• search
 • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿರಾ ಚುನಾವಣೆಯಲ್ಲೂ ‘ನಮ್ಮ ಆರ್‌ಸಿಬಿ’ ಟೀಂ ಹವಾ..!

|

ಉಪ ಚುನಾವಣೆ ಅಬ್ಬರದ ನಡುವೆಯೂ ಆರ್‌ಸಿಬಿ ತಂಡದ ಲೋಗೋ ರಾಜ್ಯಾದ್ಯಂತ ವೈರಲ್ ಆಗುತ್ತಿದೆ. ಉಪಚುನಾವಣೆ ಅಖಾಡ ರಂಗು ರಂಗಾಗಿದ್ದು, ಬೆಂಗಳೂರಿನ ಆರ್.ಆರ್. ನಗರ ಹಾಗೂ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಫಿಕ್ಸ್ ಆಗಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಮಧ್ಯೆ ಬಿಗ್ ಫೈಟ್ ಏರ್ಪಟ್ಟಿದೆ. ಈ ಮಧ್ಯೆ ತಮ್ಮ ತಮ್ಮ ಅಭ್ಯರ್ಥಿಗಳ ಪಕ್ಷದ ವರಿಷ್ಠರು ಪ್ರಚಾರ ಕಣಕ್ಕೆ ಎಂಟ್ರಿಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಶಿರಾದಲ್ಲಿ ಚಕ್ರವ್ಯೂಹ ರಚಿಸುತ್ತಿದ್ದಾರೆ.

ಆದರೆ ಈ ಹೊತ್ತಲ್ಲೇ ಡಿಕೆಶಿ ಅವರ ಫೋಟೋ ಒಂದು ಫುಲ್ ವೈರಲ್ ಆಗಿದೆ. ಡಿಕೆಶಿ ಪ್ರಚಾರದ ವೇಳೆ ಕಾಣಿಸಿರುವ 'ಆರ್‌ಸಿಬಿ' ಲೋಗೋ ಇರುವ ಛತ್ರಿ ಕರುನಾಡಿನ ಗಮನ ಸೆಳೆದಿದೆ. ಈಗಾಗಲೇ ಆರ್‌ಸಿಬಿ ತಂಡ ಗೆಲುವಿನ ಹುಮ್ಮಸ್ಸಿನಲ್ಲಿದ್ದು, 'ಈ ಸಲ ಕಪ್ ನಮ್ದೆ' ಅಂತಾ ನಾಡಿನ ಕ್ರಿಕೆಟ್ ಅಭಿಮಾನಿಗಳು ಉದ್ಘರಿಸುತ್ತಿದ್ದಾರೆ. ಇದರ ನಡುವೆ ಡಿ.ಕೆ. ಶಿವಕುಮಾರ್ ಪ್ರಚಾರದಲ್ಲೂ ಆರ್‌ಸಿಬಿ ಛತ್ರಿ ಎಂಟ್ರಿಯಾಗಿ 'ಟೀಂ ಆರ್‌ಸಿಬಿ' ಅಭಿಮಾನಿಗಳ ಹುಮ್ಮಸ್ಸು ದುಪ್ಪಟ್ಟಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಕೊಡೆ ಬಾರಿ ಸದ್ದು ಮಾಡುತ್ತಿವೆ.

ಶಿರಾ ಉಪ ಚುನಾವಣೆ; ಪಕ್ಷದ ಗೆಲುವಿಗೆ ವ್ಯೂಹ ರಚಿಸಿದ ದೇವೇಗೌಡರು!

ಆರ್‌ಸಿಬಿ ಅಭಿಮಾನಿಗಳಿಂದ ಅಪ್ಲೋಡ್

ಈ ಫೋಟೋ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿರುವುದು ಆರ್‌ಸಿಬಿ ಅಭಿಮಾನಿಗಳು. ಹಾಗೇ ಆ ಫೋಟೋ ವೈರಲ್ ಆಗುತ್ತಿರುವುದು ಕೂಡ ಕೋಟಿ ಕೋಟಿ ಆರ್‌ಸಿಬಿ ಫ್ಯಾನ್ಸ್‌ಗಳಿಂದ. ಡಿ.ಕೆ. ಶಿವಕುಮಾರ್ ಛತ್ರಿ ಹಿಡಿದ ಮೇಲೆ ಆರ್‌ಸಿಬಿಗೆ ಒಲಿಯಿತು ಅದೃಷ್ಟ, ಈ ಬಾರಿ ಗೆಲುವು ನಮ್ಮದೇ, ಈ ಸಲ ಕಪ್ ನಮ್ಮದೇ ಅಂತಾ ಅಭಿಮಾನಿಗಳು ಫೋಟೋ ವೈರಲ್ ಮಾಡುತ್ತಿದ್ದಾರೆ. ಅಲ್ಲದೆ ಲಕ್ಷಾಂತರ ಜನರು ಫೋಟೋ ಶೇರ್ ಮಾಡುತ್ತಿದ್ದು, ಮಿಲಿಯನ್ ಗಟ್ಟಲೇ ಲೈಕ್ ಕೂಡ ಗಿಟ್ಟಿಸುತ್ತಿದೆ.

   Mohammed Siraj ಬೆಳೆದು ಬಂದ ಹಾದಿ , ಹಾಗು IPLಗೆ ಪ್ರವೇಶ ಹೇಗಿತ್ತು | Oneindia Kannada

   ಶಿರಾ ಉಪ ಚುನಾವಣೆ ಚಿತ್ರಣ ಬದಲಿಸಿದ ಬಿ. ವೈ. ವಿಜಯೇಂದ್ರ!

   ಮಳೆ ಬಂದಿದ್ದಕ್ಕೆ ಕೊಡೆ ಹಿಡಿದರು..!

   ಅಂದಹಾಗೆ ಈ ಫೋಟೋ ವೈರಲ್ ಆಗುವುದರ ಹಿಂದೆ ದೊಡ್ಡ ಕತೆಯಿದೆ. ಈ ಫೋಟೋ ವೈರಲ್ ಆಗಲು ಕಾರಣಕರ್ತ ಮಿಸ್ಟರ್ ಮಳೆರಾಯ. ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿರುವ ರೀತಿ ತುಮಕೂರಿನ ಹಲವೆಡೆ ತುಂತುರು ಮಳೆ ಬೀಳುತ್ತಿದೆ. ಹೀಗೆ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಿದ್ದಾಗ ಮಳೆ ಶುರುವಾಗಿದೆ. ಶಿರಾದ ದೊಡ್ಡ ಆಲದ ಮರದ ಬಳಿ ಪ್ರಚಾರ ನಡೆಸುವಾಗ ಮಳೆ ಬಂದಿದ್ದು, ಕೂಡಲೇ ಡಿ.ಕೆ. ಶಿವಕುಮಾರ್‌ಗಾಗಿ ಅವರ ಬೆಂಬಲಿಗರು ಆರ್‌ಸಿಬಿ ಲೋಗೋ ಇದ್ದ ಕೊಡೆ ತಂದಿದ್ದಾರೆ. ಸಮೀಪದಲ್ಲೇ ಇದ್ದ ಅಂಗಡಿಯಿಂದ ಕೊಡೆ ತರಲಾಗಿದ್ದು, ಸ್ಥಳದಲ್ಲಿದ್ದ ಆರ್‌ಸಿಬಿ ಅಭಿಮಾನಿಗಳು ಫೋಟೋ ತೆಗೆದು ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಈಗ ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

   English summary
   Photo of umbrella printed with RCB team logo getting viral in social media. The photo was clicked in Shira where the D.K. Shivakumar was campaign in that time.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X