅಪ್ಲಿಕೇಶನ್ ಪ್ರವೇಶಿಸಿದ ಶ್ರೀ ಸಿದ್ದಗಂಗಾ ಮಠ

|
Google Oneindia Kannada News

ತುಮಕೂರು, ಸೆಪ್ಟೆಂಬರ್ 24: ತುಮಕೂರಿನ ತ್ರಿವಿಧ ದಾಸೋಹಿ ಕ್ಷೇತ್ರ ಸಿದ್ದಗಂಗಾ ಮಠವು ಸಿದ್ದಲಿಂಗ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕೂ ಅಪ್ಲಿಕೇಶನ್ ಪ್ರವೇಶಿಸಿದೆ. 600 ವರ್ಷಗಳ ಇತಿಹಾಸವಿರುವ ಸಿದ್ದಗಂಗಾ ಮಠವು, ಹಲವಾರು ಶ್ರೇಷ್ಠ ಶರಣರು ಹಾಗೂ ನಡೆದಾಡುವ ದೇವರೆಂದು ಭಕ್ತರ ಮನದಲ್ಲಿ ನೆಲೆಸಿರುವ ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಪೂಜ್ಯ ಶಿವಕುಮಾರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಾಗಿ ಬಂದಿದೆ.

ದೇಶ- ವಿದೇಶಗಳಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿರುವ ಸಿದ್ದಗಂಗಾ ಮಠವು ಈಗ ಕೂ ಮೂಲಕ ತನ್ನ ಚಟುವಟಿಕೆಗಳನ್ನು ಎಲ್ಲರಿಗೂ ತಲುಪಿಸಲು ಮುಂದಾಗಿದೆ. ಮಠದಲ್ಲಿ ದಿನನಿತ್ಯ ನಡೆಯುವ ಕಾರ್ಯಕ್ರಮಗಳ ಬಗ್ಗೆ ಅವರ ಕೂ ಮೂಲಕ ನೀವು ತಿಳಿಯಬಹುದಾಗಿದೆ.

ಸಿದ್ದಗಂಗಾ ಮಠ (ಪುಣ್ಯಕ್ಷೇತ್ರ- ಪವಿತ್ರ ಸ್ಥಳ) 'ಮಹಾ ದಾಸೋಹ'ದ ಬಸವ ತತ್ತ್ವಶಾಸ್ತ್ರದೊಂದಿಗೆ ಪ್ರತಿಪಾದಿತ ಸ್ಥಳವಾಗಿದೆ. ಸಿದ್ದಗಂಗಾ ಮಠವು ಒಂದು ವಿಶಿಷ್ಟವಾದ ಗುರುಕುಲವಾಗಿದ್ದು, 10,000ಕ್ಕಿಂತಲೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಆಹಾರ ಮತ್ತು ವಸತಿ, ಯಾವುದೇ ಜಾತಿ ಅಥವಾ ಮತದ ತಾರತಮ್ಯವಿಲ್ಲದೆ ಶಿಕ್ಷಣವನ್ನು ಒದಗಿಸುತ್ತದೆ. ಮಠವು ಅಂಧ ಶಾಲೆಗಳನ್ನು ನಡೆಸುತ್ತಿದೆ ಮತ್ತು 100ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಸ್ವತಂತ್ರ ಹಾಸ್ಟೆಲ್ ಸೌಲಭ್ಯಗಳನ್ನು ನೀಡಲಾಗುತ್ತಿದೆ,'' ಎಂದು ಮಠವು ಮೊದಲ ಕೂ ಮಾಡಿದೆ.

Tumkur: Siddaganga Mutt Opens Account In Koo Social Media App

Koo (ಕೂ) ವಕ್ತಾರರು ಹೇಳುವುದೇನು?
"ಕಳೆದ ಹಲವು ತಿಂಗಳುಗಳಲ್ಲಿ ದೇಶಾದ್ಯಂತ ಪ್ರಸಿದ್ಧ ವ್ಯಕ್ತಿಗಳು ಮತ್ತು ಹೆಸರಾಂತ ಸಂಸ್ಥೆಗಳನ್ನು ಕೂ ಅಪ್ಲಿಕೇಶನ್‌ಗೆ ಗೌರವಾನ್ವಿತವಾಗಿ ಬರಮಾಡಿಕೊಂಡಿದ್ದೇವೆ. ಅದರ ಮುಂದುವರಿದ ಭಾಗವಾಗಿ ಪ್ರತಿಷ್ಠಿತ ತುಮಕೂರಿನ ಸಿದ್ದಗಂಗಾ ಮಠಕ್ಕೂ ಆತ್ಮೀಯ ಸ್ವಾಗತವನ್ನು ಕೋರುತ್ತೇವೆ. ಈ ವೇದಿಕೆಯಲ್ಲಿ ಮಠದ ಉಪಸ್ಥಿತಿ ಸಮುದಾಯಕ್ಕೆ ಪ್ರಯೋಜನಕಾರಿಯಾದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಬಗ್ಗೆ ನಿಯಮಿತ ಮಾಹಿತಿ ನೀಡುವುದರ ಜೊತೆಗೆ, ದೇಶದಾದ್ಯಂತ ಇರುವ ಅವರ ಅನುಯಾಯಿಗಳೊಂದಿಗೆ ಅವರದೇ ಮಾತೃಭಾಷೆಯಲ್ಲಿ ಸಂವಹನ ನಡೆಸಿ ಹೆಚ್ಚು ಜನರನ್ನು ತಲುಪಲಿದ್ದಾರೆ ಎಂದು ನಾವು ನಂಬಿದ್ದೇವೆ."

Tumkur: Siddaganga Mutt Opens Account In Koo Social Media App

Koo (ಕೂ) ಬಗ್ಗೆ:
Koo (ಕೂ) ಮಾರ್ಚ್ 2020ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ- ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಯಿತು, ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ, ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ಕೇವಲ ಶೇ.10 ಜನರು ಇಂಗ್ಲಿಷ್ ಮಾತನಾಡುವ ಭಾರತ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ಮನಮುಟ್ಟುವಂತೆ ಭಾಷಾ ಅನುಭವಗಳನ್ನು ತಲುಪಿಸಬಲ್ಲ ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಸಾಮಾಜಿಕ ಜಾಲತಾಣ ವೇದಿಕೆ ಅತ್ಯವಶ್ಯವಾಗಿದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ Koo (ಕೂ) ಒಂದು ವೇದಿಕೆಯನ್ನು ಒದಗಿಸುತ್ತದೆ.
English summary
Tumakuru's Siddaganga Mutt opens account in Koo Social Media App.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X