ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್‌ಬುಕ್‌ ಹಿಂದುತ್ವವಾದಿ ಮಧುಗಿರಿ ಮೋದಿ ಬಂಧನ

|
Google Oneindia Kannada News

ತುಮಕೂರು, ಫೆಬ್ರವರಿ 26: ಸಾಮಾಜಿಕ ಜಾಲತಾಣದಲ್ಲಿ ತನ್ನ ಅತ್ಯುಗ್ರ ಹಿಂದು ಪರ ಹೇಳಿಕೆಗಳಿಂದ ಖ್ಯಾತವಾಗಿರುವ (?!) ಮಧುಗಿರಿ ಮೋದಿಯನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.

ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಹೊನ್ನಾಪುರ ಗ್ರಾಮದ ಅತುಲ್ ಕುಮಾರ್ ಅಲಿಯಾಸ್ ಮಧುಗಿರಿ ಮೋದಿ ಎಂಬಾತ ಫೆಬ್ರವರಿ 10 ರಂದು ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿಗಳ ಬಗ್ಗೆ ಹಾಗೂ ಇತರ ಕೋಮಿನ ಬಗ್ಗೆ ಅವಮಾನಕವಾರಗಿ ಮಾತನಾಡಿ ವಿಡಿಯೋ ಹಾಕಿದ್ದ ಹಾಗಾಗಿ ಈತನ ವಿರುದ್ಧ ದೂರು ದಾಖಲಾಗಿತ್ತು.

ತನ್ನ ವಿರುದ್ಧ ದೂರು ದಾಖಲಾಗಿದ್ದ ಬಗ್ಗೆ ಹಾಗೂ ತನ್ನ ಮನೆಗೆ ಪೊಲೀಸರು ಭೇಟಿ ನೀಡಿದ್ದ ಬಗ್ಗೆ ಅಜ್ಞಾತ ಸ್ಥಳದಿಂದ ಮಧುಗಿರಿ ಮೋದಿ ಪೋಸ್ಟ್ ಒಂದನ್ನು ಹಾಕಿ, ಪೊಲೀಸರನ್ನು ಸಹ ಅಣಕಿಸಿದ್ದ. ನಂತರ ಪೊಲೀಸರು ಈತನ ಹುಡುಕಾಟ ತೀವ್ರಗೊಳಿಸಿದ್ದರು.

ಮಹಾರಾಷ್ಟ್ರ, ಆಂಧ್ರದಲ್ಲಿ ಅಡಗಿದ್ದ ಶಂಕೆ

ಮಹಾರಾಷ್ಟ್ರ, ಆಂಧ್ರದಲ್ಲಿ ಅಡಗಿದ್ದ ಶಂಕೆ

ಮಧುಗಿರಿ ಮೋದಿ ಮಹಾರಾಷ್ಟ್ರ ಅಥವಾ ಆಂಧ್ರ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು, ಅಂತೆಯೇ ಈತನ ಬಂಧನಕ್ಕೆ ಆಂಧ್ರಪ್ರದೇಶಕ್ಕೆ ಒಂದು ತಂಡ ಹಾಗೂ ಮಹಾರಾಷ್ಟ್ರಕ್ಕೆ ಒಂದು ತಂಡ ತೆರಳಿತ್ತು.

ಆಂಧ್ರದ ಅನಂತಪುರದಲ್ಲಿ ಅಡಗಿದ್ದ ಮೋದಿ

ಆಂಧ್ರದ ಅನಂತಪುರದಲ್ಲಿ ಅಡಗಿದ್ದ ಮೋದಿ

ಆಂಧ್ರ ಪ್ರದೇಶದ ಅನಂತಪುರದ ಆಜಾದ್ ನಗರದಲ್ಲಿ ಅಡಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಅಲ್ಲಿಂದಲೂ ಕೆಲವು ವಿಡಿಯೋಗಳನ್ನು ಈತ ಫೇಸ್‌ಬುಕ್‌ನಲ್ಲಿ ಹಾಕಿದ್ದ.

ಹಲವು ಠಾಣೆಗಳಲ್ಲಿ ಈತನ ಮೇಲೆ ಪ್ರಕರಣ

ಹಲವು ಠಾಣೆಗಳಲ್ಲಿ ಈತನ ಮೇಲೆ ಪ್ರಕರಣ

ಈತನ ಮೇಲೆ ಈಗಾಗಲೇ ತುಮಕೂರು ಜಿಲ್ಲೆಯ ಜಯನಗರ ಠಾಣೆ, ಮಧುಗಿರಿ, ಚಿತ್ರದುರ್ಗದ ಗ್ರಾಮಾಂತರ ಠಾಣೆ, ಕೊಪ್ಪಳದ ಗಂಗಾವತಿ ಗ್ರಾಮಾಂತರ ಠಾಣೆ, ಶಿವಮೊಗ್ಗ ಜಿಲ್ಲೆಯ ಜಯನಗರ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಇದೇ ರೀತಿ ಪ್ರಕರಣಗಳು ದಾಖಲಾಗಿವೆ.

ಬೈಕ್‌ನಲ್ಲಿ ಪ್ರವಾಸ ಮಾಡಿ ಬಿಜೆಪಿ ಪರ ಪ್ರಚಾರ

ಬೈಕ್‌ನಲ್ಲಿ ಪ್ರವಾಸ ಮಾಡಿ ಬಿಜೆಪಿ ಪರ ಪ್ರಚಾರ

ತನ್ನ ಪ್ರಖರ ಹಿಂದೂಪರ ಮತ್ತು ಇತರ ಕೋಮಿನ ವಿರುದ್ಧ ಮಾತುಗಳಿಂದಾಗಿ ಮಧುಗಿರಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತರಾಗಿದ್ದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತನ್ನ ಬೈಕ್‌ ಮೇಲೆ ತೆರಳಿ ಬಿಜೆಪಿ ಪರವಾಗಿ ದೇಶವ್ಯಾಪಿ ಪ್ರಚಾರ ಮಾಡಿದ್ದಾಗಿ ಹೇಳಿಕೊಂಡಿದ್ದರು. ಮೋದಿ ಅವರ ಕ್ಷೇತ್ರ ವಾರಣಾಸಿಯಲ್ಲಿ ಸಹ ಪ್ರಚಾರ ಮಾಡಿದ್ದರು.

ಹಿಂದೆಯೂ ಪೊಲೀಸರು ಎಚ್ಚರಿಕೆ ನೀಡಿದ್ದರು

ಹಿಂದೆಯೂ ಪೊಲೀಸರು ಎಚ್ಚರಿಕೆ ನೀಡಿದ್ದರು

ಅತುಲ್ ಕುಮಾರ್ ಅಲಿಯಾಸ್ ಮಧುಗಿರಿ ಮೋದಿಯನ್ನು ಹಿಂದೆಯೂ ಪೊಲೀಸರು ಎಚ್ಚರಿಕೆ ನೀಡಿದ್ದರು. ಈತನ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆಗಳು ನಡೆದಿದ್ದವು. ಹಲವು ಆಕ್ಷೇಪಾರ್ಹ ವಿಡಿಯೋಗಳನ್ನು ಈತ ಫೇಸ್‌ಬುಕ್‌ನಲ್ಲಿ ಹಾಕಿದ್ದ.

English summary
Madugiri Modi arrested for posting communal harmony disturbing Facebook post. He is known for his pro Hindu speeches in Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X