• search
 • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಯೋಜನೆಗೆ ಶೆಟ್ಟರ್‌ ಶಂಕುಸ್ಥಾಪನೆ

|

ತುಮಕೂರು, ಮೇ 30: ತುಮಕೂರು ಜಿಲ್ಲೆ ಹಿರೇಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ದಾಬಸಪೇಟೆ ಕೈಗಾರಿಕಾ ಪ್ರದೇಶಗಳಿಗೆ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆ ಮತ್ತು ಮೈದಾಳ ಕೆರೆಯ ಮೂಲಕ 15 ಎಂ.ಎ..ಡಿ ನೀರು ಸರಬರಾಜು ಯೋಜನೆಗೆ ಇಂದು ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರಾದ ಜಗದೀಶ್‌ ಶೆಟ್ಟರ್‌ ಅವರು ಶಂಕುಸ್ಥಾಪನೆ ನೆರವೇರಿಸಿದರು.

   Tribes life in Quarantine Days | ಲಾಕ್ ಡೌನ್ ನಿಂದ ಬಳಲುತ್ತಿದ್ದಾರೆ ಬುಡಕಟ್ಟು ಜನ | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಸದರಿ ಯೋಜನೆಯ ಮೊದಲನೇ ಹಂತದಲ್ಲಿ ಹೊನ್ನೇನಹಳ್ಳೀ ಕೆರೆಯ ಅಭಿವೃದ್ದಿ, ಇನ್‌ಟೆಕ್‌ ವೆಲ್‌, ಪಂಪ್‌ಹೌಸ್‌, ಜಾಕ್‌ವೆಲ್‌, ಲಭ್ಯವಿರುವ ಎಂ.ಎಸ್‌. ಪೈಪುಗಳ ಅಳವಡಿಕೆ ಹಾಗೂ ಇತರೆ ಕಾಮಗಾರಿಗಳನ್ನು ಒಳಗೊಂಡಂತೆ ಹಿರೇಹಳ್ಳೀ ಕೈಗಾರಿಕಾ ಪ್ರದೇಶಕ್ಕೆ 5 ಎಂ.ಎಲ್‌.ಡಿ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿರುತ್ತದೆ. 27.50 ಕೋಟಿಗಳ ಅಂದಾಜು ವೆಚ್ಚದಲ್ಲಿ ನಡೆಯಲಿರುವ ಈ ಕಾಮಗಾರಿಯಿಂದಾಗಿ ಈ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ಹೇಳಿದರು.

   ರಾಜ್ಯದಲ್ಲಿ ಶೇ.75 ರಷ್ಟು ಕಾರ್ಖಾನೆಗಳು ಆರಂಭ: ಜಗದೀಶ್ ಶೆಟ್ಟರ್

   ಇದಕ್ಕೂ ಮುನ್ನ ಸಚಿವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಹಾಗೂ ಶ್ರೀ ಶಿವಕುಮಾರ ಸ್ವಾಮಿಜೀಗಳ ಗದ್ದುಗೆಗೆ ಭೇಟಿ ನೀಡಿದರು.

   ಈ ಸಮಯದಲ್ಲಿ ಸಿದ್ದಲಿಂಗ ಸ್ವಾಮೀಜಿಗಳು, ತುಮಕೂರು ಉಸ್ತುವಾರಿ ಸಚಿವ ಮಾಧುಸ್ವಾಮಿ, ಸಂಸದರಾದ ಜಿ ಎಸ್‌ ಬಸವರಾಜು, ಶಾಸಕರಾದ ಜ್ಯೋತಿ ಗಣೇಶ್‌, ಗೌರಿಶಂಕರ್‌, ರಂಗನಾಥ್‌, ಮಸಾಲೆ ಜಯರಾಂ, ವೀರಭದ್ರಯ್ಯ ಹಾಗೂ ಮಾಜಿ ಸಚಿವರಾದ ಸೊಗಡು ಶಿವಣ್ಣ ಉಪಸ್ಥಿತರಿದ್ದರು.

   English summary
   Tumakuru: Jagadish Shettar lays foundation stone for providing water supply to Hirehalli, dabaspet and other Indutrial area in Tumakuru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X