ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು-ಅರಸೀಕೆರೆ ಜೋಡಿ ಮಾರ್ಗ; ಮಹತ್ವದ ಮೈಲುಗಲ್ಲು

|
Google Oneindia Kannada News

ತುಮಕೂರು, ಫೆಬ್ರವರಿ 02: ತುಮಕೂರು-ಅರಸೀಕೆರೆ ನಡುವಿನ ಜೋಡಿ ಹಳಿ ಕಾಮಗಾರಿಯಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ. ನಿಟ್ಟೂರು-ಗುಬ್ಬಿ ನಡುವಿನ ಜೋಡಿ ಮಾರ್ಗ ಪೂರ್ಣಗೊಂಡಿದ್ದು, ರೈಲು ಸಂಚಾರಕ್ಕೆ ಮುಕ್ತವಾಗಿದೆ.

ತುಮಕೂರು-ಅರಸೀಕೆರೆ ನಡುವಿನ ಜೋಡಿ ಹಳಿ ನಿರ್ಮಾಣ ಬಹು ಬೇಡಿಕೆಯದ್ದಾಗಿತ್ತು. ಸುಮಾರು 578 ಕೋಟಿ ರೂ. ವೆಚ್ಚದಲ್ಲಿ ಇದರ ಕಾಮಗಾರಿ ಆರಂಭಿಸಲಾಗಿತ್ತು. ತುಮಕೂರು-ಗುಬ್ಬಿ ನಡುವಿನ 18 ಕಿ. ಮೀ. ಮಾರ್ಗ ಈಗಾಗಲೇ ಪೂರ್ಣಗೊಂಡಿದೆ.

ತುಮಕೂರು-ಗುಬ್ಬಿ ಜೋಡಿ ಹಳಿ ರೈಲು ಸಂಚಾರಕ್ಕೆ ಮುಕ್ತತುಮಕೂರು-ಗುಬ್ಬಿ ಜೋಡಿ ಹಳಿ ರೈಲು ಸಂಚಾರಕ್ಕೆ ಮುಕ್ತ

"ಮೂಲಭೂತ ಸೌಕರ್ಯಾಭಿವೃದ್ಧಿಯಲ್ಲಿ ಮತ್ತೊಂದ ಮೈಲಿಗಲ್ಲು. ತುಮಕೂರು-ಅರಸೀಕೆರೆ ಜೋಡಿಮಾರ್ಗ ಯೋಜನೆಯ ಭಾಗವಾದ ನಿಟ್ಟೂರು-ಗುಬ್ಬಿ ನಡುವಿನ ಜೋಡಿಮಾರ್ಗ ಪೂರ್ಣಗೊಂಡು ರೈಲು ಸಂಚಾರಕ್ಕೆ ಮುಕ್ತವಾಯಿತು" ಎಂದು ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಹಾಗೂ ಬಂಗಾರಪೇಟೆ ನಡುವೆ ಮೆಮು ರೈಲು ಸಂಚಾರ ಬೆಂಗಳೂರು ಹಾಗೂ ಬಂಗಾರಪೇಟೆ ನಡುವೆ ಮೆಮು ರೈಲು ಸಂಚಾರ

 Nitturu Gubbi Railway Double Line Open

ತುಮಕೂರು-ಅರಸೀಕೆರೆ ನಡುವಿನ ಸುಮಾರು 96 ಕಿ. ಮೀ. ಮಾರ್ಗದಲ್ಲಿ ಜೋಡಿ ಹಳಿ ನಿರ್ಮಾಣ ಮಾಡುವ ಕುರಿತು ವರದಿ ತಯಾರು ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಬಳಿಕ ಕಾಮಗಾರಿ ಆರಂಭಿಸಲಾಗಿತ್ತು. ಪೂರ್ಣ ಕಾಮಗಾರಿ 2021ರ ಅಂತ್ಯದಲ್ಲಿ ಮುಗಿಯುವ ನಿರೀಕ್ಷೆ ಇದೆ.

ಚೆನ್ನೈ-ಬೆಂಗಳೂರು-ಮೈಸೂರು ವಿಶೇಷ ರೈಲು; ವೇಳಾಪಟ್ಟಿ ಚೆನ್ನೈ-ಬೆಂಗಳೂರು-ಮೈಸೂರು ವಿಶೇಷ ರೈಲು; ವೇಳಾಪಟ್ಟಿ

ತುಮಕೂರು-ಗುಬ್ಬಿ ನಡುವೆ ಜೋಡಿ ಹಳಿಯಲ್ಲಿ ರೈಲುಗಳು ಸಂಚಾರ ನಡೆಸುತ್ತಿವೆ. ಹಗ್ಗೆರೆ, ಮಲ್ಲಸಂದ್ರ ಮತ್ತು ಗುಬ್ಬಿ ಮೂರು ನಿಲ್ದಾಣಗಳು ಈ ಮಾರ್ಗದಲ್ಲಿವೆ. ಈಗ ನಿಟ್ಟೂರು-ಗುಬ್ಬಿ ನಡುವಿನ ಜೋಡಿ ಹಳಿ ಮಾರ್ಗವೂ ಸಂಚಾರಕ್ಕೆ ಮುಕ್ತವಾಗಿದೆ.

ಬೆಂಗಳೂರಿನಿಂದ ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಹೊರ ರಾಜ್ಯಗಳಿಗೆ ಸಾಗುವ ಅನೇಕ ರೈಲುಗಳು ತುಮಕೂರು ಮೂಲಕವೇ ಸಂಚಾರ ನಡೆಸಲಿವೆ. ಆದ್ದರಿಂದ, ಜೋಡಿ ಮಾರ್ಗ ತೀರಾ ಅಗತ್ಯವಾಗಿತ್ತು.

ಕೇವಲ ಪ್ರಯಾಣಿಕ ರೈಲುಗಳು ಮಾತ್ರವಲ್ಲದ ಹಲವಾರು ಸರಕು ಸಾಗಣೆ ರೈಲುಗಳು, ನೆಲಮಂಗಲದಿಂದ ಹೊರಡುವ ರೋ ರೋ ವಿಶೇಷ ರೈಲು ಸಹ ತುಮಕೂರು ಮಾರ್ಗವಾಗಿಯೇ ಸಂಚಾರ ನಡೆಸಲಿದೆ.

English summary
South western railway has commissioned the Nitturu-Gubbi second railway line. It is the part of the Tumakuru-Arasikere double line project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X