ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವದ ದೊಡ್ಡ ಸೋಲಾರ್ ಪಾರ್ಕ್ ಕಾರ್ಯಾರಂಭ; ಇದು ಕರ್ನಾಟಕದ ಹೆಮ್ಮೆ

|
Google Oneindia Kannada News

Recommended Video

ವಿಶ್ವದ ದೊಡ್ಡ ಸೋಲಾರ್ ಪಾರ್ಕ್ ಕಾರ್ಯಾರಂಭ | Solar Plant | World's Biggest | karnataka | Oneindia Kannada

ತುಮಕೂರು, ಜನವರಿ 20 : ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದೆ. ತುಮಕೂರಿನ ಪಾವಗಡದಲ್ಲಿರುವ ಪಾರ್ಕ್ 2050 ಮೆಗಾವಾಟ್ ಸೌರ ವಿದ್ಯುತ್‌ ಅನ್ನು ಉತ್ಪಾದನೆ ಮಾಡುತ್ತಿದೆ.

ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಸೌರ ವಿದ್ಯುತ್ ಉತ್ಪಾದನೆಯಲ್ಲಿ ಭಾರತ ಮುಂದಿನ ಹೆಜ್ಜೆ ಇಟ್ಟಿದೆ. ತುಮಕೂರಿನ ಪಾವಗಡ ವಿಶ್ವದ ದೊಡ್ಡ ಸೌರ ವಿದ್ಯುತ್ ಘಟಕ ಕಾರ್ಯಾರಂಭ ಮಾಡಿದೆ ಎಂದು ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವಿಶೇಷತೆಗಳುವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವಿಶೇಷತೆಗಳು

ಸುಮಾರು 12 ಸಾವಿರ ಕೋಟಿ ವೆಚ್ಚದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ರೈತರ ಭೂಮಿಯನ್ನು ಪಡೆದುಕೊಂಡು ಅಲ್ಲಿ ಸೋಲಾರ್ ಫಲಕವನ್ನು ಅಳವಡಿಸಲಾಗಿದೆ. 2019ರ ಡಿಸೆಂಬರ್‌ನಲ್ಲಿ ಘಟಕ ಸಂಪೂರ್ಣ ಕಾರ್ಯಾರಂಭ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು.

ಚಿತ್ರಗಳು : ಪಾವಗಡ ಸೋಲಾರ್ ಪಾರ್ಕ್‌ಗೆ ಡಿಕೆ ಶಿವಕುಮಾರ್ ಭೇಟಿಚಿತ್ರಗಳು : ಪಾವಗಡ ಸೋಲಾರ್ ಪಾರ್ಕ್‌ಗೆ ಡಿಕೆ ಶಿವಕುಮಾರ್ ಭೇಟಿ

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸೋಲಾರ್ ಪಾರ್ಕ್ ಉದ್ಘಾಟನೆ ಮಾಡಲಾಗಿತ್ತು. ಡಿ. ಕೆ. ಶಿವಕುಮಾರ್ ಆಗ ಇಂಧನ ಸಚಿವರಾಗಿದ್ದರು. ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ನಮ್ಮ ರಾಜ್ಯದಲ್ಲಿ ಇರುವುದು ಕರ್ನಾಟಕದ ಜನರ ಹೆಮ್ಮೆಯಾಗಿದೆ.

ನವ ಮಂಗಳೂರು ಬಂದರಿನಲ್ಲಿ ಬಾಷ್ ನಿಂದ ಸೌರ ವಿದ್ಯುತ್ ಉತ್ಪಾದನೆನವ ಮಂಗಳೂರು ಬಂದರಿನಲ್ಲಿ ಬಾಷ್ ನಿಂದ ಸೌರ ವಿದ್ಯುತ್ ಉತ್ಪಾದನೆ

ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್

ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಾಯಚೆರ್ಲು, ತಿರುಮಣಿ, ವೆಂಕಟಮ್ಮನಹಳ್ಳಿಯಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣಗೊಂಡಿದೆ. ಈ ಯೋಜನೆಯನ್ನು ಭಾರತೀಯ ಸೌರ ವಿದ್ಯುತ್ ನಿಗಮ (ಎಸ್‌ಇಸಿಎಲ್), ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‍ಪಿಡಿಸಿಎಲ್), ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‌ಇಡಿಎಲ್) ಜಂಟಿಯಾಗಿ ಜಾರಿಗೆ ತಂದಿವೆ.

