ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ ಸಖತ್ ವೈರಲ್: ವ್ಯಾಕ್ಸಿನ್ ತೆಗೆದುಕೊಳ್ಳದೆ ನಾಟಕವಾಡಿದ ತುಮಕೂರು ಡಿಎಚ್ಒ, ಪ್ರಾಂಶುಪಾಲೆ

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಜನವರಿ 20: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರಕಾರ ಬಿಡುಗಡೆ ಮಾಡಿರುವ ಕೊರೊನಾ ವ್ಯಾಕ್ಸಿನ್ ಅನ್ನು ಡಿಎಚ್ಒ ನಾಗೇಂದ್ರಪ್ಪ, ಸರಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ರಜನಿಯವರು ಲಸಿಕೆ ತೆಗೆದುಕೊಳ್ಳುವ ನಾಟಕವಾಡಿ ಪೋಸ್ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಕಳೆದ ಜ.16ರಂದು ತುಮಕೂರು ಜಿಲ್ಲೆಯಲ್ಲಿ ಪ್ರಥಮವಾಗಿ ಕೊರೊನಾ ವಾರಿಯರ್ಸ್ ಗೆ ವ್ಯಾಕ್ಸಿನ್ ನೀಡುವ ಕಾಯ್ರಕ್ರಮಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಈ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ಅವರು ಇಂಜೆಕ್ಷನ್ ತೆಗೆದುಕೊಂಡು ಇತರ ಕಾರ್ಯಕರ್ತರಿಗೆ ಧೈರ್ಯ ತುಂಬಿ ಶ್ಲಾಘನೀಯವಾಗಿದ್ದಾರೆ.

Infographics: ಕೊವ್ಯಾಕ್ಸಿನ್ ಲಸಿಕೆ ಪಡೆಯುವ ಮುನ್ನ ಒಮ್ಮೆ ಓದಿInfographics: ಕೊವ್ಯಾಕ್ಸಿನ್ ಲಸಿಕೆ ಪಡೆಯುವ ಮುನ್ನ ಒಮ್ಮೆ ಓದಿ

ಆದರೆ ಇದೇ ವೇಳೆ ಡಿಎಚ್ಒ ಡಾ.ನಾಗೇಂದ್ರಪ್ಪ ಅವರು ಇಂಜೆಕ್ಷನ್ ತುಂಬಿದ ಸೂಜಿಯನ್ನು ಚುಚ್ಚಿಕೊಳ್ಳುತ್ತಿರುವಂತೆ ಪೋಸ್ ನೀಡಿ ನಾಟಕವಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸರಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ರಜನಿಯವರು ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿರುವಂತೆ ವಿಕ್ಟರಿ ತೋರಿಸಿ ಫೋಟೋಗಳಲ್ಲಿ ಮಿಂಚಿದ್ದಾರೆಯೇ ಹೊರತು ವ್ಯಾಕ್ಸಿನ್ ತೆಗೆದುಕೊಂಡಿಲ್ಲ.

Tumakuru: Public Urges To Suspend DHO Nagendrappa For Not Taking Covid Vaccine

ಈ ಇಬ್ಬರು ಅಧಿಕಾರಿಗಳು ಸರಕಾರಿ ವ್ಯಾಕ್ಸಿನ್ ಮೇಲೆ ನಂಬಿಕೆಯಿಟ್ಟಿಲ್ಲದಿರುವುದು ನಾಚಿಕೆ ಸಂಗತಿ. ಇಂತಹವರು ಆರೋಗ್ಯ ಇಲಾಖೆಯಲ್ಲಿರುವುದು ಸಮಾಜಕ್ಕೆ ದೊಡ್ಡ ಕಳಂಕ. ನಾಟಕವಾಡಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಧಿಕಾರಿಗಳ ಕರ್ತವ್ಯ ನಿಷ್ಠೆಯನ್ನು ಹರಾಜು ಹಾಕಿದೆ.

Tumakuru: Public Urges To Suspend DHO Nagendrappa For Not Taking Covid Vaccine

ಜಿಲ್ಲಾ ಆರೋಗ್ಯ ಇಲಾಖೆಯಲ್ಲಿದ್ದು ಮಾದರಿಯಾಗಬೇಕಿದ್ದ ಡಿಎಚ್ಒ ನಾಗೇಂದ್ರಪ್ಪ ಮತ್ತು ಸರಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರಜನಿ ಅವರುಗಳು ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡು ಇಡೀ ಸಮಾಜಕ್ಕೆ ಧೈರ್ಯ ತುಂಬಬೇಕಾಗಿತ್ತು. ಆದರೆ, ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಪೋಸ್ ನೀಡಿ ಇಡೀ ಇಲಾಖೆಗೆ ಮೋಸ ಮಾಡಿರುವ ಇವರ ವಿರುದ್ಧ ಮೇಲಧಿಕಾರಿಯವರು ಸೂಕ್ತ ಕ್ರಮ ಕೈಗೊಂಡು ಅಮಾನತ್ತು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

English summary
Tumakur DHO Nagendrappa and Rajani, the principal of Government College of Nursing, have caused a heated debate about not taking the corona vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X