ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು : ಸಿದ್ದಗಂಗಾ ನಗರ ಸಾರಿಗೆಗೆ 32 ಬಸ್ ಸೇರ್ಪಡೆ

|
Google Oneindia Kannada News

ತುಮಕೂರು, ಆಗಸ್ಟ್ 23 : ತುಮಕೂರಿನ 'ಸಿದ್ದಗಂಗಾ ನಗರ ಸಾರಿಗೆ' ವ್ಯವಸ್ಥೆಗೆ ಹೆಚ್ಚಿನ ಬಸ್‌ ಭಾಗ್ಯ ಸಿಕ್ಕಿದೆ. ಟಾಟಾ ಕಂಪನಿಯ 34 ಹೈಟೆಕ್ ಬಸ್ಸುಗಳು ಕೆಎಸ್ಆರ್‌ಟಿಸಿ ನಗರ ಸಾರಿಗೆ ಸೇವೆಗೆ ಸೇರ್ಪಡೆಗೊಂಡಿವೆ. ಒಂದು ಬಸ್ಸಿನ ಬೆಲೆ 38 ಲಕ್ಷ ರೂ.ಗಳು.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮತ್ತು ಸಂಸದ ಮುದ್ದಹನುಮೇಗೌಡ ಅವರು ನೂತನ ನಗರ ಸಾರಿಗೆ ಬಸ್ಸುಗಳಿಗೆ ಚಾಲನೆ ನೀಡಿದರು. ಹೊಸ ಬಸ್ಸುಗಳ ಸೇರ್ಪಡೆಯಿಂದಾಗಿ ನಗರಸಾರಿಗೆ ಬಸ್ ಸೌಲಭ್ಯದಿಂದ ವಂಚಿತವಾದ ಪಾಲಿಕೆ ವ್ಯಾಪ್ತಿಯ ಗ್ರಾಮಗಳ ಜನರ ಬಸ್ಸಿನ ಕನಸು ಈಡೇರಿದಂತಾಗಿದೆ.[ಜೆ ನರ್ಮ್: ಮಂಗಳೂರು, ಉಡುಪಿಗೆ 65 ಅತ್ಯಾಧುನಿಕ ಬಸ್]

More buses added to fleet of Tumakuru city bus services

ನಗರ ಸಾರಿಗೆಯಲ್ಲಿ ಎಷ್ಟು ಬಸ್ಸುಗಳಿದ್ದರೂ ಕೇವಲ ತುಮಕೂರು-ಬೆಂಗಳೂರು ಮಾರ್ಗಕ್ಕೆ ಸೀಮಿತವಾಗಿವೆ ಎಂಬ ಆರೋಪವಿತ್ತು. ಇದರಿಂದಾಗಿ ಬೇರೆ ಪ್ರದೇಶದ ಜನರಿಗೆ ಬಸ್ ಸೌಲಭ್ಯ ಸಿಗುತ್ತಿಲ್ಲ ಎಂಬ ದೂರು ಸಾಮಾನ್ಯವಾಗಿತ್ತು. ಸುಮಾರು ಎರಡೂವರೆ ವರ್ಷದಿಂದಲೂ 40 ಬಸ್ ಬರುತ್ತವೆ ಎಂದು ಹೇಳಲಾಗುತ್ತಿತ್ತು. ಈಗ 34 ಬಸ್ಸುಗಳು ಸೇರ್ಪಡೆಗೊಂಡಿವೆ.[ಹೊಸ 241 ಟಾಟಾ ಬಸ್ ಗಳಿಗೆ ಸಿದ್ದರಾಮಯ್ಯರಿಂದ ಚಾಲನೆ]

More buses added to fleet of Tumakuru city bus services

ಹೊಸದಾಗಿ ಬಂದಿರುವ 34 ಬಸ್‌ಗಳು ಹೈಟೆಕ್ ಆಗಿವೆ. ಸದ್ಯ, ನಗರ ಇರುವ ಬಸ್ಸುಗಳಿಗಿಂತ ಚೆನ್ನಾಗಿವೆ. 34 ಬಸ್ಸುಗಳನ್ನು ಯಾವ ಮಾರ್ಗದಲ್ಲಿ ಓಡಿಸಲಾಗುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ.[ಬೆಂಗಳೂರು-ಕುಕ್ಕೆ ಸುಬ್ರಮಣ್ಯಕ್ಕೆ ಸ್ಲೀಪರ್ ಬಸ್ ಸೇವೆ]

English summary
34 KSRTC bus added to fleet of Tumakuru city bus service. Minister T.B.Jayachandra and MP Muddahanumegowda inaugurated new city buses service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X