ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ, ಡಿಸಿಎಂ ಆಗಿದ್ದರೂ ದೇವಸ್ಥಾನದೊಳಗೆ ಸೇರಿಸಲ್ಲ; ಡಾ.ಜಿ. ಪರಮೇಶ್ವರ್

|
Google Oneindia Kannada News

ತುಮಕೂರು, ಏಪ್ರಿಲ್‌ 14: ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ನೇತಾರ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ ಡಾ.ಬಿ.ಆರ್. ಅಂಬೇಡ್ಕರ್‌ರವರ 131ನೇ ಜನ್ಮದಿನ.

Recommended Video

ದಲಿತರನ್ನು ದೇವಸ್ಥಾನದಲ್ಲಿ ಈಗ್ಲೂ ಹೇಗೆ ನಡೆಸಿಕೊಳ್ತಾರೆ ಅನ್ನೋದನ್ನ ಹೇಳಿದ ಡಾ.ಜಿ ಪರಮೇಶ್ವರ್ | Oneindia Kannada

14ನೇ ಏಪ್ರಿಲ್ 1891ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬಲ್ಲಿ ಜನಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ಬರೀ ಕಷ್ಟದ ಜೀವನವನ್ನೇ ಕಂಡಿದ್ದವರು. ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗಿಗೆ ಸಿಲುಕಿದ ಅಂಬೇಡ್ಕರ್ ಕುಟುಂಬ ಭಾರೀ ಅವಮಾನ ಎದುರಿಸಿತ್ತು.

ಬಾಬಾಸಾಹೇಬರ ಸಂಕ್ಷಿಪ್ತ ಇತಿಹಾಸ: ಡಾ.ಬಿ.ಆರ್. ಅಂಬೇಡ್ಕರ್ ಎಂದೆಂದಿಗೂ ಅಮರ!ಬಾಬಾಸಾಹೇಬರ ಸಂಕ್ಷಿಪ್ತ ಇತಿಹಾಸ: ಡಾ.ಬಿ.ಆರ್. ಅಂಬೇಡ್ಕರ್ ಎಂದೆಂದಿಗೂ ಅಮರ!

ಡಾ.ಬಿ.ಆರ್. ಅಂಬೇಡ್ಕರ್‌ರವರ 131ನೇ ಜನ್ಮದಿನ ಅಂಗವಾಗಿ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣ ಪಂಚಾಯತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಮಗಾದ ಅನುಭವವನ್ನು ಹಂಚಿಕೊಂಡರು.

Tumkur: Not Allowing Me To Temples As I Am Dalit Says Former DCM G Parameshwar In Koratagere

ಭಾರತ ದೇಶದಲ್ಲಿ ಸಮಾನತೆಗೆ ಸ್ಪಷ್ಟ ಭಾಷ್ಯ ಬರೆದ ಅಂದರೆ ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನ ರೂಪಿಸಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದೇ ಡಾ.ಜಿ. ಪರಮೇಶ್ವರ್ ಅತ್ಯಂತ ಬೇಸರದ ಸಂಗತಿಯೊಂದನ್ನು ವಿಷಾದದ ದನಿಯಲ್ಲಿ ಹೊರಹಾಕಿದ್ದಾರೆ.

Ambedkar Jayanti 2022 : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ 2022: ಇತಿಹಾಸ, ಸತ್ಯಗಳು ಮತ್ತು ಮಹತ್ವ Ambedkar Jayanti 2022 : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ 2022: ಇತಿಹಾಸ, ಸತ್ಯಗಳು ಮತ್ತು ಮಹತ್ವ

"ನಾನು ಮಾಜಿ ಸಚಿವ, ಶಾಸಕ, ಮಾಜಿ ಉಪ ಮುಖ್ಯಮಂತ್ರಿಯೇ ಆಗಿದ್ದರೂ ದಲಿತ ಎಂಬ ಕಾರಣಕ್ಕೆ ದೇಗುಲದೊಳಗೆ ನನ್ನನ್ನು ಸೇರಿಸುವುದಿಲ್ಲ," ಎಂದು ಕೊರಟಗೆರೆಯಲ್ಲಿ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಬೇಸರ ಹೊರಹಾಕಿದ್ದಾರೆ.

ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, "ದಲಿತ ಎಂಬ ಕಾರಣಕ್ಕೆ ದೇವಸ್ಥಾನದೊಳಗೆ ಬಿಟ್ಟುಕೊಳ್ಳಲ್ಲ," ಎಂದು ಬಹಿರಂಗವಾಗಿಯೇ ಪರಮೇಶ್ವರ್ ತಮ್ಮ ಬೇಸರ ಹೊರ ಹಾಕಿದರು. ಹೀಗೆ ಅವರು ವಿಷಾದ ವ್ಯಕ್ತಪಡಿಸಿದ್ದು ಇಂದಿನ ಸಾಮಾಜಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು.

Tumkur: Not Allowing Me To Temples As I Am Dalit Says Former DCM G Parameshwar In Koratagere

"ದೇವಸ್ಥಾನಕ್ಕೆ ಹೋದರೆ ಸ್ವಲ್ಪ ಅಲ್ಲೇ ನಿಂತುಕೊಳ್ಳಿ ಅಂತಾರೆ, ಅಲ್ಲೇ ನಿಲ್ಲಿ ಎಂದು ಮಂಗಳಾರತಿ ತಟ್ಟೆ ತಂದು ಬಿಡುತ್ತಾರೆ. ದೇಗುಲದೊಳಗೆ ಬಂದು ಬಿಡ್ತೀನಿ ಅಂತಾ ಹೀಗೆ ಮಾಡುತ್ತಾರೆ. ಇಂಥ ಪರಿಸ್ಥಿತಿ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದರೂ ಸಮಾಜದಲ್ಲಿದೆ," ಎಂದು ಹಿರಿಯ ನಾಯಕ ಜಿ.ಪರಮೇಶ್ವರ್ ಅವರು ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತಪಡಿಸಿದರು.

ಉತ್ತಮ ಸ್ಥಾನ ಪಡೆದು ಸಮಾಜವನ್ನೇ ಮರೆತರು; ಸಿಎಂ ಬೊಮ್ಮಾಯಿ
ಇಂದು ಭಾರತ ಸಂವಿಧಾನ ಶಿಲ್ಪಿ ಅಂಬೇಡ್ಕರ್​ ಜಯಂತಿ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಅಂಬೇಡ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಈ ವೇಳೆ ಸಭೆಯಲ್ಲಿ ಮಾತಾಡಿದ ಸಿಎಂ ಬಸವರಾಜ​ ಬೊಮ್ಮಾಯಿ,​ ಅಪಾರವಾದ ಜ್ಞಾನ ನಮ್ಮ ಸಂವಿಧಾನದಲ್ಲಿದೆ. ಸಮಾಜದಲ್ಲಿರುವ ಎಲ್ಲ ಸಮಸ್ಯೆಗಳಿಗೂ ಉತ್ತರ ಸಂವಿಧಾನದಲ್ಲಿದೆ. ಸೂರ್ಯ, ಚಂದ್ರ ಇರುವವರೆಗೂ ನಮ್ಮ ಸಂವಿಧಾನ ಹಾಗೂ ಅಂಬೇಡ್ಕರ್ ಹೆಸರೂ ಕೂಡ ಇರುತ್ತದೆ ಎಂದು ಹೇಳಿದರು.

ಅನೇಕರು ಅಂಬೇಡ್ಕರ್​ ಹೆಸರಿನಲ್ಲಿ ಉತ್ತಮ ಸ್ಥಾನ ಪಡೆದು ನಂತರ ಸಮಾಜವನ್ನೇ ಮರೆತಿದ್ದಾರೆ. ಇವರೆಲ್ಲಾ ಪಟ್ಟಭದ್ರ ಹಿತಾಸಕ್ತರು. ಈ ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡುತ್ತಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನನ್ನನ್ನು ನನ್ನ ಕೆಲಸದಿಂದ ಅಳೆಯಿರಿ, ಎಲ್ಲಾ ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಇದೂವರೆಗೆ ಈ ಕೆಲಸವನ್ನೂ ಯಾರೂ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

English summary
Not Allowing Me To Temples As I Am Dalit Says Former DCM G Parameshwar In Koratagere of Tumakuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X