ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ; ಆರೋಪಿ ಶಿವಕುಮಾರ್‌ ಕೋವಿಡ್‌ಗೆ ಬಲಿ

|
Google Oneindia Kannada News

ತುಮಕೂರು, ಮೇ 19; ದ್ವಿತೀಯ ಪಿಯುಸಿ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಪ್ರಮುಖ ಆರೋಪಿ ಶಿವಕುಮಾರ್ ಕೋವಿಡ್‌ಗೆ ಬಲಿಯಾಗಿದ್ದಾನೆ. 2016ರಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯನ್ನು 2 ಬಾರಿ ಈತ ಸೋರಿಕೆ ಮಾಡಿದ್ದ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಶಿವಕುಮಾರ್ (65) ಉಸಿರಾಟದ ಸಮಸ್ಯೆಯಿಂದಾಗಿ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾನೆ.

ಶಿವಕುಮಾರ ಸ್ವಾಮಿ ಕುರಿತ ಕುತೂಹಲಕಾರಿ ಕಥೆ!ಶಿವಕುಮಾರ ಸ್ವಾಮಿ ಕುರಿತ ಕುತೂಹಲಕಾರಿ ಕಥೆ!

ಎಸ್‌. ಎಸ್. ಎಲ್‌. ಸಿ., ದ್ವಿತೀಯ ಪಿಯುಸಿ, ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಸೇರಿದಂತೆ ವಿವಿಧ ಸ್ಮರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಶಿವಕುಮಾರ್ ಪ್ರಮುಖ ಆರೋಪಿಯಾಗಿದ್ದ. 2011 ಮತ್ತು 2012ರಲ್ಲಿ ತುಮಕೂರಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಶಿವಕುಮಾರ್ ವಿರುದ್ಧ ದೂರು ದಾಖಲಾಗಿತ್ತು.

ಕೆಪಿಎಎಸ್ ಸಿ ಪ್ರಶ್ನೆ ಪತ್ರಿಕೆ ಲೀಕ್: ಪೊಲೀಸ್ ಕಾನ್‌ಸ್ಟೇಬಲ್ ಸೆರೆ ಕೆಪಿಎಎಸ್ ಸಿ ಪ್ರಶ್ನೆ ಪತ್ರಿಕೆ ಲೀಕ್: ಪೊಲೀಸ್ ಕಾನ್‌ಸ್ಟೇಬಲ್ ಸೆರೆ

PUC Question Paper Leak Scam Shivakumar Dies Due To COVID

2013ರಲ್ಲಿ ಬೆಂಗಳೂರಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ದೇವೇಂದ್ರ, ತುಮಕೂರಿನ ಮಲ್ಲೇಶ್ ಬಂಧಿಸಲಾಗಿತ್ತು. ಆಗ ಸೋರಿಕೆ ಹಗರಣದ ಕಿಂಗ್ ಪಿನ್ ಶಿವಕುಮಾರ್ ಎಂಬುದು ಬಹಿರಂಗವಾಗಿತ್ತು.

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಂದೂಡಿಕೆ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಂದೂಡಿಕೆ

2016ರಲ್ಲಿ ಎರಡು ಬಾರಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ, 2018ರಲ್ಲಿ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿಯೂ ಶಿವಕುಮಾರ್ ಆರೋಪಿ. ಹಲವಾರು ಪ್ರಕರಣದಲ್ಲಿ ಶಿವಕುಮಾರ್ ವಿಚಾರಣೆ ಎದುರಿಸುತ್ತಿದ್ದ.

ತುಮಕೂರು ಜಿಲ್ಲೆಯಲ್ಲಿ ಮಂಗಳವಾರದ ವರದಿಯಂತೆ 1562 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 26,554.

English summary
The kingpin of PUC question paper leak scam Shivakumara Swamy died due to COVID 19. CID police arrested him in 2016 in connection with paper leak scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X