13 ಸಾವಿರ ಎಕರೆ ಜಾಗ

13 ಸಾವಿರ ಎಕರೆ ಜಾಗ

ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಬರದಿಂದಾಗಿ ಕೃಷಿಗೆ ಯೋಗ್ಯವಾಗಿರದ ಭೂಮಿಯನ್ನು ರೈತರಿಂದ ಗುತ್ತಿಗೆ ಪಡೆಯಲಾಗಿದೆ. 13 ಸಾವಿರ ಎಕರೆ ಜಾಗದಲ್ಲಿ 2000 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡುವ ಗುರಿಯೊಂದಿಗೆ ಯೋಜನೆ ಆರಂಭಿಸಲಾಗಿತ್ತು. ಬಳಿಕ ಹೆಚ್ಚುವರಿಯಾಗಿ 50 ಮೆಗಾವಾಟ್ ವಿದ್ಯುತ್ ಹೆಚ್ಚು ಉತ್ಪಾದಿಸಲು ತೀರ್ಮಾನಿಸಲಾಯಿತು. ಪ್ರಸ್ತುತ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ.

ಸೋಲಾರ್ ಪಾರ್ಕ್ ಯೋಜನೆಯ ವಿವರ

ಸೋಲಾರ್ ಪಾರ್ಕ್ ಯೋಜನೆಯ ವಿವರ

2015ರ ಫೆಬ್ರವರಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. 2016ರ ಜನವರಿಯಲ್ಲಿ ವಿಶ್ವದ ದೊಡ್ಡ ಸೋಲಾರ್ ಪಾರ್ಕ್ ಕಾರ್ಯಾರಂಭ ಮಾಡಿತು. 250 ಮೆಗಾವಾಟ್‌ ವಿದ್ಯುತ್ ಉತ್ಪಾದನೆಯ 8 ಬ್ಲಾಕ್‌ಗಳಾಗಿ ಪಾರ್ಕ್ ವಿಭಜನೆ ಮಾಡಲಾಗಿದೆ. ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತ ರೈತರಿಂದ ಪಡೆದ ಭೂಮಿಗೆ ಪ್ರತಿ ಎಕರೆಗೆ 21 ಸಾವಿರ ರೂ. ಗುತ್ತಿಗೆ ಹಣವನ್ನು ನೀಡುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಶೇ 5ರಷ್ಟು ಹಣವನ್ನು ಹೆಚ್ಚಳ ಮಾಡಲಾಗುತ್ತದೆ.

ವಿದ್ಯುತ್ ಖರೀದಿಗೆ ಒಪ್ಪಂದ

ವಿದ್ಯುತ್ ಖರೀದಿಗೆ ಒಪ್ಪಂದ

ಈ ಸೋಲಾರ್ ಪಾರ್ಕ್‌ನಿಂದ ವಿದ್ಯುತ್ ಖರೀದಿ ಮಾಡಲು ರಾಜ್ಯದ 5 ವಿದ್ಯುತ್ ಸರಬರಾಜು ಕಂಪನಿಗಳು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಜೊತೆ ಒಪ್ಪಂದ ಮಾಡಿಕೊಂಡಿವೆ. ಪಾರ್ಕ್‌ನಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಗ್ರಿಡ್‌ಗೆ ಸಂಪರ್ಕಿಸಲು ಬೃಹತ್ ಲೈನ್‌ ಅನ್ನು ಸಹ ನಿರ್ಮಾಣ ಮಾಡಲಾಗಿದೆ.

English summary
Word biggest solar park become entirely operational. Solar park located at Tumakuru district Pavagada taluk nearly 13,000 acres of land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X