ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಸಿ.ಟಿ ರವಿ ಕಾನೂನಿಗೆ ತಲೆಬಾಗಿ ಶಿಕ್ಷೆ ಅನುಭವಿಸಲಿ : ಟ್ವೀಟ್ಸ್

|
Google Oneindia Kannada News

ತುಮಕೂರು, ಫೆಬ್ರವರಿ 19: ಚಿಕ್ಕಮಗಳೂರಿನ ಶಾಸಕ ಸಿಟಿ ರವಿ ಅವರಿದ್ದ ವಾಹನ ಇಂದು ನಸುಕಿನಲ್ಲಿ ಅಪಘಾತಕ್ಕೀಡಾಗಿದೆ. ಇಬ್ಬರನ್ನು ಬಲಿ ಪಡೆದ ಸಿಟಿ ರವಿ ಅವರಿಗೆ ಧಿಕ್ಕಾರ ಎಂದು ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಶಾಸಕ ಸಿಟಿ ರವಿ ಅವರು ವಿಡಿಯೋ ಸಂದೇಶದ ಮೂಲಕ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಸಿಟಿ ರವಿ ಅವರು ಘಟನಾ ಸ್ಥಳದಿಂದ ತ್ವರಿತವಾಗಿ ಬೇರೊಂದು ವಾಹನ ಹತ್ತಿ ಬೆಂಗಳೂರಿಗೆ ತೆರಳಿದ್ದೇಕೆ? ಚೆನ್ನೈನಲ್ಲಿ ಅಂಥಾ ಕಾರ್ಯಕ್ರಮ ಏನಿತ್ತು? ಮೃತರ ಬಗ್ಗೆ ಕನಿಕರವಿಲ್ಲವೇ? ಕಾನೂನಿಗೆ ತಲೆ ಬಾಗಿ ಶಿಕ್ಷೆ ಅನುಭವಿಸಿ ಎಂದು ಟ್ವಿಟ್ಟರ್ ನಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲ್ಲೂರು ಪ್ರವಾಸಕ್ಕೆ ತೆರಳಿದ್ದ ಯುವಕರ ಗುಂಪೊಂದು ಮಾರ್ಗ ಮಧ್ಯದಲ್ಲಿ ಹೆದ್ದಾರಿಯ ಬದಿಯಲ್ಲಿ ಕಾರುಗಳನ್ನು ನಿಲ್ಲಿಸಿ ಮೂತ್ರ ವಿಸರ್ಜನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ಸಿಟಿ ರವಿ ಅವರಿದ್ದ ವಾಹನವು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮಿಕ್ಕ ಕೆಲವರಿಗೆ ಗಾಯಗಳಾಗಿವೆ.

ಬಿಜೆಪಿ ಶಾಸಕ ಸಿಟಿ ರವಿ ಅವರಿದ್ದ ಕಾರು ಡಿಕ್ಕಿ: ಇಬ್ಬರ ದುರ್ಮರಣಬಿಜೆಪಿ ಶಾಸಕ ಸಿಟಿ ರವಿ ಅವರಿದ್ದ ಕಾರು ಡಿಕ್ಕಿ: ಇಬ್ಬರ ದುರ್ಮರಣ

ಘಟನೆ ಬಗ್ಗೆ ಸಾರ್ವಜನಿಕರಿಂದ ಗೊಂದಲ, ಆಕ್ರೋಶಭರಿತ ಪ್ರತಿಕ್ರಿಯೆಗಳು ಬರುತ್ತಿವೆ. ಸಿಟಿ ರವಿ ಹಾಗೂ ಅವರ ವಾಹನ ಚಾಲಕ ಆಕಾಶ್ ಮದ್ಯಪಾನ ಮಾಡಿದ್ದರು, ಅಪಘಾತ ಸ್ಥಳದಲ್ಲಿ ಹೆಚ್ಚು ಹೊತ್ತು ಇರಲಿಲ್ಲ ಎಂಬ ಆರೋಪಗಳನ್ನು ಮಾಡಲಾಗಿದೆ. ಆದರೆ, ಇದೆಲ್ಲವನ್ನು ಸಿಟಿ ರವಿ ಅವರು ಅಲ್ಲಗೆಳೆದಿದ್ದಾರೆ.

Array

ಸಿಟಿ ರವಿ ಅವರು ಘಟನೆ ನಡೆದ ಸಂದರ್ಭದಲ್ಲಿ

ಕುಣಿಗಲ್ ತಾಲೂಕಿನ ಹೆದ್ದಾರಿಯಲ್ಲಿ ಕಾರು ಅಪಘಾತ ನಡೆದಾಗ ನಿದ್ದೆ ಮಾಡುತ್ತಿದ್ದೆ. ಕಾರಿನಿಂದ ಕೆಳಗಿಳಿದು ನೋಡಿದಾಗ ಇಬ್ಬರು ಮೃತರಾಗಿದ್ದರು ಎಂದು ಶಾಸಕ ಸಿಟಿ ರವಿ ಹೇಳಿದ್ದಾರೆ.

