ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧುಗಿರಿಯಲ್ಲಿ ವಿಷ ಉಣಿಸಿ ಕೋತಿಗಳ ಹತ್ಯೆ

|
Google Oneindia Kannada News

ತುಮಕೂರು, ಆ.18 : ಕೋತಿಗಳಿಗೆ ವಿಷಹಾಕಿ, ಶವಗಳನ್ನು ಮೂಟೆ ಕಟ್ಟಿ ತಂದು ಮಧುಗಿರಿಯ ದೊಡ್ಡಮಾಲೂರು ಕೆರೆಯ ಬಳಿ ಎಸೆದು ಹೋಗಿರುವ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮೂಟೆಯಲ್ಲಿದ್ದ ಒಂದೆರಡು ಮರಿ ಕೋತಿಗಳು ಜೀವಂತವಾಗಿದ್ದು, ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಮಧುಗಿರಿ ತಾಲೂಕಿನ ದೊಡ್ಡಮಾಲೂರು ಕೆರೆಯ ಬಳಿ ಸೋಮವಾರ ಬೆಳಗ್ಗೆ ಎರಡು ಮೂಟೆಗಳು ಬಿದ್ದಿರುವುದನ್ನು ಕಂಡು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಮೊಟೆಯೊಳಗೆ ಪ್ರಾಣಿ ಒದ್ದಾಡುತ್ತಿರುವಂತೆ ಕಂಡಿದ್ದರಿಂದ ಅದನ್ನು ಬಿಚ್ಚಿ ನೋಡಿದ್ದಾರೆ. ಆಗ ಅವುಗಳಲ್ಲಿ ಕೋತಿಗಳ ಶವ ಕಂಡುಬಂದಿದ್ದು, ತಕ್ಷಣ ಪಶುಪವೈದ್ಯರಿಗೆ ಮಾಹಿತಿ ನೀಡಿದ್ದಾರೆ.

Monkey

ಎರಡು ಮೂಟೆಗಳಲ್ಲಿ ಒಟ್ಟು 35 ಕೋತಿಗಳಿದ್ದವು. ಅವುಗಳಲ್ಲಿ ನಾಲ್ಕು ಸಣ್ಣ ಮರಿಗಳು ಇನ್ನೂ ಜೀವಂತವಾಗಿದ್ದು, ಅವುಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ. ಬೇರೆಕಡೆ ಕೋತಿಗಳನ್ನು ಸಾಯಿಸಿ ಮೂಟೆ ಕಟ್ಟಿತಂದು ಇಲ್ಲಿ ಎಸೆದಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋತಿಗಳ ಶವಗಳನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ನಡೆಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. [ಸತ್ತ ಕೋತಿಗಳಿಗಾಗಿ ದೇವಾಲಯ ನಿರ್ಮಾಣ]

ಗುಡಿ ಕಟ್ಟಿದ ಗ್ರಾಮಸ್ಥರು : ಜುಲೈನಲ್ಲಿ ಕೋಲಾರ ಜಿಲ್ಲೆಯ ಮೈಲಾಂಡಹಳ್ಳಿಯಲ್ಲಿ 20ಕ್ಕೂ ಹೆಚ್ಚು ಕೋತಿಗಳು ಸಿಡಿಲು ಬಡಿದು ಸಾವನ್ನಪ್ಪಿದ್ದವು. ಗ್ರಾಮಸ್ಥರು ಅವುಗಳ ಅಂತಿಮ ಸಂಸ್ಕಾರ ನೆರವೇರಿಸಿ, ಆ ಸ್ಥಳದಲ್ಲಿ ಚಿಕ್ಕಗುಡಿ ಕಟ್ಟಿದ್ದಾರೆ.

English summary
More than 25 monkeys died on Monday after eating poisoned food. Monkeys dead body found near Doddamallur lake near Madhugiri. Madhugiri police booked a case and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X