ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿ: ಪ್ರೊ ಸಿದ್ದೇಗೌಡ

|
Google Oneindia Kannada News

ತುಮಕೂರು, ಸೆ. 20: ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ, ವೃತ್ತಿಪರತೆ, ಪ್ರತಿಭೆಯನ್ನು ವಿದ್ಯಾರ್ಥಿಯಲ್ಲಿ ಬೆಳೆಸುವುದಷ್ಟೇ ಅಲ್ಲದೆ, ಮೌಲ್ಯಗಳನ್ನೂ ಪೋಷಿಸುವ ಗುರಿ ಇಟ್ಟುಕೊಂಡಿದೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ(ಪಿಆರ್ ಸಿಐ)ದಿಂದ ಉತ್ತಮ ಆಡಳಿತಕ್ಕಾಗಿ 'ಚಾಣಕ್ಯ' ಪ್ರಶಸ್ತಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ತುಮಕೂರು ವಿಶ್ವ ವಿದ್ಯಾಲಯ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜವಾಬ್ದಾರಿ ವಹಿಸಿದವರ ನಂಬಿಕೆಗೆ ಚ್ಯುತಿ ಬರದ ಮತೆ ಕರ್ತವ್ಯ ನಡೆಸುವುದು ಉತ್ತಮ ಆಡಳಿತಗಾರರ ಲಕ್ಷಣ. ಹೀಗಾಗಿ ಪ್ರತಿಯೊಬ್ಬರು ತಮಗೆ ನೀಡಿದ ಜವಾಬ್ಧಾರಿಯನ್ನು ಯಾರ ನಂಬಿಕೆಗೂ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಕರ್ನಲ್ ಪ್ರೊ. ಸಿದ್ದೇಗೌಡ ಅವರು ತಿಳಿಸಿದರು.

National Education Policy aims to nurture students knowledge, skills Says Tumkuru university V.C.

ಯಾರನ್ನೂ ಮೆಚ್ಚಿಸಲು ನಾವು ಕೆಲಸ ಮಾಡಬಾರದು. ನಮ್ಮ ಆತ್ಮ ತೃಪ್ತಿಗಾಗಿ ಕೆಲಸ ಮಾಡಬೇಕು. ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಮೌಲ್ಯವರ್ಧನೆಯಾಗುವಂತೆ ನೋಡಿಕೊಳ್ಳಬೇಕು. ಸಮಾಜದಲ್ಲಿ ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು ಎಂದು ಕಿವಿಮಾತು ಹೇಳಿದರು.

ಸದಾ ಸಮಾಜಮುಖಿ ಹಾಗೂ ಸಕಾರಾತ್ಮಕ ಯೋಚನೆ ಮಾಡಬೇಕು. ಆಗ ಆರೋಗ್ಯ ಮತ್ತು ಆಯುಷ್ಯ ಎರಡೂ ವೃದ್ಧಿಯಾಗುತ್ತದೆ. ಇದರಿಂದ ಕುಟುಂಬ, ಸಮಾಜ ಹಾಗೂ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಇದೇ ಚೌಕಟ್ಟನ್ನು ಇಟ್ಟುಕೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ, ವೃತ್ತಿಪರತೆ, ಪ್ರತಿಭೆಯನ್ನು ವಿದ್ಯಾರ್ಥಿಯಲ್ಲಿ ಬೆಳೆಸುವುದಷ್ಟೇ ಅಲ್ಲದೆ, ಮೌಲ್ಯಗಳನ್ನೂ ಪೋಷಿಸುವ ಗುರಿ ಇಟ್ಟುಕೊಂಡಿದೆ. ನೂತನ ಶಿಕ್ಷಣ ನೀತಿಯನ್ನು ಪ್ರಾಮಾಣಿಕವಾಗಿ ಜಾರಿಗೆ ಎಲ್ಲರೂ ಪ್ರಯತ್ನಿಸಬೇಕು ಎಂದರು.

National Education Policy aims to nurture students knowledge, skills Says Tumkuru university V.C.

ಸಕಾರಾತ್ಮಕ ಯೋಚನೆಯಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ. ಇದರಿಂದ ಕುಟುಂಬ, ಸಮಾಜ ಹಾಗೂ ಇಡೀ ರಾಷ್ಟ್ರಕ್ಕೆ ಒಳ್ಳೆಯದಾಗುತ್ತದೆ. ಇದೇ ಚೌಕಟ್ಟನ್ನು ಇಟ್ಟುಕೊಂಡಿರುವ ಕುಲಪತಿಗಳನ್ನು ಅಭಿನಂದಿಸಿ ಮಾತನಾಡಿದ ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ, ಕುಲಪತಿಗಳಿಗೆ ಸಂದ ಪ್ರಶಸ್ತಿ ತುಮಕೂರು ವಿವಿಯ ಗೌರವವನ್ನು ಹೆಚ್ಚಿಸಿದೆ. ಅವರ ಕಾರ್ಯವೈಖರಿ, ಬದ್ಧತೆ, ಸಮಯಪ್ರಜ್ಞೆ ಹಾಗೂ ನಾಯಕತ್ವ ಎಲ್ಲರಿಗೂ ಮಾದರಿ ಎಂದರು.

