ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಪಿಎಲ್ ಕಾರ್ಡ್ ನಲ್ಲಿ ಶಿವಕುಮಾರ ಸ್ವಾಮಿ ಚಿತ್ರ: ಜಮೀರ್ ಅಹ್ಮದ್

By ತುಮಕೂರು ಪ್ರತಿನಿಧಿ
|
Google Oneindia Kannada News

Recommended Video

ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರ ಬಿಪಿಎಲ್ ಕಾರ್ಡ್ ಗಳ ಮೇಲೆ, ಜಮೀರ್ ಅಹ್ಮದ್ ಹೇಳಿಕೆ

ತುಮಕೂರು, ಜನವರಿ 30: ರಾಜ್ಯದಲ್ಲಿ ಇನ್ನು ಮುಂದೆ ವಿತರಿಸುವ ಬಿಪಿಎಲ್ ಕಾರ್ಡ್ ಗಳಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಭಾವಚಿತ್ರ ಮುದ್ರಿಸುವ ಬಗ್ಗೆ ನಾಗರಿಕ ಆಹಾರ ಸರಬರಾಜು ಸಚಿವ ಜಮೀರ್ ಅಹ್ಮದ್ ಮಾತನಾಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗುರುವಾರ ಆಯೋಜಿಸಿರುವ ಶಿವಕುಮಾರ ಶ್ರೀ ಪುಣ್ಯ ಸ್ಮರಣೆ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ, ಮಾತನಾಡಿದ್ದಾರೆ.

ಬಿಪಿಎಲ್ ಕಾರ್ಡ್ ನಲ್ಲಿ ಶಿವಕುಮಾರ ಸ್ವಾಮೀಜಿ ಭಾವಚಿತ್ರ ಮುದ್ರಿಸುವ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆಗೆ ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ.

ಶ್ರೀಗಳ ಪುಣ್ಯಸ್ಮರಣೆ: ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಂದ ಸಾಮೂಹಿಕ ಕೇಶ ಮುಂಡನೆಶ್ರೀಗಳ ಪುಣ್ಯಸ್ಮರಣೆ: ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಂದ ಸಾಮೂಹಿಕ ಕೇಶ ಮುಂಡನೆ

ಈಗಾಗಲೇ ರಾಜ್ಯದಲ್ಲಿ ಒಂದೂಕಾಲು ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್ ಗಳಿವೆ. ಈಗಾಗಲೇ ಇರುವ ಕಾರ್ಡ್ ಗಳಲ್ಲೂ ಇದು ಅನ್ವಯಿಸುವುದಾ ಅಥವಾ ಹೊಸದಾಗಿ ವಿತರಿಸಲಿರುವ ಬಿಪಿಎಲ್ ಕಾರ್ಡ್ ಗಳನ್ನು ಮುದ್ರಿಸುವುದಾ ಎಂಬ ಬಗ್ಗೆ ಚರ್ಚೆ ನಡೆಸಿದ ನಂತರ ತೀರ್ಮಾನ ಮಾಡಲಾಗುವುದು ಎಂದಿದ್ದಾರೆ.

Shivakumara Swami photo will publish in BPL cards, Zameer Ahmed

ಬಡವರಿಗಾಗಿಯೇ ಇರುವ ಬಿಪಿಎಲ್ ಕಾರ್ಡ್ ನಲ್ಲಿ ಶ್ರೀಗಳ ಭಾವಚಿತ್ರ ಮುದ್ರಿಸಿದರೆ, ಶಿವಕುಮಾರ ಶ್ರೀಗಳ ನಿಸ್ವಾರ್ಥ ಸೇವೆಗೆ ರಾಜ್ಯ ಸರಕಾರದಿಂದಲೂ ಗೌರವ ಅರ್ಪಣೆ ಮಾಡಿದಂತೆ ಆಗುತ್ತದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

ವೈರಲ್ ವಿಡಿಯೋ: ಶ್ರೀಗಳು ನಮ್ಮನ್ನಗಲಿಲ್ಲ,ಇಂಥ ಮಕ್ಕಳಲ್ಲಿದ್ದಾರೆ ನೋಡಿ..!ವೈರಲ್ ವಿಡಿಯೋ: ಶ್ರೀಗಳು ನಮ್ಮನ್ನಗಲಿಲ್ಲ,ಇಂಥ ಮಕ್ಕಳಲ್ಲಿದ್ದಾರೆ ನೋಡಿ..!

ಗುರುವಾರದಂದು ಕೇಂದ್ರ ಅಲ್ಪಸಂಖ್ಯಾತ ಸಚಿವರ ಭೇಟಿಗಾಗಿ ಹೋಗುತ್ತಿದ್ದೇನೆ. ಆದ್ದರಿಂದ ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿ. ಆ ಕಾರಣಕ್ಕೆ ಸಿದ್ದಲಿಂಗ ಸ್ವಾಮಿಗಳನ್ನು ಈ ದಿನ ಭೇಟಿ ಮಾಡಿ, ಅವರ ಬಳಿ ಈ ವಿಚಾರ ತಿಳಿಸಲು ಬಂದಿದ್ದೇನೆ ಎಂದಿದ್ದಾರೆ.

English summary
State government discussing to publish Siddaganga mutt Shivakumara Swami photo in BPL cards, said minister Zameer Ahmed in Tumakuru on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X