ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿನಲ್ಲಿ ಕುದಿಸಿದರೂ ಕರಗದ ಪ್ಲಾಸ್ಟಿಕ್ ಸಕ್ಕರೆ ಪತ್ತೆ

ತುಮಕೂರು ನಗರದಲ್ಲಿ ಮಾರ್ಚ್ 20ರಂದು ಚಿಲ್ಲರೆ ದಿನಸಿ ವ್ಯಾಪಾರಿಯೊಬ್ಬರಿಗೆ ಪ್ಲಾಸ್ಟಿಕ್ ಸಕ್ಕರೆ ಸಿಕ್ಕಿದೆ. ಮಂಡಿಪೇಟೆಯ ಸಗಟು ವ್ಯಾಪಾರಿಯೊಬ್ಬರಿಂದ ಖರೀದಿಸಿದ ಸಕ್ಕರೆ ಅದಾಗಿತ್ತು. ಸದ್ಯಕ್ಕೆ ನಗರದಾದ್ಯಂತ ಈ ಬಗ್ಗೆ ಚರ್ಚೆಯಾಗುತ್ತಿದೆ

By ಕುಮಾರಸ್ವಾಮಿ
|
Google Oneindia Kannada News

ತುಮಕೂರು, ಮಾರ್ಚ್ 21: ತುಮಕೂರು ನಗರದಲ್ಲಿ ಸೋಮವಾರ (ಮಾರ್ಚ್ 20) ಪ್ಲಾಸ್ಟಿಕ್ ಸಕ್ಕರೆ ಪತ್ತೆಯಾಗಿದ್ದು, ಈ ಸಂಬಂಧ ಮಂಡಿಪೇಟೆಯಲ್ಲಿನ ಅಂಗಡಿಯೊಂದರ ಬಗ್ಗೆ ಜನ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುವಂತಾಗಿದೆ. ಚಿಲ್ಲರೆ ವ್ಯಾಪಾರಿಯಾದ ಸಿದ್ದೇಶ್ ಎಂಬುವವರು ಮಂಡಿಪೇಟೆಯಲ್ಲಿರುವ ಸಗಟು ವ್ಯಾಪಾರಿಗಳಿಂದ ಸಕ್ಕರೆ ಖರೀದಿಸಿ ತಂದಿದ್ದಾರೆ.

ಆ ನಂತರ ಅದನ್ನು ಮಾರಿದಾಗ, ಗ್ರಾಹಕರೊಬ್ಬರು ವಾಪಸ್ ತಂದಿದ್ದಾರೆ. ಈ ಸಕ್ಕರೆ ಬರೀ ಮೂವತ್ತರಷ್ಟು ಮಾತ್ರ ಕರಗುತ್ತಿದೆ. ಇನ್ನು ಎಪ್ಪತ್ತರಷ್ಟು ಕರಗುತ್ತಿಲ್ಲ ಎಂದು ದೂರಿದ್ದಾರೆ. ಆಗ ಅನುಮಾನಗೊಂಡ ಸಿದ್ದೇಶ್, ಪರಿಶೀಲಿಸಿದಾಗ ರಬ್ಬರ್ ನಂತೆ ನಾಲಗೆಗೆ ಅನುಭವಕ್ಕೆ ಬಂದಿದೆ. ಆಗ ಸಗಟು ವ್ಯಾಪಾರಿ ಬಳಿಗೆ ಹೋಗಿ ವಿಚಾರಿಸಿದ್ದಾರೆ.[ತುಮಕೂರಿನಲ್ಲಿ ಕುಡಿಯುವ ನೀರು ಯೋಜನೆಗೆ ಮುತ್ತಪ್ಪ ರೈ ಚಾಲನೆ]

ಮೂಲ ಬೆಳಗಾವಿಯಿಂದ ಬಂದಿರುವ ಈ ಸಕ್ಕರೆ ಮೂಟೆ, ಅಲ್ಲಿಂದ ಬೆಂಗಳೂರಿಗೆ ತಲುಪಿ, ಆ ನಂತರ ತುಮಕೂರಿಗೆ ಬಂದಿದೆ. ಈಗ ಬೆಳಗಾವಿ ಮೂಲದ ಸಕ್ಕರೆ ತಯಾರಕರು-ವ್ಯಾಪಾರಿಗಳಿಗೆ ಈ ಬಗ್ಗೆ ಸುದ್ದಿ ಮುಟ್ಟಿಸಿ, ತುಮಕೂರಿನ ಇತರೆ ಯಾವ ಅಂಗಡಿಗಳಿಗೆ ಮಾರಾಟ ಮಾಡಿದ್ದಾರೋ ಅಲ್ಲೆಲ್ಲ ಪರಿಶೀಲಿಸಬೇಕು ಎಂದು ಒತ್ತಾಯಿಸಿದ ಮೇಲೆ, ಆ ಮಾರಾಟಗಾರರು ಬೆಳಗಾವಿಯಿಂದ ತುಮಕೂರಿಗೆ ಬಂದು ಪರಿಶೀಲಿಸಲು ಒಪ್ಪಿದ್ದಾರೆ.

Tumakuru

ಆದರೆ, ಸಿದ್ದೇಶ್ ಬಳಿಯಲ್ಲಿ ಸಕ್ಕರೆ ಮೂಟೆ ಖರೀದಿಸಿರುವುದಕ್ಕೆ ರಸೀದಿ ಇಲ್ಲ. ಅವರೇ ತಿಳಿಸಿರುವಂತೆ ಸಗಟು ಮಾರಾಟಗಾರ, ತಾವೇ ಆ ಸಕ್ಕರೆ ಮೂಟೆ ಮಾರಾಟ ಮಾಡಿರುವುದಾಗಿ ತಿಳಿಸಿರುವ ವಿಡಿಯೋ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಬುಧವಾರ ದೂರು ದಾಖಲಿಸುವುದಾಗಿ ಸಿದ್ದೇಶ್ 'ಒನ್ಇಂಡಿಯಾ ಕನ್ನಡ'ಕ್ಕೆ ಮಾಹಿತಿ ನೀಡಿದರು.[ಮಧುಗಿರಿಯ ಜಯಮಂಗಲಿಯಲ್ಲಿ ಕೃಷ್ಣಮೃಗ ನೋಡುವುದೇ ಚಂದ]

ನಾವು ಯಾವಾಗಲೂ ಅದೇ ಅಂಗಡಿಯಲ್ಲೇ ಖರೀದಿ ಮಾಡೋದು. ಈ ಹಿಂದೆ ಯಾವಾಗಲೂ ಅಂಥ ಅನುಭವ ಆಗಿರಲಿಲ್ಲ. ಆದರೆ ಇದೇ ಮೊದಲ ಸಲ ತುಮಕೂರಿನಲ್ಲಿ ಪ್ಲಾಸ್ಟಿಕ್ ಸಕ್ಕರೆ ಕಂಡುಬಂದಿದೆ ಎಂದು ಅವರು ಹೇಳಿದರು.

English summary
Plastic sugar found in Tumakuru city retailer on Monday, March 20th. But complaint yet to be registered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X