ಪ್ರೊ. ಸಿದ್ದೇಗೌಡ ಅವರು ಜೀವನದಲ್ಲಿ ಕಷ್ಟಪಟ್ಟು ಮುಂದೆ ಬಂದವರು. ತಮ್ಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ಉನ್ನತ ಸ್ಥಾನಮಾನ ಪಡೆಯಬೇಕೆಂದು ಬಯಸಿದವರು. ನಡೆನುಡಿಯಲ್ಲಿ ಎಲ್ಲರನ್ನೂ ಪ್ರಭಾವಿಸಿದವರು. ಕೋವಿಡ್ ಸಮಯದಲ್ಲಿ ಅವರು ತೋರಿದ ನಾಯಕತ್ವದಿಂದ ತುಮಕೂರು ವಿವಿಗೆ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಹೆಸರು ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು. ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್‍ರಾಜು ಸ್ವಾಗತಿಸಿದರು. ಹಣಕಾಸು ಅಧಿಕಾರಿ ನರಸಿಂಹಮೂರ್ತಿ ವಂದಿಸಿದರು. ಡಾ. ಜಾಯ್ ನೆರೆಲ್ಲಾ, ಡಾ. ಡಿ. ಸುರೇಶ್ ಹಾಗೂ ಡಾ. ಮಂಗಳಾಗೌರಿ ಎಂ. ಉಪಸ್ಥಿತರಿದ್ದರು.

National Education Policy aims to nurture students knowledge, skills Says Tumkuru university V.C.

ಹದಿನಾಲ್ಕು ವಿಷಯಗಳ ಪಠ್ಯ ಕ್ರಮ ಸಮಿತಿಗೆ ನಾಯಕತ್ವ: ಕರ್ನಲ್ ಪ್ರೊ. ಸಿದ್ದೇಗೌಡ ಅವರು ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಮ್ಮದೇ ಅಮೂಲ್ಯ ಕೊಡುಗೆ ನೀಡಿದ್ದಾರೆ. ಪ್ರಸಕ್ತ ಸಾಲಿನ ಮೊದಲ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ ಹದಿನಾಲ್ಕು ವಿಷಯಗಳಿಗೆ ಪಠ್ಯ ಕ್ರಮವನ್ನು ರಚಿಸಿದ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಲಮಿತಿಯೊಳಗೆ ಹದಿನಾಲ್ಕು ವಿಷಯಗಳ ಪಠ್ಯಕ್ರಮ ತಯಾರಿಸಿ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಗೆ ಸಲ್ಲಿಸಿದ್ದರು. ಈ ಮೂಲಕ ಮುಂದಿನ ತಿಂಗಳು ಐದರಿಂದ ಆರಂಭವಾಗಲಿರುವ ಕಾಲೇಜು ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಿಗೆ ಅಲೆದಾಡದಂತೆ ಪಠ್ಯಕ್ರಮ ರಚನೆ ಮಾಡಿ ಸರ್ಕಾರಕ್ಕೆ ಸಲ್ಲಿಸಿ ಶಿಕ್ಷಣ ಇಲಾಖೆಯಲ್ಲಿ ಗಮನ ಸೆಳೆದಿದ್ದಾರೆ.

ಕರ್ನಲ್ ಪ್ರೊ. ಸಿದ್ದೇಗೌಡ ಅವರು ಕಳೆದ 39 ವರ್ಷ ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಈವರೆಗೂ 147 ಸಂಶೋಧನೆ ಆಧಾರಿತ ಲೇಖನ ಬರೆದಿದ್ದು, ಆರು ಪುಸ್ತಕ ಬರೆದಿದ್ದಾರೆ. ಬರೋಬ್ಬರಿ ಹದಿನೇಳು ಸಂಶೋಧನಾ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಸುಮಾರು 26 ಮಂದಿ ಪಿಎಚ್‌ಡಿ ಡಾಕ್ಟರೇಟ್ ಪದವಿ ಪಡೆಯಲು ಗುರುಗಳಾಗಿ ಜ್ಞನವನ್ನು ಧಾರೆ ಎರೆದಿದ್ದಾರೆ. ಅಂತಾರಾಷ್ಟ್ರಯ ಮಟ್ಟದ ಜರ್ನಲ್‌ಗಳ ಸಂಪಾದಕರಾಗಿ ಸೇವೆ ಮಾಡಿದ್ದು, ಪ್ರಸ್ತುತ ತುಮಕೂರು ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತುಮಕೂರು ವಿವಿಗೆ ಹೊಸ ಕಾಯಕಲ್ಪ: ತನ್ನ ಅನುಭವ ಹಾಗೂ ಜ್ಞಾನದಿಂದ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಮಹಿಳಾ ಅಧ್ಯಯನ, ಸಮಾಜ ಕಾರ್ಯ, ಹಾಗು ಪತ್ರಿಕೋದ್ಯಮ ವಿಭಾಗದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕಲೋನಲ್, ಕಲೋನಲ್ ಕಮಾಂಡಂಟ್ ಆಫ್ ನ್ಯಾಷನಲ್ ಕ್ರೆಡಿಟ್ ಕಾರ್ಪ್ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದಾರೆ. ಇದಲ್ಲದೇ "The Most Dedicated Vice Chancellor." ಎಂಬ ಪ್ರಶಸ್ತಿಯನ್ನು ಸಿದ್ದೇಗೌಡರು ಪಡೆದಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

English summary
National Education Policy aims to nurture students' knowledge, skills, professionalism and talents as well as values says Tumkuru University vice chancellor Pro. Y.S. Siddegowda know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X