ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಲ್ಲಿ ಮೋದಿ ಎಡವಟ್ಟು; ಫೋಟೊ ವೈರಲ್!

|
Google Oneindia Kannada News

ತುಮಕೂರು, ಜನವರಿ 3: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತುಮಕೂರಿಗೆ ಭೇಟಿ ನೀಡಿ ಅಲ್ಲಿ ರಾಜಕೀಯ ಭಾಷಣ ಮಾಡಿದ್ದು ಸಾಕಷ್ಟು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿರುವಂತೆ, ಇದೀಗ ಮೋದಿ ಹಣೆಯಲು ಅವರ ವಿರೋಧಿಗಳಿಗೆ ತುಮಕೂರಿನಿಂದ ಹೊಸ ಅಸ್ತ್ರ ಸಿಕ್ಕಿದೆ.

ಮೋದಿ ಅವರು ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಅಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಅದಾದ ನಂತರ ಅಲ್ಲಿ ನೆರದಿದ್ದ ಮಠಾಧೀಶರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದಾರೆ. ಇಲ್ಲಿಯೇ ಎಡವಟ್ಟು ಆಗಿರುವುದು. ಮೋದಿ ಅವರು ಮಠಾದೀಶರ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಅವರ ಜೊತೆ ನಾಡಿನ ಅನೇಕ ಗಣ್ಯ ಮಠಾಧೀಶರು ಅವರ ಕೆಳಗೆ ಕುಳಿತು ಫೋಟೊ ತೆಗೆಸಿಕೊಂಡಿದ್ದಾರೆ. ಇದು ಫೇಸ್‌ಬುಕ್‌ ನಲ್ಲಿ ಭಾರೀ ವೈರಲ್ ಆಗಿದೆ.

ನರೇಂದ್ರ ಮೋದಿ ತುಮಕೂರು ಭೇಟಿ ವಿರೋಧಿಸಿದ ರೈತರು ನರೇಂದ್ರ ಮೋದಿ ತುಮಕೂರು ಭೇಟಿ ವಿರೋಧಿಸಿದ ರೈತರು

ಸಮಾಜವನ್ನು ಸಮಾನವಾಗಿ ಕಂಡು ಸಮಾಜಕ್ಕೆ ಬುದ್ದಿ ಹೇಳಬೇಕಾಗಿರುವವರು ಒಬ್ಬ ರಾಜಕಾರಣಿ ಕಾಲ ಕೆಳಗೆ ಕುಳಿತಿರುವು ಹಾಗೂ ಕನ್ನಡ ನಾಡಿನ ಶರಣ ಪರಂಪರೆಯನ್ನು ಮಣ್ಣು ಮಾಡಿರುವುದು ತೀವ್ರ ದುಃಖದ ವಿಷಯ ಎಂದು ಅನೇಕ ಪ್ರಗತಿಪರ ಚಿಂತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಪರ ವಿರೋಧದ ಚರ್ಚೆಗೆ ಈ ಒಂದು ಫೋಟೊ ಸಾಕ್ಷಿಯಾಗಿದೆ. ಈ ಫೋಟೊ ಇನ್ನಷ್ಟು ವಿವಾದ ಸೃಷ್ಟಿಸುವ ಸಾಧ್ಯತೆಗಳು ಕಂಡು ಬರುತ್ತಿವೆ.

PM Narendra Modis Tumakur Visit Photo Viral

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಧ್ಯಾಹ್ನ ತುಮಕೂರಿಗೆ ಭೇಟಿ ನೀಡಿದ್ದರು. ಅಲ್ಲಿ ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು, ತುಮಕೂರು ವಿವಿ ಆವರಣದಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನಾದ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ಶುಕರವಾರ ಬೆಂಗಳೂರು ಕಾರ್ಯಕ್ರಮಗಳನ್ನು ಮುಗಿಸಿಕೊಂಡು ವಾಪಸ್ ದೆಹಲಿಗೆ ತೆರಳಿದ್ದರು.

English summary
PM Narendra Modis Tumakur Visit Photo Viral On Social Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X