ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಟಿಪ್ಲೆಕ್ಸ್ ವಾಹಿನಿ: ಕೃಷಿ ಮಾಸಿಕ ಲೋಕಾರ್ಪಣೆ

By Mahesh
|
Google Oneindia Kannada News

ಬೆಂಗಳೂರು, ಫೆ.9: 'ಮಲ್ಟಿಪ್ಲೆಕ್ಸ್ ವಾಹಿನಿ' ಕೃಷಿ ಮಾಸಪತ್ರಿಕೆಯ ಚೊಚ್ಚಲ ಸಂಚಿಕೆ ಸೋಮವಾರ ಬಿಡುಗಡೆಯಾಗಿದೆ. ಪಶು ಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಅವರು ತಮ್ಮ ಗೃಹ ಕಛೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆದ ಸರಳ ಸಮಾರಂಭದಲ್ಲಿ ಸಚಿವರು ಪತ್ರಿಕೆ ಲೋಕಾರ್ಪಣೆ ಮಾಡಿ ಶುಭ ಕೋರಿದರು.

1960 ರಿಂದ ಈಚೆಗೆ ಭಾರತದ ಕೃಷಿ ಕ್ಷೇತ್ರದಲ್ಲಿ ಆದ ಬದಲಾವಣೆಗಳಿಗೆ ಸಾಕ್ಷಿಯಾದ ನಮ್ಮ ತಂಡ ಕೃಷಿಯಲ್ಲಿ ಲಘು ಪೋಷಕಾಂಶಗಳ ಮಹತ್ವವನ್ನು ದೇಶದ ರೈತ ಸಮುದಾಯಕ್ಕೆ ತಿಳಿಸುವ ಪ್ರಯತ್ನ ಮಾಡಿತು. ಅದರಿಂದ ನಾಡಿನ ಕೃಷಿ ಉತ್ಪಾದಕತೆ ಹೆಚ್ಚಾದದ್ದು ಈಗ ಇತಿಹಾಸ ಎಂದು ಪತ್ರಿಕೆ ಸಂಪಾದಕ ಕೆ.ಎನ್ ನಾಗೇಶ್ ಹೇಳಿದರು.

Multiplex Vahini Agriculture based monthly magazine

1974 ರಲ್ಲಿ ಆರಂಭವಾದ ನಮ್ಮ ಕೃಷಿ ಕಾಯಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿಕೊಂಡಿದೆ. ಕಳೆದ ನಾಲ್ಕು ದಶಕಗಳಿಗೂ ಮೀರಿದ ನಮ್ಮ ಕೃಷಿ ಅನುಭವಗಳನ್ನು ರೈತ ಸಮುದಾಯದ ಜೊತೆ ಹಂಚಿಕೊಳ್ಳಲು ಈ ಪತ್ರಿಕೆ ರೂಪಿಸಿದ್ದೇವೆ.

ದೇಸಿ ಕೃಷಿ ಜ್ಞಾನ, ಆಧುನಿಕ ಬೇಸಾಯ ಪದ್ಧತಿಗಳು, ಸುಧಾರಿತ ಬೇಸಾಯ ಕ್ರಮಗಳು, ಸಮಗ್ರ ಪೋಷ್ಟಿಕಾಂಶಗಳ ನಿರ್ವಹಣೆ, ಸಮಗ್ರ ಕೀಟ ರೋಗಗಳ ನಿರ್ವಹಣೆ ಮುಂತಾದ ತಾಂತ್ರಿಕ ಮಾಹಿತಿಗಳನ್ನು ಹೊತ್ತು ತರುವ ಮಲ್ಟಿಪ್ಲೆಕ್ಸ್ ವಾಹಿನಿ ನಿಮ್ಮ ಕೃಷಿಮಾಹಿತಿ ದಾಹಕ್ಕೆ ಜೀವಜಲವಾಗಿ, ಪ್ರಶ್ನೆಗಳಿಗೆ ಉತ್ತರವಾಗಿ, ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರವಾಗಿ ಪ್ರತಿ ತಿಂಗಳು ನಿಮ್ಮ ಕೈಸೇರಲಿದೆ.

'ಮಲ್ಟಿಪ್ಲೆಕ್ಸ್ ವಾಹಿನಿ' ಈ ನಾಡಿನ ರೈತರ ಸರ್ವತೋಮುಖ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಪ್ರಕಟಗೊಳ್ಳುತ್ತಿರುವ ಸಂಪೂರ್ಣ ಕೃಷಿ ಮಾಸಿಕ. ಕೃಷಿ ಬದುಕು ಲಾಭದಾಯಕವಾಗಿಸಲು, ಕೃಷಿಕರ ಬದುಕು ಹಸನಾಗಿಸಲು ಗಾವುದ ಗಾವುದ ನಡೆಯುವ ಶಕ್ತಿ ಎಲ್ಲರಿಗೂ ಬರಲಿದೆ ಎಂಬ ವಿಶ್ವಾಸದೊಂದಿಗೆ ಪತ್ರಿಕೆ ನಿಮ್ಮ ಕೈಗಿಡುತ್ತಿದ್ದೇವೆ ಎಂದು ಪತ್ರಿಕೆ ಸಂಪಾದಕ ಕೆ.ಎನ್.ನಾಗೇಶ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

English summary
Animal Husbandry Minister T.B Jayachandra launched 'Multiplex Vahini' a unique Agriculture based monthly magazine today (Feb.9)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X