ಸಿಟಿ ರವಿ ಕಾರು ಅಪಘಾತ ಪ್ರಕರಣ: ಬಿಜೆಪಿ ನೀಡಿದ ಸ್ಪಷ್ಟೀಕರಣವೇನು? ಸಿಟಿ ರವಿ ಕಾರು ಅಪಘಾತ ಪ್ರಕರಣ: ಬಿಜೆಪಿ ನೀಡಿದ ಸ್ಪಷ್ಟೀಕರಣವೇನು?

ಅನಂತಕುಮಾರ್ ಬೆಂಗಾವಲು ವಾಹನ

ಅನಂತಕುಮಾರ್ ಹೆಗಡೆ ಅವರ ಕಾರು ಡಿಕ್ಕಿ ಹೊಡೆದ ಘಟನೆಯನ್ನು ನೆನಪಿಸಿದ ಸಾರ್ವಜನಿಕರು, ಶಿರಸಿಯಿಂದ ಹೊನ್ನಾವರಕ್ಕೆ ಅನಂತಕುಮಾರ್ ಅವರು ಹೋಗುವಾಗ ಯಾಣ ಕ್ರಾಸ್ ಬಳಿ ಅನಂತ್ ಕುಮಾರ್ ಅವರ ಬೆಂಗಾವಲು ವಾಹನಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ಈ ಘಟನೆಗೂ ಸಿದ್ದರಾಮಯ್ಯ ಸರ್ಕಾರ ಕಾರಣ ಎಂದು ದೂರಲಾಗಿತ್ತು.

ಕಾರು ಅಪಘಾತ ಪ್ರಕರಣ: ವಿಡಿಯೋ ಮೂಲಕ ಸಿಟಿ ರವಿ ಪ್ರತಿಕ್ರಿಯೆ ಕಾರು ಅಪಘಾತ ಪ್ರಕರಣ: ವಿಡಿಯೋ ಮೂಲಕ ಸಿಟಿ ರವಿ ಪ್ರತಿಕ್ರಿಯೆ

ಶಾಸಕರಾಗಿ ಸರಿಯಾಗಿ ನಡೆದುಕೊಳ್ಳಬೇಕಿತ್ತು.

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸದೆ ಅಲ್ಲಿಂದ ಎಲ್ಲಿಗೆ ತೆರಳಿದಿರಿ? ಇದು ಜವಾಬ್ದಾರಿಯುತ ಶಾಸಕರು ಮಾಡುವ ಕೆಲಸವೇ? ಎಂದು ಸಿಟಿ ರವಿ ಅವರನ್ನು ಪ್ರಶ್ನಿಸಲಾಗಿದೆ.

ಕಾನೂನು ಎಲ್ಲರಿಗೂ ಒಂದೇ

ಕಾನೂನು ಎಲ್ಲರಿಗೂ ಒಂದೇ ಶಾಸಕನಾಗಿರಲಿ, ಜನಸಾಮಾನ್ಯನಾಗಿರಲಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲೇ ಬೇಕು. ಇವರ ಅಜಾಗರೂಕತೆಯಿಂದ ಇಬ್ಬರು ಅಮಾಯಕರನ್ನು ಬಲಿತೆಗೆದುಕೊಂಡಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಸಿಟಿ ರವಿ ಕುಡಿದಿರಲಿಲ್ಲ

ಶಾಸಕ ಸಿಟಿ ರವಿ ಅವರಾಗಲಿ, ಅವರ ಕಾರಿನ ಚಾಲಕ ಆಕಾಶ್ ಆಗಲಿ ಪ್ರಯಾಣದ ವೇಳೆ ಕುಡಿದಿರಲಿಲ್ಲ. ಸುಮ್ಮನೆ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ ಎಂದು ಸಿಟಿ ರವಿ ಪರ ಟ್ವೀಟ್ ಗಳು ಬಂದಿವೆ.

ಸಿಟಿ ರವಿ ಅವರು ನೀಡಿದ ಸ್ಪಷ್ಟನೆ

ಅಂಬುಲೆನ್ಸ್ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವವರೆಗೂ ಮತ್ತು ಪೊಲೀಸರು ಮೃತರನ್ನು ವಶಕ್ಕೆ ಪಡೆಯುವವರೆಗೂ ನಾನು ಅಲ್ಲಿಯೇ ಇದ್ದೆ. ನಂತರ ಪೊಲೀಸ್ ಅಧಿಕಾರಿಯೇ ನನಗೆ ಹೊರಡಲು ಅನುಮತಿ ನೀಡಿದ ಮೇಲೆ ಹೊರಟೆ, ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಕೋರುತ್ತೇನೆ ಎಂದು ಸಿಟಿ ರವಿ ಹೇಳಿದ್ದಾರೆ.

English summary
Chikkamagaluru BJP MLA CT Ravi reacted for the incident in which 2 men died after his car collides with other 2 cars. But Twitterati is not happy with his act and demand him to surrender before police and face punishment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X