ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸೋತು ಅಭ್ಯಾಸ ಇಲ್ಲದ ದೇವೇಗೌಡರು ಅರ್ಜೆಂಟ್ ನಲ್ಲಿ ಇದ್ದಾರೆ'

By ಕುಮಾರಸ್ವಾಮಿ
|
Google Oneindia Kannada News

ತುಮಕೂರು, ಸೆಪ್ಟೆಂಬರ್ 19: "ಮಾಜಿ ಪ್ರಧಾನಿ ದೇವೇಗೌಡರು ಅರ್ಜೆಂಟ್ ನಲ್ಲಿ ಇದ್ದಾರೆ. ಅವರಿಗೆ ಸೋತು, ಕೂತು ಅಭ್ಯಾಸ ಇಲ್ಲ. ಅದೊಂದು ಚಟ. ಮತ್ತೆ ಇನ್ನೊಂದು ಎಲೆಕ್ಷನ್ ಮಾಡಿಸುವ ಆಸೆ ಹೊಂದಿದ್ದಾರೆ" ಎಂದು ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ಗುರುವಾರ ಪ್ರತಿಕ್ರಿಯೆ ನೀಡಿದರು. ಇನ್ನು ಆರು ತಿಂಗಳಲ್ಲಿ ರಾಜ್ಯದಲ್ಲಿ ಆಸ್ತಿತ್ವದಲ್ಲಿ ಇರುವ ಬಿಜೆಪಿ ಸರಕಾರ ಬೀಳುತ್ತದೆ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಮಾಧುಸ್ವಾಮಿ ಹೀಗೆ ಹೇಳಿದರು.

ಹಾಸನ ಜಿಲ್ಲೆಯ ಉಸ್ತುವಾರಿ‌ ವಿಚಾರವಾಗಿ ಮಾತನಾಡಿದ ಅವರು, ಹಾಸನವು ಕರ್ನಾಟಕ ರಾಜ್ಯದ ಒಳಗಿದೆ. ಹಾಸನ ಜಿಲ್ಲೆಯನ್ನು ಯಾರಿಗೂ ಬರೆದುಕೊಟ್ಟಿಲ್ಲ. ಅದನ್ನು ನಿಭಾಯಿಸುವ ಶಕ್ತಿ‌ ನನಗಿದೆ ಎಂದು ಹೇಳಿದ ಮಾಧುಸ್ವಾಮಿ, ತುಮಕೂರಿಗಿಂತ ಹಾಸನ ನನಗೆ ‌ಚೆನ್ನಾಗಿದೆ ಎಂದರು.

ಮಧ್ಯಂತರ ಚುನಾವಣೆ ಸೂಚನೆ ಕೊಟ್ಟ ದೇವೇಗೌಡ: ಮೈತ್ರಿ ಇಲ್ಲವಂತೆಮಧ್ಯಂತರ ಚುನಾವಣೆ ಸೂಚನೆ ಕೊಟ್ಟ ದೇವೇಗೌಡ: ಮೈತ್ರಿ ಇಲ್ಲವಂತೆ

ಅಧಿಕಾರಿಗಳು ಯಾವ ರಾಜಕಾರಣಿಗಳ ಮಾತನ್ನೂ ಕೇಳಬೇಕು ಅಂತಿಲ್ಲ. ಕಾನೂನು ಹಾಗೂ ನಿಯಮದ ಮಾತು ಕೇಳಬೇಕು. ರೇವಣ್ಣ ಬೆಂಬಲ ನೀಡಬೇಕು. ಹಾನವೇನು ರೇವಣ್ಣನ ಸಾರ್ಮಾಜ್ಯವಾ? ಅಥವಾ ತುಮಕೂರು ನನ್ನ ಸಾಮ್ರಾಜ್ಯವಾ? ನನ್ನ ದೃಷ್ಟಿಯಲ್ಲಿ ಹಾಸನ ಜಿಲ್ಲೆ ಆಡಳಿತ ವಿಚಾರದಲ್ಲಿ ರೇವಣ್ಣ ಹಸ್ತಕ್ಷೇಪ ಮಾಡಲ್ಲ ಎಂದರು.

Minister J. C. Madhuswamy Criticises Deve Gowda For His Mid Term Elections Remark

ಕೇಂದ್ರದಿಂದ ನೆರೆ ಪರಿಹಾರ ಬಂದಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರದಿಂದ ಪರಿಹಾರ ಬಂದಿದೆಯೋ ಇಲ್ಲವೋ ಅನ್ನುವುದು ಪ್ರಶ್ನೆ ಅಲ್ಲ. ಸಂತ್ರಸ್ತರಿಗೆ ಪರಿಹಾರ- ಕೊಟ್ಟಿದ್ದಾರಾ ಇಲ್ಲವಾ ಎಂಬುದು ಪ್ರಶ್ನೆ. ಈಗಾಗಲೇ ಸಂತ್ರಸ್ತರಿಗೆ ಪರಿಹಾರ ಕೊಟ್ಟಿದ್ದೇವೆ. ಖಾತೆಗಳಿಗೆ ಹತ್ತು ಸಾವಿರ ರುಪಾಯಿ ಹಾಕಿದ್ದೇವೆ. ತಾತ್ಕಾಲಿಕ ಶೆಡ್ ನಿರ್ಮಾಣದ ಕೆಲಸ ನಡೆಯುತ್ತಿದೆ ಎಂದರು.

ಪ್ರಧಾನಿಗಳು ಘೋಷಣೆ ಮಾಡಿರುವ ಕಿಸಾನ್ ಸಮ್ಮಾನ್ ಯೋಜನೆ ಜತೆಗೆ ರಾಜ್ಯದಿಂದಲೂ ಹಾಣ ಹಾಕಿದ್ದೇವೆ. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದೆ. ಸಾವಿರ ಕೋಟಿ ರುಪಾಯಿ ಬಿಡುಗೆ ಮಾಡಲಾಗಿದೆ. ಮನೆ ಕಟ್ಟಲು ಮೊದಲ ಹಂತದಲ್ಲಿ ಒಂದು ಲಕ್ಷ ರುಪಾಯಿ ನೀಡಲಾಗಿದೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಸೆಕ್ಸ್‌ ವಿಡಿಯೋ ನೋಡಿದ್ದು ದೇಶದ್ರೋಹವಲ್ಲ: ಮಾಧುಸ್ವಾಮಿವಿಧಾನಸೌಧದಲ್ಲಿ ಸೆಕ್ಸ್‌ ವಿಡಿಯೋ ನೋಡಿದ್ದು ದೇಶದ್ರೋಹವಲ್ಲ: ಮಾಧುಸ್ವಾಮಿ

ಭಾಗಶಃ ಹಾನಿಯಾದ ಮನೆಗಳಿಗೆ ಐವತ್ತು ಸಾವಿರ ನೀಡುತ್ತಿದ್ದೇವೆ. ಇದರಲ್ಲಿ ಕಾಂಗ್ರೆಸ್ ‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಹೇಳಿದ ಹಾಗೆ ಆಡಳಿತ ನಡೆಸಲು ಆಗುವುದಿಲ್ಲ. ನಾನು ಹೇಳಿದ್ದು ಸುಳ್ಳಾದರೆ ಮಾಧ್ಯಮದವರು ಹೋಗಿ ಪರಿಶೀಲಿಸಿ ಎಂದು ಜೆ. ಸಿ. ಮಾಧುಸ್ವಾಮಿ ಹೇಳಿದರು.

English summary
Karnataka law minister J. C. Madhuswamy criticises former prime minister H. D. Deve Gowda recent remark on mid term elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X