ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಕ್ಷಣ ಸಚಿವರ ಮನೆ ಮುಂದೆ RSS ಚಡ್ಡಿ ಸುಟ್ಟಿದ್ದ NSUI ಕಾರ್ಯಕರ್ತರಿಗೆ ಜಾಮೀನು

|
Google Oneindia Kannada News

ತುಮಕೂರು, ಜೂನ್ 9: ತಿಪಟೂರಿನಲ್ಲಿ ಶಿಕ್ಷಣ ಸಚಿವರ ಮನೆ ಮುಂದೆ ಆರ್‌ ಎಸ್‌ ಎಸ್‌ ಚಡ್ಡಿ ಸುಡುವ ಮೂಲಕ ಪ್ರತಿಭಟನೆ ನಡೆಸಿ ಜೈಲು ಸೇರಿದ್ದ 25 ಮಂದಿ ಎನ್‌ಎಸ್‌ಯುಐ ಕಾರ್ಯಕರ್ತರಿಗೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಇದು ಸತ್ಯಕ್ಕೆ ಸಿಕ್ಕ ಜಯ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಪಟೂರು ಜಿಲ್ಲಾ ಸತ್ರ ನ್ಯಾಯಾಧೀಶರಾದ ಪುಷ್ಪಾವತಿ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. ಆದೇಶ ಪತ್ರದಲ್ಲಿ ಒಬ್ಬರಿಗೆ ಇಬ್ಬರು ಶ್ಯೂರಿಟಿ ನೀಡಬೇಕೆಂದು ತಿಳಿಸಲಾಗಿದೆ. ನ್ಯಾಯಾಲಯದ ವಿಧಿ ವಿಧಾನಗಳು ಕಾರಾಗೃಹದ ಮುಖ್ಯಸ್ಥರಿಗೆ ತಲುಪಿದ ನಂತರ ಬಂಧಿಯಾಗಿರುವ ಎಲ್ಲಾ ಎನ್ಎಸ್‌ಯುಐ ಕಾರ್ಯಕರ್ತರು ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದರು.

ಬಂಧಿತ ಎನ್ಎಸ್ ಯುಐ ಕಾರ್ಯಕರ್ತರನ್ನು ಭೇಟಿ ಮಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ಬಂಧಿತ ಎನ್ಎಸ್ ಯುಐ ಕಾರ್ಯಕರ್ತರನ್ನು ಭೇಟಿ ಮಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್

ಕಾರ್ಯಕರ್ತರು ಪಠ್ಯ ಪರಿಷ್ಕರಣೆ ವಿರೋಧಿಸಿ ಹಾಗೂ ಇದುವರೆಗೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸರಬರಾಜು ಮಾಡದೇ ಇರುವ ಸರಕಾರದ ನಡೆಯನ್ನು ಖಂಡಿಸಿ, ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರು. ಇದು ಯಾವುದೇ ದುರುದ್ಧೇಶ ಪೂರ್ವಕವಾಗಿರಲಿಲ್ಲ. ಪ್ರತಿಭಟನೆ ನಡೆಸಿದ ಎನ್ಎಸ್‌ಯುಐ ಕಾರ್ಯಕರ್ತರ ವಿರುದ್ಧ ಬಾಂಬ್ ಅಥವಾ ಸ್ಪೋಟಕ ವಸ್ತುಗಳನ್ನು ಉಪಯೋಗಿಸುವಂತಹವರಿಗೆ ಹಾಕುವ 462 ಕಾನೂನನ್ನು ಹಾಕಿ ಜಾಮೀನು ರಹಿತ ಪ್ರಕರಣ ದಾಖಲಿಸಿ, ವಿದ್ಯಾರ್ಥಿಗಳನ್ನು ಜೈಲಿಗೆ ಕಳುಹಿಸಿರುವ ಕ್ರಮ ಖಂಡನೀಯ ಎಂದು ತಿಳಿಸಿದರು.

NSUI Activists Get Conditional bail from District Additional Court

ವಿದ್ಯಾರ್ಥಿಗಳ ಬಿಡುಗಡೆಗಾಗಿ ಕೆಪಿಸಿಸಿ ವಕೀಲರ ಘಟಕದಿಂದ ಕಳೆದ ಮೂರು ದಿನಗಳಿಂದಲೂ ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಶ್ರಮಪಟ್ಟಿದ್ದಾರೆ. ಬುಧವಾರ ಸಂಜೆ ಜಾಮೀನು ಮಂಜೂರಾಗಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸತ್ಯಕ್ಕೆ ಸಂದ ಜಯವಾಗಿದೆ. ದೆಹಲಿಯ ಮುಖ್ಯಮಂತ್ರಿ ಮನೆಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ದಾಂಧಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಅವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ, ಆದರೆ ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದರೆಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಜೈಲಿಗೆ ಕಳುಸಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

NSUI Activists Get Conditional bail from District Additional Court

ಆರ್‌ ಎಸ್‌ ಎಸ್‌ ಚಡ್ಡಿ ಸುಟ್ಟು ಪ್ರತಿಭಟನೆ

ಕುವೆಂಪು, ಭಗತ್‌ ಸಿಂಗ್ ಸೇರಿದಂತೆ ಹಲವಾರು ಮಹನೀಯರಿಗೆ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅವಮಾನ ಮಾಡಿದೆ ಎಂದು ಎನ್‌ಎಸ್‌ಯುಐ ಜೂನ್‌ 1 ರಂದು ಪ್ರತಿಭಟನೆ ಮಾಡಿತ್ತು. ಈ ಸಂದರ್ಭಲ್ಲಿ ಆರ್‌ಎಸ್‌ಎಸ್‌ ನ ಖಾಖಿ ಚಡ್ಡಿಯನ್ನು ಸುಟ್ಟು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈ ಘಟನೆ ಇಡೀ ಕರ್ನಾಟಕದಾದ್ಯಂತ ಭಾರಿ ಚರ್ಚೆಗೆ ಒಳಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕಳೆದ ಒಂದು ವಾರದಿಂದ ಪರ ವಿರೋಧ ಹೇಳಿಕಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ರಾಜ್ಯಾಂದ್ಯಂತ ಆರ್‌ ಎಸ್‌ ಎಸ್‌ ಚಡ್ಡಿ ಸುಡುವ ಅಭಿಯಾನವನ್ನೇ ಘೋಷಿಸಿದ್ದರು. ಕೆಲವು ಕಡೆ ಕಾಂಗ್ರೆಸ್ ಕಾರ್ಯಕರ್ತರು ಚಡ್ಡಿ ಸುಟ್ಟು ಪ್ರತಿನಡೆಸಿದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಸರಕಾರ ಚಡ್ಡಿಗಳನ್ನು ಕೆಪಿಸಿಸಿ ಕಚೇರಿಗೆ ಪಾರ್ಸಲ್‌ ಕಳುಹಿಸಿದ್ದರು.

Recommended Video

ಭಾರತದ ಬಗ್ಗೆ ಚೀನಾ ಈ ರೀತಿ ಹೇಳಿದ್ದೇಕೆ | OneIndia Kannada

(ಒನ್ಇಂಡಿಯಾ ಸುದ್ದಿ)

English summary
25 NSUI activists, who jailed for protesting by burning RSS khakhi shorts in front of education minister BC Nagesh house, get conditional bail from Tumkur district additional Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X